Congress: ಅತ್ಯಾಚಾರ, ಅನಾಚಾರದ ರಾಜಧಾನಿ ಉತ್ತರ ಪ್ರದೇಶ
ಬೆಂಗಳೂರು: 'ಅತ್ಯಾಚಾರ, ಅನಾಚಾರಗಳ ರಾಜಧಾನಿ ಎಂದೇ ಖ್ಯಾತಿ ಪಡೆದ ಉತ್ತರ ಪ್ರದೇಶವು @BJP4Karnatakaಗೆ ಮಾದರಿಯಂತೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಮೂಲಕ ಕರ್ನಾಟಕಕ್ಕೆ ಉತ್ತರ ಪ್ರದೇಶ ಮಾದರಿ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದೆ ಕರ್ನಾಟಕ ಕಾಂಗ್ರೆಸ್ ಘಟಕ. ಉತ್ತರ ಪ್ರದೇಶದಲ್ಲಿ ಪದೇಪದೆ ನಡೆಯುವ ಹಿಂಸಾತ್ಮಕ ಕೃತ್ಯಗಳನ್ನೇ ಕಾಂಗ್ರೆಸ್ ಇಲ್ಲಿ ಪ್ರಸ್ತಾಪಿಸಿದೆ.
ರಾಜ್ಯದಲ್ಲಿ ಗುಜರಾತ್ ಹಾಗೂ ಉತ್ತರ ಪ್ರದೇಶ ಮಾದರಿ ಎನ್ನುತ್ತಾ ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶ ಮಾದರಿಯನ್ನು ಕಾಂಗ್ರೆಸ್ ಟೀಕೆ ಮಾಡಿದೆ. ಜೊತೆಗೆ 'ಅತ್ಯಾಚಾರ, ಅನಾಚಾರಗಳ ರಾಜಧಾನಿ' ಎಂದು ಬಿಜೆಪಿ ನಾಯಕರನ್ನು ಕೆಣಕಲಾಗಿದೆ ಕೂಡ. ಉತ್ತರ ಪ್ರದೇಶದ ದಲಿತ ಬಾಲಕಿ ಅತ್ಯಾಚಾರ ಘಟನೆಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಈ ಟ್ವೀಟ್ ಮಾಡಿದೆ ಕರ್ನಾಟಕ ಕಾಂಗ್ರೆಸ್ ಘಟಕ. ಟ್ವೀಟ್ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ.

'ದಲಿತ ಬಾಲಕಿ ಮೇಲೆ ಅತ್ಯಾಚಾರ'
'ಅತ್ಯಾಚಾರ, ಅನಾಚಾರಗಳ ರಾಜಧಾನಿ ಎಂದೇ ಖ್ಯಾತಿ ಪಡೆದ ಉತ್ತರ ಪ್ರದೇಶವು @BJP4Karnatakaಗೆ ಮಾದರಿಯಂತೆ. ಉನ್ನಾವೋದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ ಆಕೆಯ ಶೆಡ್ (ಮನೆ)ಗೆ ಬೆಂಕಿ ಹಚ್ಚಿ ಕುಟುಂಬವನ್ನು ಸುಟ್ಟು ವಿಕೃತಿ ಮೆರೆದಿದ್ದಾರೆ. ಯುಪಿಯ ಎನ್ಕೌಂಟರ್, ಬುಲ್ಡೋಜರ್‌ಗಳು ಅತ್ಯಾಚಾರಿಗಳಿಗೆ ಅನ್ವಯವಾಗದೇ?' ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಪೇಜ್‌ನಲ್ಲಿ ಪ್ರಶ್ನೆ ಕೇಳಿ ಟ್ವೀಟ್ ಪೋಸ್ಟ್ ಮಾಡಲಾಗಿದೆ.
ಅತ್ಯಾಚಾರ, ಅನಾಚಾರಗಳ ರಾಜಧಾನಿ ಎಂದೇ ಖ್ಯಾತಿ ಪಡೆದ ಉತ್ತರ ಪ್ರದೇಶವು @BJP4Karnataka ಗೆ ಮಾದರಿಯಂತೆ.
— Karnataka Congress (@INCKarnataka) April 19, 2023
ಉನ್ನಾವೋದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ ಆಕೆಯ ಶೆಡ್ (ಮನೆ)ಗೆ ಬೆಂಕಿ ಹಚ್ಚಿ ಕುಟುಂಬವನ್ನು ಸುಟ್ಟು ವಿಕೃತಿ ಮೆರೆದಿದ್ದಾರೆ.
