ಇಂದಿರಾ ಕ್ಯಾಂಟೀನ್‌ ಉಪಹಾರದಲ್ಲಿ ಜಿರಳೆ, ದೂರು ದಾಖಲು

Recommended Video

      ಇಂದಿರಾ ಕ್ಯಾಂಟೀನ್ ನ ಉಪಾಹಾರದಲ್ಲಿ ಜಿರಳೆ ಪತ್ತೆ | Oneindia Kannada

      ಬೆಂಗಳೂರು ಅಕ್ಟೋಬರ್ 23 : ಇಂದಿರಾ ಕ್ಯಾಂಟೀನ್‌ ಉಪಹಾರದಲ್ಲಿ ಜಿರಳೆ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಉದ್ದೇಶಪೂರ್ವಕವಾಗಿ ಜಿರಳೆ ಹಾಕಿರುವ ಬಗ್ಗೆ ಬಿಬಿಎಂಪಿ ಅನುಮಾನ ವ್ಯಕ್ತಪಡಿಸಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

      ಅಕ್ಟೋಬರ್ 20ರಂದು ಮಾಲಾಗಾಳದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿನ ಬೆಳಗಿನ ಉಪಹಾರದಲ್ಲಿ ಜಿರಳೆ ಪತ್ತೆಯಾಗಿತ್ತು. ಈ ಕುರಿತ ವಿಡಿಯೋವನ್ನು ಹೇಮಂತ್ ಎಂಬುವವರು ಫೇಸ್‌ ಬುಕ್‌ನಲ್ಲಿ ಹಾಕಿದ್ದರು.

      Cockroach in Indira Canteen food : BBMP smells conspiracy

      ಬಿಬಿಎಂಪಿ ಕ್ಯಾಂಟೀನ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದೆ. ಆಗ ಉದ್ದೇಶಪೂರ್ವಕವಾಗಿ ಜಿರಳೆ ಹಾಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ಹೇಮಂತ್ ಮತ್ತು ಇತರ ಮೂವರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

      ಮಾಲಾಗಾಳದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಶೇಫ್‌ಟಾಕ್ ಸಂಸ್ಥೆಯಿಂದ ಆಹಾರ ಸರಬರಾಜು ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.

      ಇಂದಿರಾ ಕ್ಯಾಂಟೀನ್ ಯೋಜನೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಜಿರಳೆಯನ್ನು ಹಾಕಲಾಗಿದೆ ಎಂದು ಬಿಬಿಎಂಪಿ ಶಂಕಿಸಿದೆ. ಆದ್ದರಿಂದ, ಪೊಲೀಸರಿಗೆ ದೂರು ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+