• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭ

By Nayana
|
   ಕೇಂದ್ರ ಸರ್ಕಾರದ ವಿರುದ್ದ ಹೋರಾಟಕ್ಕಿಳಿದ ಕಾಂಗ್ರೆಸ್ | Oneindia Kannada

   ಬೆಂಗಳೂರು, ಸೆಪ್ಟೆಂಬರ್ 7: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಇಂದು(ಸೆ.7)ರಿಂದ ರಾಜ್ಯಾದ್ಯಂತ ಹೋರಾಟಕ್ಕೆ ಕಾಂಗ್ರೆಸ್‌ ಕರೆ ಕೊಟ್ಟಿದೆ.

   ಈ ಕುರಿತು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಜನಾಂದೋಲನ ಇದಾಗಿದೆ, ಸೆಪ್ಟೆಂಬರ್ 16ರವರೆಗೆ ಹೋರಾಟ ನಡೆಸಲಿದ್ದೇವೆ, ಗಣೇಶ ಚತುರ್ಥಿಯೊಂದು ಹೊರತುಪಡಿಸಿ ಉಳಿದೆಲ್ಲಾ ದಿನಗಳು ಹೋರಾಟ ನಡೆಯಲಿದೆ ಎಂದರು.

   ಕೇಂದ್ರ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ: ದಿನೇಶ್‌ ಗುಂಡೂರಾವ್

   ಕೇಂದ್ರ ಎನ್ಡಿಎ ಸರ್ಕಾರ ದ ತಪ್ಪು ನಿರ್ಧಾರ ತಿಳಿಸುವ ಜತೆಗೆ ಯುಪಿಎ ಸಾಧನೆ‌ಕೂಡ ವಿವರಿಸುತ್ತೇವೆ. ಬೆಂಗಳೂರಿನಲ್ಲಿ ಸಮಾರೋಪ ನಡೆಯಲಿದ್ದು, ದಿನಾಂಕವನ್ನು ರಾಜ್ಯ ನಾಯಕರು ನಿರ್ಧರಿಸಲಿದ್ದಾರೆ ಎಂದು ವಿವರಿಸಿದರು.

   Congress will protest week long against union governments anti people policies

   ಪ್ರಮುಖ ಭಾಷಣಕಾರರು ಜಿಲ್ಲಾ ಮಟ್ಟಕ್ಕೆ ತೆರಳುತ್ತಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಳೆ ಚಾಲನೆ ಸಿಗಲಿದೆ. ಸಚಿವ ಕೆ.ಜೆ. ಜಾರ್ಜ್, ಮುಖಂಡರಾದ ಬಿ.ಎಲ್. ಶಂಕರ್ ಮತ್ತಿತರ ನಾಯಕರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

   ಕಪ್ಪುಹಣ ವಾಪಸ್ ತರುತ್ತೇವೆ ಎಂದಿದ್ದು, ಭ್ರಷ್ಟಾಚಾರ, ನೋಟು ಅಮಾನ್ಯೀಕರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿದೆ. ಇದರಿಂದಾಗಿ ರೈತರು, ಕಾರ್ಮಿಕರು, ಮಹಿಳೆಯರಿಗೆ ತೊಂದರೆ ಆಯಿತು. ಇದೊಂದು ಪೊಲಿಟಿಕಲ್ ಗಿಮಿಕ್, ಜನವಿರೋಧಿ ನೀತಿ ಆಗಿದೆ.

   ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಿರುವ ಸವಾಲುಗಳು!

   ಸಾಮಾನ್ಯ ವರ್ಗದವರನ್ನು ಕೇಂದ್ರ ಸರ್ಕಾರ ಕತ್ತಲೆಯಲ್ಲಿಡುವ ಕಾರ್ಯ ಮಾಡಿದೆ. ಆರ್ಥಿಕವಾಗಿ ದೇಶವನ್ನು ಸದೃಢವಾಗಿಡುವಲ್ಲಿ ಸರ್ಕಾರ ವಿಫಲವಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

   ಪ್ರಧಾನಿ ನರೇಂದ್ರ ಮೋದಿ ಅವರ ಮರಳು ಮಾಡುವ ಮಾತಿಗೆ ಎಷ್ಟು ದಿನ ಜನ ಬೆಲೆ ಕೊಡುತ್ತಾರೆ ಹೇಳಿ. ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ 71 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದರು. ಕೇಂದ್ರ ಸರ್ಕಾರ ಇಂತಹ ಯಾವೊಂದು ನಿರ್ಧಾರವನ್ನೂ ಕೈಗೊಂಡಿಲ್ಲ.

