ವಿಶ್ವಾಸಮತಕ್ಕೂ ಮುನ್ನಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು, ಜುಲೈ 14: ನಾಳೆ (ಜುಲೈ 15) ಕಾಂಗ್ರೆಸ್ ಪಕ್ಷವು ಶಾಸಕಾಂಗ ಸಭೆ ನಡೆಸಲಿದ್ದು, ವಿಶ್ವಾಸಮತ ಯಾಚನೆಗೂ ಮುನ್ನ ಕರೆಯಲಾಗಿರುವ ಈ ಸಭೆಯು ಅತ್ಯಂತ ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್ ಶಾಸಕರು ಪ್ರಸ್ತುತ ಯಶವಂಪುರದ ತಾಜ್ ವಿವಾಂತಾ ಹೊಟೆಲ್‌ನಲ್ಲಿ ಇದ್ದು, ನಾಳೆ ಅಲ್ಲಿಂದಲೇ ಅಧಿವೇಶನಕ್ಕೆ ಹಾಜರಾಗಲಿದ್ದಾರೆ.

ಆದರೆ ಅಧಿವೇಶನಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷವು ಅದೇ ತಾಜ್ ವಿವಾಂತಾ ಹೊಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ.

Congress legislative party meeting on July 15

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಧಿವೇಶನ ಮತ್ತು ವಿಶ್ವಾಸಮತ ಯಾಚನೆಯ ಬಗ್ಗೆ ಅತ್ಯಂತ ಮಹತ್ವದ ಸೂಚನೆಗಳನ್ನು ನಾಳಿನ ಶಾಸಕಾಂಗ ಸಭೆಯಲ್ಲಿ ನೀಡಲಾಗುತ್ತದೆ.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಎಲ್ಲ ಮುಖಂಡರು ಸಭೆಯಲ್ಲಿ ಹಾಜರಿರಲಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಸಭೆ ನಡೆಯಲಿದೆ.

ಕಳೆದ ವಾರ ಕಾಂಗ್ರೆಸ್ ಶಾಸಕಾಂಗ ಸಭೆ ಆಯೋಜಿಸಲಾಗಿತ್ತು. ಅದರಲ್ಲಿ ಶಾಸಕಾಂಗ ಸಭೆಗೆ ರಾಜೀನಾಮೆ ನೀಡಿರುವವರೂ ಸೇರಿದಂತೆ ಸುಮಾರು 16 ಮಂದಿ ಗೈರು ಹಾಜರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+