• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಯುವತಿಯರ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟ ಕಾನೂನು ವಿದ್ಯಾರ್ಥಿ

|
Google Oneindia Kannada News

ಬೆಂಗಳೂರು, ನ. 23: ನಗರದ ಹೊಸಕೆರೆಹಳ್ಳಿಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನ ಪ್ರಕರಣ ದಾಖಲಾಗಿದೆ. ಈತನ ಮೇಲೆ ಯುವತಿಯರ ಶೌಚಾಲಯಕ್ಕೆ ಇಣುಕಿ ನೋಡಿದ ಮತ್ತು ಅವರ ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಿದ ಆರೋಪವಿದೆ.

ಆರೋಪಿಯನ್ನು ಕಾನೂನು ವ್ಯಾಸಂಗ ಮಾಡುತ್ತಿರುವ 21 ವರ್ಷದ ಶುಭಂ.ಎಂ. ಆಜಾದ್ ಎಂದು ಗುರುತಿಸಲಾಗಿದೆ. ವಿಶ್ವವಿದ್ಯಾಲಯ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶುಭಂ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು: ಪಾಕ್ ಪರ ಘೋಷಣೆ ಮೂವರು ವಿದ್ಯಾರ್ಥಿಗಳ ಬಂಧನ, ಬಿಡುಗಡೆಬೆಂಗಳೂರು: ಪಾಕ್ ಪರ ಘೋಷಣೆ ಮೂವರು ವಿದ್ಯಾರ್ಥಿಗಳ ಬಂಧನ, ಬಿಡುಗಡೆ

ಆರೋಪಿ ಶುಭಂನ ಲ್ಯಾಪ್‌ಟಾಪ್, ಮೊಬೈಲ್ ಮತ್ತು ಐಪ್ಯಾಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ದಕ್ಷಿಣ ಡಿಸಿಪಿ ಪಿ ಕೃಷ್ಣಕಾಂತ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ಪಡೆಯುತ್ತಿದ್ದಾರೆ.

ಆರೋಪಿ ಶುಭಂ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಇಣುಕಿ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡುತ್ತಿದ್ದರು. ಇಂತಹ ಕೃತ್ಯದಲ್ಲೇ ಹಿಂದೆಯೂ ಒಮ್ಮೆ ಸಿಕ್ಕಿಬಿದ್ದಿದ್ದರು, ಆದರೆ ಕ್ಷಮಾಪಣೆಯನ್ನು ಕೇಳಿ ಪತ್ರ ಬರೆದುಕೊಟ್ಟ ನಂತರ ಎಚ್ಚರಿಕೆ ನೀಡಿ ಬಿಡಲಾಗಿತ್ತು.

ಆದರೆ, ತನ್ನ ತಪ್ಪುಗಳನ್ನು ಸರಿ ಪಡಿಸಿಕೊಳ್ಳದ ಶುಭಂ, ಪದೇ ಪದೇ ಇಂತಹದ್ದೆ ಕೃತ್ಯಗಳನ್ನು ಮಾಡುತ್ತಿದ್ದರು. ಈ ಬಾರಿ ಶೌಚಾಲಯದಲ್ಲಿ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ್ ನಂತರ ವಿಶ್ವವಿದ್ಯಾಲಯವು ಆತನ ವಿರುದ್ಧ ದೂರು ನೀಡಲು ನಿರ್ಧರಿಸಿತು.

College Student Booked for Allegedly Recording Obscene Video

ವಿದ್ಯಾರ್ಥಿ ಶುಭಂಗೆ ಟಾಯ್ಲೆಟ್‌ಗಳಲ್ಲಿ ಚಿತ್ರೀಕರಿಸಲಾದ ಅಶ್ಲೀಲ ವಿಡಿಯೋಗಳನ್ನು ನೋಡುವ ಅಭ್ಯಾವಿತ್ತು. ಅವರ ಲ್ಯಾಪ್‌ಟಾಪ್ ಮತ್ತು ಫೋನ್‌ಗಳಲ್ಲಿ ಅಂತಹ ವಿಡಿಯೋಗಳೇ ಹೆಚ್ಚು ತುಂಬಿದ್ದವು ಎನ್ನಲಾಗಿದೆ.

English summary
Bengaluru's private university law student booked for allegedly recording girls obscene video. FIR under the Information Technology Act. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X