ಬೆಂಗಳೂರಿನ ಪಾದರಾಯನಪುರದಲ್ಲಿ ಎಲ್ಲಾ ನಿವಾಸಿಗಳಿಗೂ ಕೊರೊನಾ ಪರೀಕ್ಷೆ
ಬೆಂಗಳೂರು, ಮೇ 15: ಪಾದರಾಯನಪುರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ನಾಗರಿಕಗೂ ಕೊರೊನಾ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.
ಗೋರಿಪಾಳ್ಯ ರೆಫೆರಲ್ ಆಸ್ಪತ್ರೆಯಲ್ಲಿ ಸ್ವ್ಯಾಬ್ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದೆ. ಅದರ ಜೊತೆಗೆ ಕೆಎಸ್‌ಆರ್‌ಟಿಸಿ 3 ಸಂಚಾರಿ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಯಲಿದೆ. ಅರಾಫತ್ ನಗರದ ನಿವಾಸಿಗಳಿಗೆ ಸಂಚಾರಿ ಲ್ಯಾಬ್‌ನಲ್ಲಿ ಗುರುವಾರದಿಂದ ಪರೀಕ್ಷೆ ನಡೆಯುತ್ತಿದೆ. ಪಾಸಿಟಿವ್ ಬಂದಿರುವ ಆಸುಪಾಸಿನ ನಿವಾಸಿಗಳಿಗೆ ಇಂದು ಪರೀಕ್ಷೆ ನಡೆಯಲಿದೆ.
24 ಗಂಟೆಯಲ್ಲಿ 1754 ಸಾವು, ಅಮೆರಿಕದಲ್ಲಿ ಸಾವಿನ ಸಂಖ್ಯೆ ಏರಿಕೆ
ಟೆಸ್ಟ್ ಕುರಿತು ಆಟೋ ರಿಕ್ಷಾಗಳಲ್ಲಿ ಮೈಕ್ ಅಳವಡಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಶಿವಾಜಿನಗರದಲ್ಲಿ 11 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ವಾರ್ಡ್ ಬಾಯ್ ಕೇಸ್ 653 ಇದ್ದ ಕಟ್ಟಡದಲ್ಲೇ ಇದ್ದಾರೆ 75 ಮಂದಿ, ಇದರಲ್ಲಿ 20 ಜನರ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳಿಸಿಕೊಡಲಾಗಿತ್ತು.
20 ರಲ್ಲಿ 11 ಮಂದಿಗೆ ಪಾಸಿಟಿವ್ ಆಗಿದೆ , ವಾರ್ಡ್ ಬಾಯ್ ಕೇಸ್ 653 ಇಂದ ಒಟ್ಟು 15 ಮಂದಿಗೆ ಪಾಸಿಟಿವ್ ಕೇಸ್ 653 ಇದ್ದ ಕಟ್ಟಡದ ಎರಡನೇ ಫ್ಲೋರ್ ನಲ್ಲಿದ್ದವರಿಗೂ ಕೊರೊನಾ ಸೋಂಕು ತಗುಲಿದೆ.
ಈಗ ಪಾಸಿಟಿವ್ ಆಗಿರುವ 11 ಮಂದಿಯಿಂದ ಶಿವಾಜಿನಗರದಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆಯಿಂದ ಬಿಬಿಎಂಪಿಯು ಪರೀಕ್ಷೆಯನ್ನು ಆರಂಭಿಸಿದೆ. 60 ವರ್ಷ ಮೇಲ್ಪಟ್ಟ ಹಾಗೂ ಗರ್ಭಿಣಿಯರ ಸ್ಯಾಂಪಲ್ ಕಲೆಕ್ಟ್ ಮಾಡಿ ವೈದ್ಯರು ರಾಂಡಮ್ ಆಗಿ ಗಂಟಲು ದ್ರವ ಸಂಗ್ರಹಿಸಿದ್ದರು.
ಈ ವರದಿ ಇಂದು ಕೈ ಸೇರಲಿದೆ, ಒಂದು ವೇಳೆ 11 ಜನರಲ್ಲಿ ಸೊಂಕು ಕಾಣಿಸಿಕೊಂಡರೆ ಪಾದರಾಯನಪುರದಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಲಾಗುತ್ತದೆ.
ಹೊಂಗಸಂದ್ರದಲ್ಲಿ ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ಕಾರಣ ತಿಳಿದುಬಂದಿಲ್ಲ, ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶವವನ್ನು ಪರೀಕ್ಷೆಗೊಳಪಡಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.