ಯುಪಿಯ ಎನ್ಕೌಂಟರ್, ಬುಲ್ಡೋಜರ್‌ಗಳು ಅತ್ಯಾಚಾರಿಗಳಿಗೆ ಅನ್ವಯವಾಗದೇ? pic.twitter.com/UsC0EUyUop
'ಬಿಜೆಪಿ ನೀಡುವ ಗಿಫ್ಟ್ ಕೂಡ ಕಳಪೆ'
'ಮತದಾರರ ಓಲೈಕೆಗಾಗಿ ಬಿಜೆಪಿಗರು ನೀಡುವ ಆಮಿಷದ ಉಡುಗೊರೆಗಳೂ ಕೂಡ ಬಿಜೆಪಿ ಅಡಳಿತದಂತೆ ಕಳಪೆಯಾಗಿರುತ್ತವೆ! ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಿದ ಕಳಪೆ ಗ್ಯಾಸ್ ಸ್ಟೌಗಳು ಸ್ಪೋಟಗೊಳ್ಳುತ್ತಿವೆ. ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸಚಿವ ಸುಧಾಕರ್ ಅವರಿಗೆ ಕೋವಿಡ್ ಕಾಲದಿಂದಲೂ ಅಭ್ಯಾಸವಾಗಿದೆ. ಜೀವ ಹೋದರೆ ಹೊಣೆ ಯಾರು @mla_sudhakar?' ಎಂದು ಮತ್ತೊಂದು ಟ್ವೀಟ್ ಮೂಲಕ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಕೆಣಕಿದೆ.
ಮತದಾರರ ಓಲೈಕೆಗಾಗಿ ಬಿಜೆಪಿಗರು ನೀಡುವ ಆಮಿಷದ ಉಡುಗೊರೆಗಳೂ ಕೂಡ ಬಿಜೆಪಿ ಅಡಳಿತದಂತೆ ಕಳಪೆಯಾಗಿರುತ್ತವೆ!
— Karnataka Congress (@INCKarnataka) April 19, 2023
ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಿದ ಕಳಪೆ ಗ್ಯಾಸ್ ಸ್ಟೌಗಳು ಸ್ಪೋಟಗೊಳ್ಳುತ್ತಿವೆ.
ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸಚಿವ ಸುಧಾಕರ್ ಅವರಿಗೆ ಕೋವಿಡ್ ಕಾಲದಿಂದಲೂ ಅಭ್ಯಾಸವಾಗಿದೆ.
ಜೀವ ಹೋದರೆ ಹೊಣೆ ಯಾರು @mla_sudhakar? pic.twitter.com/Nd3yDgVZCp
ಸುಡಾನ್ ವಿಚಾರ ಮತ್ತೆ ಪ್ರಸ್ತಾಪ!
'ಆಂತರಿಕ ಸಂಘರ್ಷ ಉಂಟಾದ ಸೂಡಾನ್‌ನಲ್ಲಿ ವ್ಯಾಪಾರಕ್ಕೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರುವಲ್ಲಿ @BSBommai ಅವರು ಪ್ರಯತ್ನ ಮಾಡುತ್ತಿಲ್ಲವೇಕೆ? ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿಲ್ಲವೇಕೆ? ಶೋಷಿತ ಸಮುದಾಯಗಳೆಡೆಗಿನ ನಿರ್ಲಕ್ಷ್ಯವೇ? ಅಥವಾ ಚುನಾವಣೆಯಲ್ಲಿ ಬ್ಯುಸಿಯೇ?' ಎಂದು ಪ್ರಶ್ನಿಸುವ ಮೂಲಕ ಚುನಾವಣೆ ಹೊತ್ತಲ್ಲೇ ಮತ್ತೊಂದು ಬಾಂಬ್ ಸಿಡಿಸಿದೆ ಕಾಂಗ್ರೆಸ್. ಇಷ್ಟರ ಜೊತೆಗೆ ಹಗರಣಗಳ ಆರೋಪವನ್ನೂ ಹೊರಿಸಿ ಟ್ವೀಟ್ ಮಾಡಿದೆ ಕಾಂಗ್ರೆಸ್.
