ಬೆಂಗಳೂರು ವಾರ್ಡ್ ವಾರ್ಡಿಗೂ ಕೊವಿಡ್: 679 ಹೊಸ ಕಂಟೇನ್ಮೆಂಟ್ ಝೋನ್!
ಬೆಂಗಳೂರು, ಜುಲೈ.27: ಕೊರೊನಾವೈರಸ್ ಸೋಂಕಿನ ಹರಡುವಿಕೆ ಮತ್ತು ಅಟ್ಟಹಾಸಕ್ಕೆ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯು ಮಿತಿ ಮೀರಿ ಬೆಳೆಯುತ್ತಿದೆ. ರಾಜ್ಯದ ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ರಾಜಧಾನಿಯದ್ದೇ ಸಿಂಹಪಾಲು.
Recommended Video
ಬೆಂಗಳೂರಿನಲ್ಲಿ 1950 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 45453ಕ್ಕೆ ಏರಿಕೆಯಾಗಿದೆ. ಈ ಪೈಕಿ 11405 ಸೋಂಕಿತರು ಗುಣಮುಖರಾಗಿದ್ದರೆ, 33156 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನ ಬೆಂಗಳೂರಿನಲ್ಲಿ ಮಹಾಮಾರಿಗೆ 29 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 891ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಂದೇ ದಿನ 5199 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 96141ಕ್ಕೆ ಏರಿಕೆಯಾಗಿದೆ. ಇನ್ನು, ಕಳೆದ 24 ಗಂಟೆಗಳಲ್ಲಿ 12531 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 21,034 ಜನರಿಗೆ RT-PCR ತಪಾಸಣೆ ನಡೆಸಲಾಗಿದೆ. ಒಂದೇ ದಿನ 33565 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 11,76,827 ಜನರಿಗೆ ಕೊವಿಡ್-19 ತಪಾಸಣೆ ಮಾಡಲಾಗಿದೆ.

ಒಂದೇ ದಿನ 679 ಕಂಟೇನ್ಮೆಂಟ್ ಝೋನ್ ಗಳ ಗುರುತು
ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಯಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಒಂದೇ ದಿನದಲ್ಲಿ ಹೊಸದಾಗಿ 679 ಸಕ್ರಿಯ ಕಂಟೇನ್ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದೆ. ಇದರಿಂದ ಬೆಂಗಳೂರು ನಗರದಲ್ಲೇ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆಯು 15411ಕ್ಕೆ ಏರಿಕೆಯಾಗಿದೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತಿಹೆಚ್ಚು ಅಂದರೆ 3935 ಕಂಟೇನ್ಮೆಂಟ್ ಝೋನ್ ಗಳನ್ನು ಗುರುತಿಸಿದ್ದು, ಬೆಂಗಳೂರು ಪೂರ್ವದಲ್ಲಿ 2537, ಬೆಂಗಳೂರು ಪಶ್ಚಿಮದಲ್ಲಿ 1770 ಕಂಟೇನ್ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದೆ.

ಯಾವ ಪ್ರದೇಶದಲ್ಲಿ ಎಷ್ಟು ಕಂಟೇನ್ಮೆಂಟ್ ಝೋನ್?
ಬೆಂಗಳೂರಿನಲ್ಲಿ ಜುಲೈ.26ರಂದು ಬಿಬಿಎಂಪಿ ಗುರುತುಪಡಿಸಿದ ಸಕ್ರಿಯ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆಯು ಹೀಗಿದೆ. ಬೊಮ್ಮನಹಳ್ಳಿ 1548, ರಾಜರಾಜೇಶ್ವರಿ ನಗರ 977, ಮಹದೇವಪುರ 937, ಯಲಹಂಕ 437, ದಾಸರಹಳ್ಳಿ 318, ಸಕ್ರಿಯ ಕಂಟೇನ್ಮೆಂಟ್ ಝೋನ್ ಗಳನ್ನು ಗುರುತಿಸಲಾಗಿದೆ. ಬೆಂಗಳೂರು ಪಶ್ಚಿಮ 751, ಬೆಂಗಳೂರು ಪೂರ್ವ 645, ಬೆಂಗಳೂರು ದಕ್ಷಿಣ ಭಾಗದಲ್ಲಿ 435 ಕಂಟೇನ್ಮೆಂಟ್ ಝೋನ್ ಗಳಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ ಎಂದು ತಿಳಿದು ಬಂದಿದೆ.

