ಬೆಂಗಳೂರು: ಕಾರಿಗೆ ಲಾರಿ ಡಿಕ್ಕಿ: 3 ಯುವಕರು ಸ್ಥಳದಲ್ಲೇ ಸಾವು
ಬೆಂಗಳೂರು. ಮೇ 09: ಲಾರಿಯೊಂದು ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮಂಗಳವಾರ ರಾತ್ರಿ ಸುಮಾರು 10.15ರ ಸುಮಾರಿ ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆಯ ಬಳಿ ಇರುವ ಬೇಗೂರ್ ಬ್ರಿಡ್ಜ್ ಹತ್ತಿರ ಆರ್‌ಜೆ-11ಜಿಎ-9379 ರಾಜಸ್ತಾನ ಮೂಲದ ಲಾರಿಯೊಂದು ಅತಿವೇಗವಾಗಿ ಮತ್ತು ಅಜಾಗರೂತಕತೆಯಿಂದ ಬಂದು ಮುಂಭಾಗದಲ್ಲಿ ಹೋಗುತ್ತಿದ್ದ ಕೆಎ-03-ಎಂಬಿ-9817ರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಹೇಮಂತ್(20), ಧನಶೇಖರ್ (23) ಹಾಗೂ ರಾಜೇಶ್ (25) ಮೃತಪಟ್ಟಿದ್ದಾರೆ.

ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದದ್ದರಿಂದ ಕಾರು ರಸ್ತೆಗೆ ಅಡ್ಡಲಾತಿ ತಿರುಗಿ ಕಾರಿನ ಹಿಂಭಾಗ ಮತ್ತು ಬಲಭಾಗ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಬೆಂಗಳೂರು ಎಚ್‌ಎಸ್‌ಆರ್ ಲೇಔಟ್‌ನ ನಿವಾಸಿಗಳು ಎಂದು ತಿಳಿದುಬಂದಿದೆ. ಲಾರಿ ಚಾಲಕ ಲಾರಿಯನ್ನು ಸ್ಥಳದಲಲ್ಏ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಲಾರಿ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications