ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಭಿನವ ಬೀಚಿ ಗಂಗಾವತಿ ಪ್ರಾಣೇಶ್‌ 'ನಕ್ಕಾಂವ ಗೆದ್ದಾಂವ' ಓದಲು ಮರಿಬೇಡಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಕನ್ನಡದ ಖ್ಯಾತ ಹಾಸ್ಯ ಕಲಾವಿದ, ಅಭಿನವ ಬೀಚಿ ಎಂದೇ ಖ್ಯಾತರಾದ ಗಂಗಾವತಿ ಪ್ರಾಣೇಶ್‌ ಅವರ ಕೃತಿ 'ನಕ್ಕಾಂವ ಗೆದ್ದಾಂವ' ಆಗಸ್ಟ್ 12ರಂದು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಲೋಕಾರ್ಪಣೆಯಾಗಲಿದೆ.

ಕರ್ನಾಟಕವೂ ಸೇರಿದಂತೆ, ದೇಶವಿದೇಶಗಳಲ್ಲಿ 3 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವ ಗಂಗಾವತಿ ಪ್ರಾಣೇಶ್‌ ಅವರು ಕನ್ನಡ ಭಾಷೆಯ ಮೂಲಕ ಹಾಸ್ಯ ಸಾಹಿತ್ಯವನ್ನು ಪ್ರಖರಿಸುವ ವಿದ್ವಾಂಸರಾಗಿ ಜನಜನಿತರಾಗಿದ್ದಾರೆ.

ಮೋಹನ್ ಭಾಗವತ್ ರಿಂದ ಆ.12ಕ್ಕೆ 'ನಿರ್ಮಾಲ್ಯ' ಕೃತಿ ಲೋಕಾರ್ಪಣೆಮೋಹನ್ ಭಾಗವತ್ ರಿಂದ ಆ.12ಕ್ಕೆ 'ನಿರ್ಮಾಲ್ಯ' ಕೃತಿ ಲೋಕಾರ್ಪಣೆ

ಸಾವಣ್ಣ ಪ್ರಕಾಶನ ಗಂಗಾವತಿ ಪ್ರಾಣೇಶ್‌ ಅವರ 'ನಕ್ಕಾವ ಗೆದ್ದಾವ' ಎನ್ನುವ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದೆ. ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ.

Comedian Gangavati Pranesh book Nakkava Geddava release on Sunday

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್‌ ಭಟ್‌, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ, ಕನ್ನಡ ಚಿತ್ರನಟ ಲವ್ಲಿ ಸ್ಟಾರ್‌ ಪ್ರೇಮ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಗಂಗಾವತಿ ಪ್ರಾಣೇಶ್‌ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು, 1961 ಸೆಪ್ಟೆಂಬರ್‌ 8ರಂದು ಜನಿಸಿದ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಾದಲ್ಲಿ ಪಡೆದರು. ಬಿಕಾಂ ಪದವಿಯನ್ನು ಗಂಗಾವತಿಯಲ್ಲಿ ಪೂರೈಸಿದರು.

ಪ್ರಾಣೇಶ್ ಶುರು ಮಾಡಿದ 'ಬೀಗ ಬೇಡ' ಹಾಸ್ಯ ಸರಣಿಪ್ರಾಣೇಶ್ ಶುರು ಮಾಡಿದ 'ಬೀಗ ಬೇಡ' ಹಾಸ್ಯ ಸರಣಿ

ಹಾಸ್ಯಸಂಜೆ ಎಂಬ ವಿನೂತನ ಹಾಸ್ಯಕ್ಕೆ ಮೀಸಲಾದ ಭಾಷಣಗಳನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ ಕೀರ್ತಿ ಪ್ರಾಣೇಶ್‌ಗೆ ಸಲ್ಲುತ್ತದೆ. ಕಲಬಿರ್ಗಿ ಆಕಾಶವಾಣಿಯಿಂದ ಆರಂಭವಾದ ಇವರ ಹಾಸ್ಯಸಂಜೆ ಕಾರ್ಯಕ್ರಮ ಇದೀಗ ಟಿವಿ ವಾಹಿನಿಗಳಲ್ಲಿ ಪ್ರಸಿದ್ಧವಾಗಿದೆ.

ಇದುವರೆಗೂ 450ಕ್ಕೂ ಹೆಚ್ಚು ಊರುಗಳನ್ನು ಸುತ್ತಿರುವ ಪ್ರಾಣೇಶ್‌ 3ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೊರ ರಾಜ್ಯಗಳಾದ ದೆಹಲಿ, ಮುಂಬೈ, ಗೋವಾ, ಪೂನಾ, ಹೈದರಾಬಾದ್‌ ಕನ್ನಡಿಗನ್ನು ತಮ್ಮ ಮಾತಿನಿಂದ ನಗಿಸಿದ್ದಾರೆ.

ಸಿನಿಮಾ ರಂಗಕ್ಕೂ ಕಾಲಿಟ್ಟಿರುವ ಪ್ರಾಣೇಶ್‌ ಮುಸ್ಸಂಜೆ ಮಾತು ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ಹನ್ನೊಂದು ದೇಶಗಳನ್ನು ಅವರು ಸುತ್ತಿದ್ದಾರೆ.

English summary
'Nakkaava Geddaava' new book by stand up comedian Gangavathi Pranesh will be released on August 12 at Indian institute of world culture in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X