MLA Munirathna: ಅತ್ಯಾಚಾರ, ಮಹಿಳೆ ಮೇಲೆ ಮೂತ್ರ ಮಾಡಿದ್ದ ಮುನಿರತ್ನ! ಕಾಂಗ್ರೆಸ್ ಹೇಳಿದ್ದೇನು?
ಬೆಂಗಳೂರು, ಮೇ 24: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಸೇರಿದಂತೆ ವಿವಿಧ ದೂರು ದಾಖಲಾಗಿವೆ. ಮುನಿರತ್ನ ಹಾಗೂ ಸಹಚರರ ವಿರುದ್ಧದ ಮಹಿಳೆ ಮೇಲಿನ ಅತ್ಯಾಚಾರದ ದೂರು ದಾಖಲಾಗಿದ್ದು, ಪ್ರಕರಣವನ್ನು ಎಸ್‌ಐಟಿಗೆ ನೀಡಲಾಗಿದೆ. ಇದರ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಮುನಿರತ್ನ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಲಿ ನಡೆಸಿದೆ. ಮುನಿರತ್ನ ಮೇಲಿನ ಪ್ರಕರಣಳ ಪಟ್ಟಿ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಕಾಂಗ್ರೆಸ್ ವಿಡಿಯೋ ಪೋಸ್ಟ್ ಮಾಡಿದೆ. ಈ ಬಿಜೆಪಿ ಶಾಸಕ ಮುನಿರತ್ನ ಪ್ರಧಾನಿ ಮೋದಿಗೆ ಆಪ್ತ ಎಂದು ಪರಿಗಣಿಸಲಾಗಿದೆ. ಮುನಿರತ್ನ ಸಹಚರರೊಂದಿಗೆ ಸೇರಿ ಮಾಡಬಾರದ್ದನ್ನು ಮಾಡಿದ್ದಾರೆ ಎಂದು ಕಟುವಾಗಿ ಕಾಂಗ್ರೆಸ್ ಆರೋಪಿಸಿದೆ.

* ಮುನಿರತ್ನ ಮಹಿಳೆಯ ಬಟ್ಟೆಗಳನ್ನು ಹರಿದು ಹಾಕಿದರು
* ಸ್ನೇಹಿತರೊಂದಿಗೆ ಮುನಿರತ್ ಮಹಿಳೆ ಕಾರ್ಯಕರ್ತೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದರು.
* ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದರು
* ಮಾರಕ ವೈರಸ್ ಚುಚ್ಚುಮದ್ದು ನೀಡಿದರು
* ಇಡೀ ಕುಟುಂಬವನ್ನೇ ಕೊಲ್ಲುವುದಾಗಿ ಬೆದರಿಕೆ ಹಾಕಿದರು
ಬಿಜೆಪಿ ಶಾಸಕನ ವಿರುದ್ಧ ಇಷ್ಟೆಲ್ಲ ನಡೆದರೂ ನರೇಂದ್ರ ಮೋದಿ ಅವರು ಮಾತ್ರ ಎಂದಿನಂತೆಯೇ ಮೌನವಾಗಿದ್ದಾರೆ. ಇದೇ ಬಿಜೆಪಿಯ ನಡವಳಿಕೆ, ಸ್ವಭಾವ ಮತ್ತು ನೈಜ ಮುಖ ಎಂದು ಟಾಂಗ್ ನೀಡಿದೆ. ಮುನಿರತ್ನ ನಡೆಸಿದ್ದಾರೆ ಎನ್ನಲಾದ ಅತ್ಯಾಚಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸುತ್ತಿದ್ದಂತೆ ಮುನಿರತ್ನ ತಲೆಮರೆಸಿಕೊಂಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಮುನಿರತ್ನ ಎಸ್‌ಐಟಿ ವಿಚಾರಣೆ ಎದುರಿಸಬೇಕಿದೆ. ಈ ಮಧ್ಯೆ ಕಾಂಗ್ರೆಸ್ ಮಾಡಿರುವ ಆರೋಪಗಳು ಹೆಚ್ಚು ಚರ್ಚೆ ಆಗುತ್ತಿವೆ.
ಮುನಿರತ್ನಗೆ ಬಂಧನ ಭೀತಿ
ಪ್ರಕರಣ ಎಸ್‌ಐಟಿಗೆ ವಹಿಸುತ್ತಿದ್ದಂತೆ ಶಾಸಕ ಮುನಿರತ್ನಗೆ ಬಂಧನ ಭೀತಿ ಶುರುವಾಗಿದೆ. ಅತ್ಯಾಚಾರ, ಜಾತಿ ನಿಂದನೆ ಸೇರಿದಂತೆ ಕೆಲವು ಆರೋಪ ಎದುರಿಸುತ್ತಿರುವ ಮುನಿರತ್ನ ಸದ್ಯ ಗೌಪ್ಯ ಸ್ಥಳದಲಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಎಸ್‌ಐಟಿ ಮುನಿರತ್ನರನ್ನು ನಿರಂತವಾಗಿ ವಿಚಾರಣೆಗೆ ಒಳಪಡಿಸಲಿದೆ. ಕೋರ್ಟ್ ಬಳಿಕ ಮನವಿ ಮಾಡಿ ಕಸ್ಟಡಿಗೆ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ರಾಜಕೀಯವಾಗಿ ತನ್ನ ವಿರೋಧಿಗಳನ್ನು ಹಣಿಯಲು ಅವರಿಗೆ ಏಡ್ಸ್ ಪೀಡಿತ ರೋಗಿಯ ರಕ್ತ ಚುಚ್ಚಲು ಮುಂದಾಗಿದ್ದ ಎನ್ನಲಾಗಿದೆ. ಅದಕ್ಕಾಗಿ ಮೂರು ಮಂದಿಗೆ ಮುನಿರತ್ನ ಸೂಚನೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಏಡ್ಸ್ ರಕ್ತವನ್ನು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಚುಚ್ಚಲು ಮುಂಗಾಗಿದ್ದರು ಎಂಬ ವಿಷಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.












Click it and Unblock the Notifications