ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯಬಹುದು
ಬೆಂಗಳೂರು, ಮಾರ್ಚ್ 14: ಮಹಾಮಾರಿ ಕೊರೊನಾ ಈಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.
ಪ್ರತಿ ರಾಜ್ಯಗಳಲ್ಲಿಯೂ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಆ ಆಸ್ಪತ್ರೆಗಳ ಹೊರತಾಗಿ ಬೇರೆ ಆಸ್ಪತ್ರೆಗಳಲ್ಲಿ ನಿಮಗೆ ಚಿಕಿತ್ಸೆ ಲಭ್ಯವಾಗುವುದಿಲ್ಲ.
ಇಡೀ ರಾಜ್ಯಾದ್ಯಂತ ಒಂದು ವಾರಗಳ ಕಾಲ ಶಾಲಾ, ಕಾಲೇಜು, ಮಾಲ್, ಚಿತ್ರಮಂದಿರ, ಹೋಟೆಲ್ ಸೇರಿದಂತೆ ಎಲ್ಲವನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.
ಶನಿವಾರ ಹಾಗೂ ಭಾನುವಾರ ವೀಕೆಂಡ್ ಸಂಭ್ರಮದ ಹೊತ್ತಲ್ಲೇ ಮಾಲ್‌ಗಳು ಬಂದ್ ಆಗಿರೋದು ರಾಜಧಾನಿ ಜನರನ್ನು ಕಟ್ಟಿಹಾಕಿದಂತೆ ಮಾಡಿಬಿಟ್ಟಿದೆ. ವ್ಯಾಪಾರಸ್ತರ ಪಾಡಂತೂ ಹೇಳತೀರದಾಗಿದೆ. ಮಾಲ್ ಸಿಬ್ಬಂದಿ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿದ್ದಾರೆ. ಥಿಯೇಟರ್‌ಗಳಲ್ಲಿ ಪ್ರದರ್ಶನಗಳು ಇಲ್ಲದ ಕಾರಣ, ಅಲ್ಲಿಯೂ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ಮಾಡಿಸಲಾಗುತ್ತಿದೆ.
ಇನ್ನೊಂದೆಡೆ ಪರ ಊರುಗಳಿಗೆ ಹೊರಡಲು ಜನರು ಹಿಂಜರಿಯುತ್ತಿದ್ಧಾರೆ. ಹೀಗಾಗಿ, ತಮ್ಮ ತಮ್ಮ ಮನೆಗಳಲ್ಲೇ ಸ್ವಯಂ ದಿಗ್ಬಂಧನ ಹಾಕಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಗರದ ನಾಗರಿಕರಿದ್ದಾರೆ.
ಹಾಗಾದರೆ ಬೆಂಗಳೂರಲ್ಲಿ ಯಾವ್ಯಾವ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ದೊರೆಯಲಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ
ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಲಭ್ಯವಿದೆ. ವಿಳಾಸ: 98, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು, ಕರ್ನಾಟಕ 560017. ದೂರವಾಣಿ ಸಂಖ್ಯೆ-080-25211200.

ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸಿಷನ್
ವಿಳಾಸ: ಸೋಮೇಶ್ವನಗರ 1ನೇ ರಸ್ತೆ, ಧರ್ಮರಾಮ್ ಕಾಲೇಜು ಪೋಸ್ಟ್ , 1ನೇ ಬ್ಲಾಕ್, ಹೊಂಬೇಗೌಡನಗರ, ಬೆಂಗಳೂರು, 560029, ದೂರವಾಣಿ ಸಂಖ್ಯೆ-080-26088500.

ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ದೊರೆಯಲಿದೆ. ವಿಳಾಸ-154,9 ಬನ್ನೇರುಘಟ್ಟ ಮುಖ್ಯರಸ್ತೆ, ಐಐಎಂ ಎದುರು, ಸಹ್ಯಾದ್ರಿ ಲೇಔಟ್, ಪಾಂಡುರಂಗ ನಗರ, ಬೆಂಗಳೂರು 560076.ದೂ.080-66214444.

ನಾರಾಯಣ ಹೆಲ್ತ್
ವಿಳಾಸ: 258/ಎ , ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ , ಆನೇಕಲ್ ತಾಲೂಕು, ಹೊಸೂರು ರಸ್ತೆ, ಬೆಂಗಳೂರು, ಕರ್ನಾಟಕ 560099. ದೂ.080-67506870ಗೆ ಕರೆ ಮಾಡಬಹುದಾಗಿದೆ.












Click it and Unblock the Notifications