ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಕರೆದಿದ್ದ ನೈಟ್ ಪಾರ್ಟಿಯಲ್ಲಿ ಬಿಸಿಬಿಸಿ ಚರ್ಚೆ!

By Nayana
|
Google Oneindia Kannada News

Recommended Video

ಕರ್ನಾಟಕ ರಾಜಕೀಯದಲ್ಲಿ ಬಾರಿ ಕುತೂಹಲ ಕೆರಳಿಸಿದ ಸಿದ್ದರಾಮಯ್ಯನವರ ಡಿನ್ನರ್ ಪಾರ್ಟಿ | Oneindia Kannada

ಬೆಂಗಳೂರು, ಆಗಸ್ಟ್‌ 2: ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ರಾತ್ರಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಚಿವ ಎಚ್‌ಡಿ ರೇವಣ್ಣವಿರುದ್ಧ ಹಲವಾರು ಕಾಂಗ್ರೆಸ್‌ ಸಚಿವರು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಕುತೂಹಲ ಕೆರಳಿಸಿದ್ದ ರಾಜಕೀಯ ಚಟುವಟಿಕೆಯ ಈ ನೈಟ್‌ ಪಾರ್ಟಿಯಲ್ಲಿ ಸಮ್ಮಿಶ್ರ ಸರ್ಕಾರದ ಹಲವು ಘಟನಾವಳಿಗಳ ಕುರಿತಂತೆ ಸುದೀರ್ಘ ಚರ್ಚೆ ನಡೆದಿವೆ ಎಂದು ಮೂಲಗಳು ತಿಳಿಸಿವೆ.ದೋಸ್ತಿ ಪಕ್ಷದ ಜತೆಗೆ ಚರ್ಚಿಸದೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೆಲ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು: ಸಿದ್ದರಾಮಯ್ಯ ಖಡಕ್ ಉತ್ತರಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು: ಸಿದ್ದರಾಮಯ್ಯ ಖಡಕ್ ಉತ್ತರ

ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಬಗ್ಗೆ ಕುಮಾರಸ್ವಾಮಿ ಯಾವುದೇ ಮಾಹಿತಿ ನೀಡುವುದಿಲ್ಲ, ಎಲ್ಲವನ್ನೂ ಸಹೋದರ ರೇವಣ್ಣ ಮಾತು ಕೇಳಿಯೇ ಮುಂದುವರೆಯುತ್ತಾರೆ, ಸಂಬಂಧಿಸಿದ ಸಚಿವರ ಗಮನಕ್ಕೆ ಬರುವುದಿಲ್ಲ, ಅಧಿಕಾರಿಗಳ ಸಭೆ ನಡೆಸುವಾಗಲೂ ರೇವಣ್ಣ ಮೂಗು ತೂರಿಸುತ್ತಾರೆ ಎಂದು ಎಂದು ಸಚಿವರು ದೂರಿದ್ದಾರೆ.

Cong Ministers expressed unhappy over CM in Siddaramaiah party

ನಮ್ಮ ಇಲಾಖೆಗಳ ಸಭೆ ನಡೆಸುವಾಗ ಬೇಗ ಮುಗಿಸಿ ಎಂದು ಹೇಳುತ್ತಾರೆ. ಮುಖ್ಯಮಂತ್ರಿಗಳು ನಾನು ಎಲ್ಲಿಗೋ ಹೋಗಬೇಕು ಬೇಗ ಮುಗಿಸಿ ಎಂದು ಹೇಳುತ್ತಾರೆ, ಮೈತ್ರಿ ಧರ್ಮವನ್ನ ಸಿಎಂ ಸರಿಯಾಗಿ ಪಾಲಿಸುತ್ತಿಲ್ಲ, ಪ್ರತಿಯೊಂದನ್ನೂ ದೇವೇಗೌಡ, ರೇವಣ್ಣ ಮಾತು ಕೇಳಿಯೇ ಮುಂದುವರೆಯುತ್ತಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೌದು ಸರ್ಕಾರದಲ್ಲಿ ಇದಾಗುತ್ತಿರುವುದು ನಿಜ ಎಂದು ಒಪ್ಪಿಕೊಂಡರು, ಕಾಂಗ್ರೆಸ್ ಪ್ರತಿನಿಧಿಯಾಗಿ ನಾನು ಸರ್ಕಾರದಲ್ಲಿ ಇದ್ದೇನೆ, ನನ್ನ ಗಮನಕ್ಕೂ ಕೆಲವೊಂದು ವಿಚಾರಗಳು ಬರುವುದೇ ಇಲ್ಲ, ಅವರೇ ಮೊದಲೇ ನಿರ್ಧರಿಸಿ ಬಳಿಕ ನನಗೆ ಹೇಳುತ್ತಾರೆ, ಈ ಬಗ್ಗೆ ಒಮ್ಮೆ ಹೆಚ್ ಡಿಕೆ ಜೊತೆಯೂ ಮಾತನಾಡಿದ್ದೇನೆ ಎಂದಿದ್ದಾರೆ.

English summary
It is said that the many ministers from congress in the state coalition government have expressed unhappiness over chief minister H.D.Kumaraswamy's decision at the party last night hosted by CLP leader Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X