ಮತ ಕೇಳಿಕೊಂಡು ಮನೆಗೆ ಬರುವ ಬಿಜೆಪಿಗರಿಗೆ ಜನತೆ ಕೇಳಲೇಬೇಕಾದ ಪ್ರಶ್ನೆಗಳಿವು. ಇಷ್ಟೊಂದು ದುರಾಡಳಿತ, ಬೆಲೆಯೇರಿಕೆ, ಭ್ರಷ್ಟಾಚಾರ ನಡೆಸಿ ಜನತೆಯ ಮುಂದೆ ನಿಂತು ಮತ ಕೇಳಲು ಬಿಜೆಪಿಗರಿಗೆ ಯಾವ ಯೋಗ್ಯತೆಯೂ ಉಳಿದಿಲ್ಲ.
— Karnataka Congress (@INCKarnataka) April 19, 2023
ಜನರ ಸಂಕಷ್ಟಕ್ಕೆ ಕಾಂಗ್ರೆಸ್ ಒಂದೇ ಪರಿಹಾರ. #ಕಾಂಗ್ರೆಸ್ಬರಲಿದೆಪ್ರಗತಿ_ತರಲಿದೆ pic.twitter.com/CYdbyICR5X
'ಸರ್ಕಾರೀ ಹುದ್ದೆಗಳಿಗೆ ರೇಟ್ ಫಿಕ್ಸ್!'
'ಕರ್ನಾಟಕದ ಸರ್ಕಾರೀ ಹುದ್ದೆಗಳ ನೇಮಕಾತಿಗೆ ಒಂದೊಂದು ಹುದ್ದೆಗೆ ಇಂತಿಷ್ಟು ಎಂದು ರೇಟ್, ವರ್ಗಾವಣೆಗೂ ರೇಟ್ ಫಿಕ್ಸ್. ಇದು ಬಿಜೆಪಿ ಸರ್ಕಾರದ ಸಾಧನೆ. ಪ್ರಾಮಾಣಿಕ ಯುವಕರು ಉದ್ಯೋಗಕ್ಕಾಗಿ ಕಷ್ಟಪಡುತ್ತಿರುವಾಗ ಬಿಜೆಪಿಗರು ನೇಮಕಾತಿಯನ್ನು ಹಣ ಮಾಡುವ ದಂಧೆ ಮಾಡಿಕೊಂಡಿದ್ದು ಈ ರಾಜ್ಯದ ದುರಂತ' ಎಂದು ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ ಕಾಂಗ್ರೆಸ್. 'ಜೊತೆಗೆ ಪಿಎಸ್‌ಐ ಹುದ್ದೆಗೆ 80 ಲಕ್ಷ, ಪ್ರಾಧ್ಯಾಪಕ ಹುದ್ದೆಗೆ 80 ಲಕ್ಷ, ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ' ಎಂದು ಆರೋಪಿಸಿದೆ ಕಾಂಗ್ರೆಸ್.
ಹೀಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ಕೂಡ ಟ್ವೀಟ್ ಮೂಲಕವೇ ಉತ್ತರ ನೀಡುತ್ತಿದೆ. ಈ ಮೂಲಕ ಚುನಾವಣೆ ಹೊತ್ತಲ್ಲಿ ಆರೋಪ-ಪ್ರತ್ಯಾರೋಪ ಬಲು ಜೋರಾಗಿದೆ. ಸೋಷಿಯಲ್ ಮೀಡಿಯಾ ಮಂದಿ ಈ ಪೋಸ್ಟ್‌ಗಳ ಬಗ್ಗೆ ಚರ್ಚೆಯನ್ನೂ ಆರಂಭಿಸಿದ್ದಾರೆ. ಪರ-ವಿರೋಧದ ಮಾತುಗಳ ನಡುವೆ ಸೋಷಿಯಲ್ ಮೀಡಿಯಾ ಕೂಡ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿ ವೇದಿಕೆ ಒದಗಿಸಿದೆ.
ಒಟ್ಟಾರೆ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲೇ ಟ್ವೀಟ್ ವಾರ್ ಜೋರಾಗಿದೆ. ಇಷ್ಟೆಲ್ಲದರ ನಡುವೆ ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಅಧಿಸೂಚನೆ ಏಪ್ರಿಲ್ 13ರ ಗುರುವಾರ ಪ್ರಕಟವಾಗಿದೆ. ಸರ್ಕಾರಿ ರಜೆ ದಿನ ಹೊರತುಪಡಿಸಿ ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಬಹುದು. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಎರಡೂ ಪಕ್ಷಗಳ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications