ನೀರಿನ ಬಕೆಟ್ ಸೇರಿದ ವಿದ್ಯಾರ್ಥಿಗಳ ಮೊಬೈಲ್!

ಬೆಂಗಳೂರು, ಸೆ.3 : ತರಗತಿಯಲ್ಲಿ ಸಿಕ್ಕ ವಿದ್ಯಾರ್ಥಿಗಳ ಮೊಬೈಲ್‌ಗಳನ್ನು ಕಾಲೇಜಿನ ಎಂಡಿ ನೀರಿನ ಬಕೆಟ್‌ಗೆ ಹಾಕಿದ ಘಟನೆ ವಿದ್ಯಾರಣ್ಯ­ಪುರದ ಶಾರದಾ ಸ್ಕೂಲ್‌ ಆಫ್‌ ಆರ್ಕಿ­ಟೆಕ್ಚರ್‌ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಮೊಬೈಲ್‌ಗಳನ್ನು ರಿಪೇರಿ ಮಾಡಿಸಿಕೊಡುವಂತೆ ಮಾಲೀಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಶಾರದಾ ಸ್ಕೂಲ್‌ ಆಫ್‌ ಆರ್ಕಿ­ಟೆಕ್ಚರ್‌ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತರಗತಿ ಅವಧಿ­ಯಲ್ಲಿ ಮೊಬೈಲ್‌ ಬಳಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆದ್ದರಿಂದ ತರಗತಿಗೆ ಮೊಬೈಲ್‌ ತರುವುದನ್ನು ಆ.11ರಿಂದ ನಿಷೇಧಿಸಲಾಗಿತ್ತು. ಆದರೂ ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಮಾಡು­ತ್ತಿರುವ ಬಗ್ಗೆ ಪೋಷ­ಕರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು.

mobile

ಮಂಗಳವಾರ ತರಗತಿಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಶಿಕ್ಷಣ ಸಂಸ್ಥೆಯ ಮಾಲೀ­ಕರಾದ ವೈ.ಎನ್.­ಶರ್ಮಾ ಅವರು ಪರಿಶೀಲಿಸಿದಾಗ, ಮೂರು ಮೊಬೈಲ್‌ಗಳು ಪತ್ತೆಯಾದವು, ಅವುಗಳನ್ನು ನೀರಿನ ಬಕೆಟ್‌ ಹಾಕಿದ ಶರ್ಮಾ ಅವರು, ನಂತರ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸಬೇಕಾಯಿತು. [ಮಹಿಳೆ ಮೊಬೈಲ್ ಬಳಸಿದರೆ 10 ಸಾವಿರ ದಂಡ]

ನೀರಿಗೆ ಹಾಕಿದ ಮೊಬೈಲ್‌­ಗಳನ್ನು ರಿಪೇರಿ ಮಾಡಿಸಿಕೊಡುವಂತೆ ವಿದ್ಯಾರ್ಥಿಗಳು ವೈ.ಎನ್.ಶರ್ಮಾ ವಿರುದ್ಧ ಒಂದೂವರೆ ತಾಸು ಪ್ರತಿಭಟನೆ ನಡೆಸಿದರು. ಘಟನೆ ತಿಳಿದು ಕಾಲೇಜಿಗೆ ಆಗಮಿಸಿದ ವಿದ್ಯಾ­ರಣ್ಯ­ಪುರ ಪೊಲೀ­ಸರು, ಪರಿಸ್ಥಿತಿಯನ್ನು ನಿಯಂತ್ರಿ­ಸಿದರು. ನಂತರ ಶರ್ಮಾ ಅವರು, ಮೊಬೈಲ್ ರಿಪೇರಿ ಮಾಡಿಸಿಕೊಡಲು ಒಪ್ಪಿಗೆ ನೀಡಿದರು.

ಅಶ್ಲೀಲ ಸಂದೇಶ ರವಾನೆ : ಕಾಲೇಜಿನ 3ನೇ ಸೆಮಿಸ್ಟರ್‌ನ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ತರಗತಿ ಅವಧಿ­ಯಲ್ಲಿ ಸಹಪಾಠಿಯ ಮೊಬೈಲ್‌ಗೆ ವಾಟ್ಸ್‌ ಅಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಆದರೆ, ಆತ ಮೊಬೈಲ್‌ಅನ್ನು ಮನೆಯಲ್ಲೇ ಬಿಟ್ಟು ತರಗತಿಗೆ ಬಂದಿದ್ದ­ರಿಂದ ಆತನ ಪೋಷಕರು ಸಂದೇಶಗಳನ್ನು ವೀಕ್ಷಿಸಿ­ದ್ದರು.

ಪೋಷಕರು ಈ ಕುರಿತು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದ್ದರಿಂದ ತರಗತಿ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಪ್ರತಿದಿನ ಸೆಕ್ಯುರಿಟಿ ಗಾರ್ಡ್‌ ಮೂಲಕ ತಪಾ­ಸಣೆ ಮಾಡಿಸಿ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡಲಾಗುತ್ತಿತ್ತು. ಆದರೂ ಮಂಗಳವಾರ ಮೂರು ಮೊಬೈಲ್‌ಗಳು ಪತ್ತೆಯಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+