ಸಿದ್ದರಾಮಯ್ಯ Sting Operation ಕೇಸಿಗೆ ಬಿಗ್ ಟ್ವಿಸ್ಟ್; ಸಿಸಿಬಿ ಪೊಲೀಸರ ಮುಂದೆ ಕಾಂಗ್ರೆಸ್ ನಾಯಕಿ ಶರಣಾಗತಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' (ಕುಟುಕು ಕಾರ್ಯಾಚರಣೆ) ಗೆ ಸಂಬಂಧಿಸಿದಂತೆ ಶನಿವಾರದಿಂದ ಮಹತ್ವದ ಬೆಳೆವಣಿಗೆ ನಡೆದಿದೆ. ದೆಹಲಿ ರಿತೇಶ್ ಪಾಂಡೆ ಎಂಬಾತ ಬಂಧನ ಬೆನ್ನಲ್ಲೆ ಇಂದು ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಕಾಂಗ್ರೆಸ್ ಮಹಿಳಾ ನಾಯಕಿ ಕೃಪಾ ಆಳ್ವಾ ಅವರು ಸಿಸಿಬಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ತಂದೆ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು, ಅವರನ್ನು ಹೆದರಿಸಿ ಬ್ಲ್ಯಾಕ್ ಮೇಲ್ ಮಾಡಲು ವರ್ಷಗಳ ಹಿಂದಿನ ವಿಡಿಯೋ ಹರಿಬಿಡಲಾಗಿದೆ. ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂದಿದ್ದ ಸಿದ್ದರಾಮಯ್ಯ ಪುತ್ರ ಮತ್ತು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಇದರ ಹಿಂದೆ ಮಹಿಳಾ ನಾಯಕಿ ಸೇರಿ ಕಾಂಗ್ರೆಸ್ ನವರ ಕೈವಾಡಿ ಇದೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

Congress Krupa Alva Surrenders

ಇದರ ಬೆನ್ನಲ್ಲೇ ಮಹಿಳಾ ನಾಯಕಿ ಸ್ಟಿಂಗ್ ಪ್ರಕರಣ ಸಂಬಂಧ ಬೆಂಗಳೂರು ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಮುಂದೆ ಶರಣಾಗಿದ್ದಾಳೆ. ರಾಜ್ಯಾದ್ಯಂತ ತೀವ್ರ ಚರ್ಚೆಯಾಗಿದ್ದ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದೆ.

ಪೊಲೀಸರಿಂದ ಸುದೀರ್ಘ ವಿಚಾರಣೆ?

ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ. ಇದರ ಹಿಂದಿರುವ ಪ್ರಮುಖರ ಕೈವಾಡ ಕುರಿತು ಸಿಸಿಬಿ ಪೊಲೀಸರು ಕೃಪಾ ಆಳ್ವಾರನ್ನು ನ್ಯಾಯಾಂಗದ ಮೂಲಕ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯದ ಘಟನೆಯಿಂದಾಗಿ ಕಾಂಗ್ರೆಸ್ ಸರ್ಕಾರ ಮತ್ತು ನಾಯಕರು ಸಾರ್ವಜನಿಕವಾಗಿ ತೀವ್ರ ಟೀಕೆ ಮತ್ತು ಇರುಸು ಮುರಿಸಿಗೆ ಒಳಗಾಗಲಿದ್ದಾರೆ.

ಸಿದ್ದರಾಮಯ್ಯರಿಂದಲೇ ನೇರ ಆರೋಪ

ತಮ್ಮ ವಿರುದ್ಧದ ಸ್ಟಿಂಗ್ ಆಪರೇಷನ್ ಕುರಿತು ಇತ್ತೀಚೆಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಮಂಗಳೂರು ಮೂಲಕ ಪವರ್ ಟಿವಿ ರಾಜೇಶ್ ಶೆಟ್ಟಿ ಹಾಗೂ ಸ್ವಪಕ್ಷದ ಮಹಿಳಾ ನಾಯಕಿ ಕೃಪಾ ಆಳ್ವಾರ ಕೈವಾಡ ಇದೆ ಎಂದು ಆರೋಪಿಸಿದ್ದರು. ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿ ಹೆದರಿಸುವ ಉದ್ದೇಶದಿಂದ ಈ ರೀತಿ ಸುಳ್ಳು ವಿಡಿಯೋ ಸೃಷ್ಟಿಸಿದ್ದರು ಎಂದು ಕಿಡಿ ಕಾರಿದ್ದರು.

ರಾಜೇಶ್ ಶೆಟ್ಟಿ ಪೊಲೀಸರ ಮುಂದೆ ಎಲ್ಲ ಒಪ್ಪಿಕೊಂಡಿದ್ದಾನೆ. ಇದರ ಹಿಂದಿನ ರಾಜಕೀಯ ದುರುದ್ದೇಶ, ಯಾರೆಲ್ಲ ಭಾಗಿಯಾಗಿದ್ದಾರೆ ಎಂದು ತಿಳಿಯಲು ನಾನು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅವರು ಮೈಸೂರಿನಲ್ಲಿ ಪ್ರಕರಣ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+