CAT 2016 ಫಲಿತಾಂಶ ಪ್ರಕಟ, ಪುರುಷ ಅಭ್ಯರ್ಥಿಗಳದ್ದೇ ಪ್ರಾಬಲ್ಯ!
Common Admission Test (CAT) 2016 ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟವಾಗಿದೆ. ಈ ಬಾರಿ ಸುಮಾರು 22 ಅಭ್ಯರ್ಥಿಗಳು ಶೇಕಡಾ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ್ದು, ಎಲ್ಲಾ 22 ಮಂದಿ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳಾಗಿರುವುದು ವಿಶೇಷ.
ಬೆಂಗಳೂರು, ಜನವರಿ 09: Common Admission Test (CAT) 2016 ಫಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟವಾಗಿದೆ. ಈ ಬಾರಿ ಸುಮಾರು 22 ಅಭ್ಯರ್ಥಿಗಳು ಶೇಕಡಾ ನೂರಕ್ಕೆ ನೂರು ಫಲಿತಾಂಶ ಸಾಧಿಸಿದ್ದು, ಎಲ್ಲಾ 22 ಮಂದಿ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳಾಗಿರುವುದು ವಿಶೇಷ.
ದೇಶದೆಲ್ಲೆಡೆ ಇರುವ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಹಾಗೂ ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್ ಗಳ ಪ್ರವೇಶಕ್ಕಾಗಿ CAT ಪರೀಕ್ಷೆ ನಡೆಸಲಾಗುತ್ತದೆ, ಕಳೆದ ವರ್ಷ ಡಿಸೆಂಬರ್ 04ರಂದು ದೇಶದ 138 ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು, 1.95 ಲಕ್ಷ ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ಬಾರಿ ಇಂಜಿನಿಯರ್ ರೇತರ ಅಭ್ಯರ್ಥಿಗಳು ಶೇಕಡಾ ನೂರಕ್ಕೆ ನೂರು ಫಲಿತಾಂಶ ಪಡೆದಿರುವುದು ವಿಶೇಷ ಎಂದು CAT 2016ರ ಸಂಚಾಲಕ ಪ್ರೊ. ರಾಜೇಂದ್ರ ಕೆ ಬಂಡಿ ಹೇಳಿದ್ದಾರೆ.
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು CAT ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು. ಶೀಘ್ರದಲ್ಲೇ ಐಐಎಂ ಬೆಂಗಳೂರು ಶಾರ್ಟ್ ಲಿಸ್ಟ್ ಆಗಿರುವ ಅಭ್ಯರ್ಥಿಗಳ ಹೆಸರನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. (ಒನ್ಇಂಡಿಯಾ ಸುದ್ದಿ)











Click it and Unblock the Notifications