   ಸಾಲಮನ್ನಾಗೆ ರಾಷ್ಟ್ರೀಯ ನೀತಿ ಜಾರಿಗೆ ತರಬೇಕು. ರಾಜ್ಯ ಸರ್ಕಾರ ಸಾಲಮನ್ನಾ ಮಾಡಿದೆ ನೀವೇಕೆ ಮಾಡಬಾರದು? ರಾಜ್ಯ ಸಾಲ ಮನ್ನಾದ ಅರ್ಧ ಹಣ ನೀವು ಮುಂದಾಗಬೇಕು ಎಂದು ಆಗ್ರಹಿಸಿದರು.

   ಜಿಎಸ್ಟಿ ಯುಪಿಎ ಸರ್ಕಾರದ ಮೆದುಳಿನ ಕೂಸು. ಅದನ್ನು ಸಮರ್ಥವಾಗಿ ಜಾರಿಗೆ ತಂದಿಲ್ಲ. ಯೋಜನೆ ಸರಿಯಿಲ್ಲ. ರಾಜ್ಯಗಳಿಗೆ ಸಲ್ಲಬೇಕಾದ ಅನುದಾನವನ್ನು ಆದಷ್ಟು ಬೇಗ ನೀಡಬೇಕು. ಅಧಿಕಾರಕ್ಕೆ ಬರುವಾಗ ಜನರಿಗೆ ಹೊರೆ ಹೊರಿಸುವುದಿಲ್ಲ ಎಂದಿರಿ.

   ತೈಲ ಬೆಲೆ ಏರಿಕೆಗೆ ವಿರೋಧ: ಸೆಪ್ಟೆಂಬರ್ 10ರಂದು ಭಾರತ್ ಬಂದ್‌

   ಆದರೆ 16 ಸಾರಿ ಇಂಧನ ಬೆಲೆ ಹೆಚ್ಚಿಸಿದಿರಿ. ಇಷ್ಟೊಂದು ಪ್ರಮಾಣದಲ್ಲಿ ಶೇ.29.6 ರಷ್ಟಿರುವ ಅಬಕಾರಿ ಸುಂಕವನ್ನು ಹಿಂಪಡೆಯಿರಿ. ಇಂದು ಜನರ ಮೇಲೆ ಹೊರಿಸಿರುವ ಹೊರೆ ಜನ ವಿರೋಧಿ ಮಾತ್ರವಲ್ಲ. ದೇಶ ವಿರೋಧಿ ನಿಲುವು ಕೂಡ ಆಗಿದೆ. ರಫೆಲ್ ಡೀಲ್ ಕೂಡ ದೊಡ್ಡ ಹಗರಣ. ಸಂಸತ್ ನಲ್ಲಿ ಈ ಬಗ್ಗೆ ವಿವರ ನೀಡಬೇಕಿತ್ತು.

   ಆದರೆ ರಾಜ್ಯದ ಪ್ರತಿನಿಧಿಸುವ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ. ತಪ್ಪು ಮಾಹಿತಿ ನೀಡುತ್ತಿರುವ ಅವರು ಕೂಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇವೆ.

   ಜಂಟಿ ಸದನ ಸಮಿತಿ ರಚಿಸಲು ನಾವು ಆಗ್ರಹಿಸಿದ್ದೇವೆ. ಇದನ್ನು ಮಾಡಲೇಬೇಕು. ಸರ್ಕಾರ ಜನರ, ಪ್ರತಿಪಕ್ಷಗಳ ದಿಕ್ಕು ತಪ್ಪಿಸುವ ಕಾರ್ಯ ನಿಲ್ಲಿಸಲಿ. ಇನ್ನು ಮುಂದೆ ಜನ ಬಣ್ಣದ ಮಾತಿಗೆ ಮರುಳಾಗುವುದಿಲ್ಲ. ಸಂಪೂರ್ಣ ಮಾಹಿತಿಯನ್ನು ಜನರಿಗೆ ನೀಡಬೇಕು. ರಾಜಕೀಯ ಲಾಭಕ್ಕೆ ದೊಡ್ಡ ಮೊತ್ತದ ಹಣ ಸಂಗ್ರಹಕ್ಕೆ‌ ಮುಂದಾಗಿದ್ದಾರೆ ಎಂದರು.

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   KPCC vice president V.R. Sudarshan said that the Congress will hold week long agitation against union government's anti people policies from September 7 to 16 across the state

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more