ರಾಷ್ಟ್ರಧ್ವಜ ತಿರುಚುವಷ್ಟರ ಮಟ್ಟಿಗೆ ಜಿಹಾದಿಗಳಿಗೆ ಕಾಂಗ್ರೆಸ್ ಸರ್ಕಾರ 'ಶಕ್ತಿ' ತುಂಬಿದೆ: ಬಿಜೆಪಿ
ಬೆಂಗಳೂರು, ಅಕ್ಟೋಬರ್ 08: ಶಿವಮೊಗ್ಗದಲ್ಲಿ ಈದ್ ಮಿಲಾದ್ ವೇಳೆ ಕಲ್ಲು ತೋರಾಟ ನಡೆದಿತ್ತು. ಅದರ ಬೆನ್ನಲ್ಲೆ ಜಿಹಾದಿಗಳು ರಾಷ್ಟ್ರಧ್ರಜಕ್ಕೆ ಅಪಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇಂತವರಿಗೆ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬಿದೆ ಎಂದು ಕರ್ನಾಟಕ ಬಿಜೆಪಿ ಕಿಡಿ ಕಾರಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣವು, ರಾಷ್ಟ್ರಧ್ವಜವನ್ನೇ ತಿರುಚುವಷ್ಟರ ಮಟ್ಟಿಗೆ ಜಿಹಾದಿಗಳಿಗೆ "ಶಕ್ತಿ" ತುಂಬಿದೆ ಎಂದು ಗುಡುಗಿದೆ.

ರಾಷ್ಟ್ರಧ್ವಜವನ್ನೇ ತಿರುಚುವಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಅಪರಾಧಿಗಳನ್ನು ಇದುವರೆಗೂ ಬಂಧಿಸದಿರುವುದು, ಕಾಂಗ್ರೆಸ್ ಸರ್ಕಾರದ ಹೇಡಿತನಕ್ಕೆ ಇದು ಸಾಕ್ಷಿಯಾಗಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಜಿಹಾದಿಗಳನ್ನು ಬಂಧಿಸುತ್ತಿರೋ ಅಥವಾ ಅವರಿಗೂ "ಅಮಾಯಕರು" ಎಂಬ ಪಟ್ಟ ಕಟ್ಟುತ್ತಿರೋ ಎಂದು ಬಿಜೆಪಿ ಪ್ರಶ್ನಿಸಿದೆ.
ತಡವಾಗಿ ಬೆಳಕಿಗೆ ಬಂದ ಘಟನೆ
ಶಿವಮೊಗ್ಗದ ಘಟನೆ, ಪೊಲೀಸರ ಮೇಲಿನ ಮುಸ್ಲಿಂ ಸಮುದಾಯದ ಯುವಕರ ಗುಂಪು ಕಲ್ಲು ತೂರಾಟದ ಘಟನೆ ಇನ್ನೂ ಮಾಸಿಲ್ಲ. ಇತ್ತ ಕುಮಟಾದಲ್ಲಿ ಈದ್ ಮಿಲಾದ್ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಮಟಾದ ಮಿರ್ಜಾನಿನಲ್ಲಿ ಸ್ಥಳೀಯ ಜಮಾತುಲ್ ಮುಸ್ಲಿಮೀನ್ ಸಮಿತಿ ನಡೆಸಿದ ಮೆರವಣಿಗೆ ವೇಳೆ ರಾಷ್ಟ್ರಧ್ವಜದ ಅಶೋಕ ಚಕ್ರದ ಜಾಗದಲ್ಲಿ ಚಂದ್ರ ಮತ್ತು ನಕ್ಷತ್ರದ ಚಿತ್ರ ಬರೆದ ಧ್ವಜ ಹಾರಾಡಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ ಹಿನ್ನೆಲೆಯಲ್ಲಿ ಕುಮಟಾ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದಾರೆ. ಈ ಕುರಿತು ಸರ್ಕಾರ ಆಡಳಿತದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಇನ್ನೂ ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಭೆ ನಡೆಸಿದವರು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕಾರ್ಯಕರ್ತರು. ಪಿಎಫ್ ಐ ಮೇಲಿನ ಪ್ರಕರಣಗಳನ್ನೆಲ್ಲ ವಾಪಸ್ ಪಡೆದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಋಣವನ್ನು ತೀರಿಸಲು ಅವರೆಲ್ಲ ಈಗ ಹಿಂದೂ ಸಮುದಾಯದ ಮೇಲೆ ಮುಗಿಬಿದ್ದಿದ್ದಾರೆ ಎಂದು ಬಿಜೆಪಿ ದೂರಿದೆ.
ಚುನಾವಣೆಯಲ್ಲಿ PFI ಮಾಡಿದ ಸಹಾಯಕ್ಕೆ ಪ್ರತಿಫಲವೆಂಬಂತೆ, ಕಾಂಗ್ರೆಸ್ ಈಗ ಗಲಭೆಕೋರರನ್ನು ಬಂಧಿಸದೆ, ಅಮಾಯಕ ಹಿಂದೂ ಯುವಕರ ಮೇಲೆ ಸುಳ್ಳು ಕೇಸು ಜಡಿದು, ಜೈಲಿಗಟ್ಟುತ್ತಿದೆ. ಈ ನಡೆಯನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಗುಡುಗಿದೆ.












Click it and Unblock the Notifications