ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಸಂಚಾರ: ಬಿಎಂಟಿಸಿ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಮೇ 18: ಇಂದಿನಿಂದ ಕೆಲಸ ಆರಂಭಿಸುವಂತೆ ತನ್ನ ಸಿಬ್ಬಂದಿಗಳಿಗೆ ಬಿಎಂಟಿಸಿ ಆದೇಶ ನೀಡಿತ್ತು. ಕೆಲಸ ಆರಂಭಿಸುವ ಮುನ್ನ ಸಿಬ್ಬಂದಿಗಳಿಗೆ ಬಿಎಂಟಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ.

ಬಿಎಂಟಿಸಿ ಕಂಡಕ್ಟರ್, ಡ್ರೈವರ್, ತಾಂತ್ರಿಕ ಸಿಬ್ಬಂದಿ ಹಾಗೂ ಡಿಪೋಗಳ ಅಧಿಕಾರಿಗಳಿಗೆ ಬಿಎಂಟಿಸಿ ವಿಶೇಷವಾಗಿ ಮಾರ್ಗಸೂಚಿ ಸಿದ್ದಪಡಿಸಿದೆ. ಪ್ರತಿಯೊಬ್ಬ ಸಿಬ್ಬಂದಿಯೂ ಮಾರ್ಗಸೂಚಿಯಲ್ಲಿನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆದೇಶಿಸಿದ್ದಾರೆ.

New Guidelines Released For BMTC Staff

ಬಿಎಂಟಿಸಿ ನೀಡಿರುವ ಹೊಸ ಮಾರ್ಗಸೂಚಿ ಇಲ್ಲಿದೆ:

* ಪ್ರತಿಯೊಬ್ಬ ಸಿಬ್ಬಂದಿಯು ವೈಯಕ್ತಿಕ ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡಬೇಕು.

* ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು.

ಬಿಎಂಟಿಸಿ ಕಾರ್ಯಾರಂಭ ಮಾಡುವ ಆತುರದಲ್ಲಿ ಎಡವಟ್ಟು ಬಿಎಂಟಿಸಿ ಕಾರ್ಯಾರಂಭ ಮಾಡುವ ಆತುರದಲ್ಲಿ ಎಡವಟ್ಟು

* ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬ ಸಿಬ್ಬಂದಿಯನ್ನು ಪ್ರವೇಶ ದ್ವಾರದ ಬಳಿಯೇ ಥರ್ಮಲ್ ಟೆಸ್ಟಿಂಗ್ ಗೆ ಒಳಪಡಿಸಬೇಕು.

* ಸಾರಿಗೆ ನೌಕರರು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಕನಿಷ್ಠ ಆರು ಅಡಿ ಸಾಮಾಜಿಕ ಅಂತರವನ್ನು ಪಾಲಿಸಬೇಕು.

* ಎಲ್ಲಾ ಶಾಖೆಗಳಲ್ಲೂ ಸ್ಯಾನಿಟೈಸರ್ ಅಥವಾ ಸೋಪ್ ವ್ಯವಸ್ಥೆ ಕಲ್ಪಿಸಬೇಕು.

English summary
New guidelines released for BMTC staff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X