Get Updates
Get notified of breaking news, exclusive insights, and must-see stories!

ATM ಕಾಂಗ್ರೆಸ್ ಸರ್ಕಾರದ ಮುಲಾಜಿನಲ್ಲಿ ರಾಹುಲ್ ಗಾಂಧಿ: ಬೊಮ್ಮಾಯಿ

ಬೆಂಗಳೂರು, ಆಗಸ್ಟ್ 11: ಕಾಂಗ್ರೆಸ್ ಅಗ್ರನಾಯಕ ರಾಹುಲ್ ಗಾಂಧಿ ಕರ್ನಾಟಕದ ಎಟಿಎಂ ಸರ್ಕಾರದ (ATM Sarakara) ಮುಲಾಜಿನಲ್ಲಿದ್ದಾರೆ. ಹೀಗಾಗಿ ಅವರು ಗುತ್ತಿಗೆದಾರರಿಗೆ ಬಿಲ್ ಕೊಡಿಸಲು ಮಧ್ಯ ಪ್ರವೇಶ ಮಾಡುವುದಿಲ್ಲ. ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಈ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ಬಿಡುಗಡೆಯಾಗುರುವ 650 ಕೋಟಿ ಯಾಕೆ ಇಟ್ಟುಕೊಂಡಿದ್ದಾರೆ. ತನಿಖೆ ಮಾಡುತ್ತೇವೆ ಅಂತ ಹೇಳಿ ಹಣ ಇಟ್ಟು ಕೊಂಡಿ ದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

Congress Govt If Not Sanction Grant To Contractors BJP Will Fight legally, Bommai Warned

ಗುತ್ತಿಗೆದಾರರ ಕಡೆಯವರೇ ಆಣೆ ಪ್ರಮಾಣ ಮಾಡುವಂತೆ ಹೇಳಿದ್ದಾರೆ‌. ಅದನ್ನು ವಿಷಯಾಂತರ ಮಾಡುವ ಬದಲು, ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡಲಿ ಎಂದು ಬೊಮ್ಮಾಯಿ ಆಗ್ರಹಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ನಿನ್ನೆ ಶಾಂಗ್ರಿಲಾದಲ್ಲಿ ಕಮಿಷನ್ ಮಾತುಕತೆ ನಡೆಯುತ್ತಿದೆ ಅಂತ ಹೇಳಿದ್ದರು. ಅವರ ಮೇಲೆ ಏನು ಒತ್ತಡ ಇದೆಯೋ ಗೊತ್ತಿಲ್ಲ. ಈಗ ಯಾರೂ ಕಮಿಷನ್ ಕೇಳಿಲ್ಲ ಅಂತ ಹೇಳುತ್ತಿದ್ದಾರೆ ಎಂದರು.

ಎಟಿಎಂ ಹೆಸರು ಸತ್ಯ: ಮಧ್ಯಪ್ರವೇಶಕ್ಕೆ 'ರಾಗಾ'ಗಿಲ್ಲ ಆಸಕ್ತಿ

ನಾವು ಮಾರ್ಚ್ ನಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ನಾವೇನು ಸುಳ್ಳು ಹೇಳಬೇಕಿಲ್ಲ. ಅವರು ಹಣ ಬಿಡುಗಡೆ ಮಾಡದ ಕಾರಣ ಈಗ ಗುತ್ತಿಗೆದಾರರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಬಳಿ ಓಡಾಡುತ್ತಿದ್ದಾರೆ. ಆಗ ಬಿಬಿಎಂಪಿಯಲ್ಲಿ ತೆರಿಗೆ ಸಂಗ್ರಹ ಮಾಡಿದ್ದಾರೆ. ಅದರಲ್ಲಿ ಗುತ್ತಿಗೆದಾರರ ಹಣ ಕೊಡಬೇಕು ಎಂದು ಒತ್ತಾಯಿಸಿದರು.

Congress Govt If Not Sanction Grant To Contractors BJP Will Fight legally, Bommai Warned

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಲ್ಲಿ ಮಧ್ಯ ಪ್ರವೇಶಿಸಲು ಮನಸಿಲ್ಲ. ಎಟಿಎಂ ಅಂತ ಏನು ಹೆಸರಿದೆಯೋ ಅದು ಸತ್ಯವಾಗಿರುವುದರಿಂದ ಅವರು ರಾಜ್ಯ ಸರ್ಕಾರದ ಮುಲಾಜಿನಲ್ಲಿದ್ದಾರೆ. ಹೀಗಾಗಿ ಅವರು ಇಲ್ಲಿ ಮದ್ಯಪ್ರವೇಶ ಮಾಡಲು ಬರುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಜನರಿಗೆ ಬೇಕಾಗಿರುವ ಕಾಮಗಾರಿ ಮಾಡದಿದ್ದರೆ 'ಬ್ರ್ಯಾಂಡ್ ಬೆಂಗಳೂರು' ಯೋಜನೆ ಯಶಸ್ವಿಯಾಗುವುದಿಲ್ಲ. ನಮ್ಮ ಅವಧಿಗೂ ಹಿಂದಿನಿಂದಲೂ ಬಾಕಿ ಉಳಿದಿದೆ‌. ನಾವು ಹಿರಿತನದ ಆಧಾರದಲ್ಲಿ ಬಿಲ್ ಪಾವತಿ ಮಾಡಲು ನಿಯಮ ಮಾಡಿದ್ದರಿಂದ ವ್ಯವಸ್ಥಿತವಾಗಿ ಹಣ ಬಿಡುಗಡೆಯಾಗುತ್ತಿತ್ತು.

ಸದ್ಯ ರಾಜ್ಯದ ಕಾಂಗ್ರೆಸ್ ಸರ್ಕಾರ ಇಲ್ಲದ ಸಬೂಬು ಹೇಳದೇ ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+