ಜಿಲ್ಲಾವಾರು ಕೊವಿಡ್-19 ಸೋಂಕಿತ ಪ್ರಕರಣ
ರಾಜ್ಯದಲ್ಲಿ ಒಟ್ಟು 5199 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, 30 ಜಿಲ್ಲೆಗಳಲ್ಲೂ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 1950, ಬಳ್ಳಾರಿ 579, ಮೈಸೂರು 230, ಬೆಂಗಳೂರು ಗ್ರಾಮಾಂತರ 213, ದಕ್ಷಿಣ ಕನ್ನಡ 199, ಉಡುಪಿ 169, ಧಾರವಾಡ 165, ಹಾಸನ 164, ಬೆಳಗಾವಿ 163, ಕಲಬುರಗಿ 152, ವಿಜಯಪುರ 132, ರಾಯಚೂರು 131, ದಾವಣಗೆರೆ 89, ಉತ್ತರ ಕನ್ನಡ 85, ಚಿಕ್ಕಬಳ್ಳಾಪುರ 81, ಬೀದರ್ 77, ಮಂಡ್ಯ 64, ಗದಗ 61, ಚಿಕ್ಕಮಗಳೂರು 61, ಯಾದಗಿರಿ 56, ಚಿತ್ರದುರ್ಗ 53, ಕೋಲಾರ 49, ಹಾವೇರಿ 47, ತುಮಕೂರು 46, ಬಾಗಲಕೋಟೆ 41, ಕೊಪ್ಪಳ 40, ಶಿವಮೊಗ್ಗ 39, ಚಾಮರಾಜನಗರ 28, ಕೊಡಗು 20, ರಾಮನಗರ 15 ಮಂದಿಗೆ ಸೋಂಕು ಅಂಟಿಕೊಂಡಿದೆ.

632 ಕೊರೊನಾವೈರಸ್ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
ಕರ್ನಾಟಕದಲ್ಲಿ ಒಟ್ಟು 632 ಕೊರೊನಾವೈರಸ್ ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಬೆಂಗಳೂರು 353, ಧಾರವಾಡ 37, ಕಲಬುರಗಿ 29, ಹಾಸನ 20, ಬಳ್ಳಾರಿ 19, ಕೊಪ್ಪಳ 19, ಗದಗ 18, ಮಂಡ್ಯ 17, ರಾಯಚೂರು 17, ಮೈಸೂರು 12, ತುಮಕೂರು 12, ಬೀದರ್ 11, ಬೆಳಗಾವಿ 9, ದಾವಣಗೆರೆ 8, ಶಿವಮೊಗ್ಗ 8, ದಕ್ಷಿಣ ಕನ್ನಡ 7, ಚಾಮರಾಜನಗರ 6, ಹಾವೇರಿ 5, ಉಡುಪಿ 5, ಬಾಗಲಕೋಟೆ 4, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 4, ಉತ್ತರ ಕನ್ನಡ 4, ಕೊಡಗು 2, ಚಿಕ್ಕಮಗಳೂರು 1, ವಿಜಯಪುರ 1 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಒಂದೇ ದಿನ 2088 ಸೋಂಕಿತರು ಗುಣಮುಖ
ಕರ್ನಾಟಕದಲ್ಲಿ ಗುರುವಾರ ಬರೋಬ್ಬರಿ 2088 ಮಂದಿಗೆ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 647 ಮಂದಿ ಗುಣಮುಖರಾಗಿದ್ದಾರೆ. ಬೆಳಗಾವಿ 173, ಬಾಗಲಕೋಟೆ 153, ದಕ್ಷಿಣ ಕನ್ನಡ 147, ವಿಜಯಪುರ 143, ಕಲಬುರಗಿ 132, ಉಡುಪಿ 125, ಉತ್ತರ ಕನ್ನಡ 91, ಶಿವಮೊಗ್ಗ 67, ದಾವಣಗೆರೆ 57, ಧಾರವಾಡ 56, ಯಾದಗಿರಿ 46, ಚಿಕ್ಕಬಳ್ಳಾಪುರ 37, ಬೀದರ್ 32, ಕೊಪ್ಪಳ 29, ಗದಗ 26, ಮಂಡ್ಯ 25, ರಾಯಚೂರು 22, ಚಾಮರಾಜನಗರ 20, ಬಳ್ಳಾರಿ 17, ಮೈಸೂರು 15, ಕೊಡಗು 10, ಕೋಲಾರ 8, ಚಿಕ್ಕಮಗಳೂರು 5, ಹಾವೇರಿ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ 35838 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications