ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲವೇಕೆ?

|
Google Oneindia Kannada News

ಬೆಂಗಳೂರು, ಮೇ 19: ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಕ್ಷಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

ಈ ಏರಿಯಾಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಏರಿಯಾಗಳಲ್ಲೂ BMTC ಬಸ್ ಇರುತ್ತೆ | Oneindia Kannada

ಈ ಕುರಿತು ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ 'ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲವೇಕೆ?' ಎಂದು ಪ್ರಶ್ನಿಸಿದ್ದಾರೆ.

ಸಂಘದ ಸಿದ್ದಾಂತ ಒಪ್ಪಿಕೊಳ್ಳದವರಿಗೆ ದೇಶದ್ರೋಹ ಪಟ್ಟ: ಗುಡುಗಿದ ಪ್ರಿಯಾಂಕ್ಸಂಘದ ಸಿದ್ದಾಂತ ಒಪ್ಪಿಕೊಳ್ಳದವರಿಗೆ ದೇಶದ್ರೋಹ ಪಟ್ಟ: ಗುಡುಗಿದ ಪ್ರಿಯಾಂಕ್

'ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಸಿಲುಕಿರುವ ಕಲಬುರಗಿ ಮೂಲದ ನಮ್ಮ ಜನರನ್ನು ವಾಪಾಸ್ ಕರೆತರಲು, ಸರ್ಕಾರಕ್ಕೆ 150 ಬಸ್‌ಗಳನ್ನು ಒದಗಿಸುವಂತೆ ನಾನು ಕೋರಿ 11 ದಿನಗಳೇ ಕಳೆದಿವೆ. ಸರ್ಕಾರವು ನಮ್ಮ ಜನರನ್ನು ವಾಪಾಸ್ ಕರೆತರಲು ಪ್ರಯತ್ನಿಸುತ್ತಿಲ್ಲ ಹಾಗು ನಮಗೂ ಅವಕಾಶ ನೀಡುತ್ತಿಲ್ಲ'' ಎಂದು ಕಿಡಿ ಕಾರಿದ್ದಾರೆ. ಮುಂದೆ ಓದಿ...

ಬಸ್‌ಗಳನ್ನು ಒದಗಿಸಿ ಎಂದು ಮನವಿ

ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕರೆತರಲು ಬಸ್‌ಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಮಹಾರಾಷ್ಟ್ರ ಮತ್ತು ಆಂಧ್ರಕ್ಕೆ 100 ಬಸ್, ಗೋವಾ ಮತ್ತು ತೆಲಂಗಾಣಕ್ಕೆ ತಲಾ 25 ಬಸ್ ನೀಡಿ, ಅದರ ವೆಚ್ಚ ನಾವೇ ಭರಿಸುತ್ತೇವೆ ಎಂದು ವಿನಂತಿಸಿದ್ದರು. ಆದರೆ, ಈ ಕುರಿತು ಸರ್ಕಾರ ಅನುಮತಿ ನೀಡಿಲ್ಲ. ಹಾಗಾಗಿ, ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತದ ಮನವಿಗೆ ಪ್ರತಿಕ್ರಿಯೆ ಇಲ್ಲ

ಜಿಲ್ಲಾಡಳಿತದ ಮನವಿಗೆ ಪ್ರತಿಕ್ರಿಯೆ ಇಲ್ಲ

ಪ್ರಿಯಾಂಕ್ ಖರ್ಗೆ ಅವರ ಮನವಿ ಮೆರೆಗೆ ಅನುಮತಿ ಕೊಡುವ ಕುರಿತು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮನವಿ ಮಾಡಿ ದಿನಗಳು ಕಳೆದಿದೆ ಅಷ್ಟೇ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಕೊಡುಗೆ ಶೂನ್ಯ; ಟ್ವೀಟ್ ಬಾಣ ಬಿಟ್ಟ ಪ್ರಿಯಾಂಕ್ ಖರ್ಗೆಕಲ್ಯಾಣ ಕರ್ನಾಟಕಕ್ಕೆ ಕೊಡುಗೆ ಶೂನ್ಯ; ಟ್ವೀಟ್ ಬಾಣ ಬಿಟ್ಟ ಪ್ರಿಯಾಂಕ್ ಖರ್ಗೆ

ಬಿಎಲ್ ಸಂತೋಷ್ ಟೀಕೆ

ಬಿಎಲ್ ಸಂತೋಷ್ ಟೀಕೆ

ಪ್ರಿಯಾಂಕ್ ಖರ್ಗೆ ಅವರ ಟ್ವೀಟ್‌ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪ್ರತಿಕ್ರಿಯಿಸಿ ''ನೀವು ವಿವಾದಗಳನ್ನು ಸೃಷ್ಟಿಸಿರುವುದರಲ್ಲಿ ಮಾಸ್ಟರ್ಸ್'' ಎಂದಿದ್ದಾರೆ. ನೀವು ಮಹಾರಾಷ್ಟ್ರ ಸರ್ಕಾರದ ಪಾಲುದಾರರು. ನೀವು ಮತ್ತು ನಿಮ್ಮ ಪಕ್ಷದ ನಾಯಕರು ಮಹಾರಾಷ್ಟ್ರದ ಸರ್ಕಾರದ ಜೊತೆ ಮಾತನಾಡಿ ಏಕೆ ಸಹಕಾರ ಕೇಳಬಾರದು? ನೀವು ಮತ್ತು ನಿಮ್ಮ ನಾಯಕರು ವಿವಾದಗಳನ್ನು ಸೃಷ್ಟಿಸುವುದರಲ್ಲಿ ಮಾಸ್ಟರ್ಸ್, ಸಣ್ಣ ಪರಿಹಾರ ಕೂಡ ನೀಡಲ್ಲ. ನಮ್ಮ ಸರ್ಕಾರ ಮತ್ತು ಪಕ್ಷ ಮಾಡುತ್ತಿದೆ ಮತ್ತು ಮಾಡುತ್ತಲೇ ಇರುತ್ತದೆ'' ಎಂದಿದ್ದಾರೆ.

ನೀವು ಪ್ರಬಲ ವ್ಯಕ್ತಿ, ಅನುಮತಿ ಕೊಡಿಸಿ

ನೀವು ಪ್ರಬಲ ವ್ಯಕ್ತಿ, ಅನುಮತಿ ಕೊಡಿಸಿ

''ಮಹಾರಾಷ್ಟ್ರದಲ್ಲಿ ಕನ್ನಡಿಗರು ಸಾಯುತ್ತಿದ್ದಾರೆ, ಬದುಕಲು ಸರ್ಕಾರ ಅವರಿಗೆ ಆಹಾರವನ್ನು ನೀಡಿದೆ. ನಮ್ಮ ಜನರನ್ನು ಮರಳಿ ಕರೆತರಲು ನಿಮ್ಮ ಸರ್ಕಾರವು ಅಸಮರ್ಥವಾಗಿದೆ. ನಮ್ಮ ಜನರನ್ನು ರಾಜ್ಯಕ್ಕೆ ಕರೆತರಲು ನಾನು ಬಸ್ಸುಗಳನ್ನು ಕೇಳಿದ್ದೇನೆ. ನೀವು ಪ್ರಬಲ ವ್ಯಕ್ತಿ ಎಂದು ನಾನು ನಿಮ್ಮಲ್ಲಿ ಕೇಳುತ್ತಿದ್ದೇನೆ, ನಮ್ಮ ಜನರನ್ನು ಹಿಂತಿರುಗಿಸಿ ಅಥವಾ ಕರೆತರಲು ನನಗೆ ಅನುಮತಿ ಕೊಡಿಸಿ'' ಎಂದು ವಾಗ್ದಾಳಿ ನಡೆಸಿದ್ದಾರೆ.

English summary
Congress MLA Priyank Kharge requested to Karnataka Govt to bring stranded kannadigas from maharashtra. but, govt did not responded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X