ಸಿಎಂ ಜನರ ಕಣ್ಣೀರು ಒರೆಸಬೇಕು, ತಾವೇ ಕಣ್ಣೀರಿಡಬಾರದು ಎಂದ ಶಾಸಕ
Recommended Video

ಬೆಂಗಳೂರು, ಜು.16: ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಅಮೃತವನ್ನು ನೀಡಿದೆ ವಿಷವನ್ನಲ್ಲ, ಸಿಎಂ ಆದವರು ಜನರ ಕಣ್ಣೀರು ಒರೆಸಬೇಕು ತಾವೇ ಕಣ್ಣೀರು ಹಾಕಬಾರದು ಎಂದು ಕಾಂಗ್ರೆಸ್ ಶಾಸಕ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿರುವರೆಗೂ ಕಾಂಗ್ರೆಸ್‌ನ್ನು ಸ್ಮರಿಸಬೇಕು, ಮುಖ್ಯಮಂತ್ರಿಯಾಗಿ ಅವರು ರಾಜ್ಯದ ಆರೂವರೆ ಕೋಟಿ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕೇ ಹೊರತು ಈ ರೀತಿ ಕಣ್ಣೀರು ಹಾಕಬಾರದು ಎಂದರು.
ನಾನು ಸುಖವಾಗಿಲ್ಲಮ ವಿಷನುಂಗಿ ವಿಷಕಂಠನಾಗಿದ್ದೇನೆ ಎಂದು ಹೇಳಿ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಅಮೃತವನ್ನು ನೀಡಿದೆ. ಮುಖ್ಯಮಂತ್ರಿ ಆಗಿರುವವರೆಗೂ ಕಾಂಗ್ರೆಸ್‌ನ್ನು ಅವರು ಸ್ಮರಿಸಿಕೊಳ್ಳಬೇಕು.

37 ಶಾಸಕರು ಇರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೇವೆ, 80 ಸ್ಥಾನ ಗೆದ್ದಿದ್ದರೂ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ್ದೇವೆ, ಸಮ್ಮಿಶ್ರ ಸರ್ಕಾರದಲ್ಲಿ ಕಷ್ಟ-ಸುಖ ಇಬ್ಬರೂ ಅನುಭವಿಸೋಣ, ಕಾಂಗ್ರೆಸ್ ಪಕ್ಷವು ನಿಮ್ಮ ಜತೆ ಇದೆ, ಯಾವತ್ತೂ ಸಹ ಕಾಂಗ್ರೆಸ್ ನಿಮ್ಮ ಬೆಂಬಲಕ್ಕಿರುತ್ತದೆ. ರಾಜ್ಯ ಮುಖ್ಯಮಂತ್ರಿಯಾಗಿ ಅವರೇ ಅತ್ತರೆ ಹೇಗೆ ಎಂದು ಪ್ರಶ್ನಿಸಿದರು.












Click it and Unblock the Notifications