ಮಹತ್ವದ ಸಮನ್ವಯ ಸಮಿತಿ ಸಭೆ ಆರಂಭ: ಹಲವು ಪ್ರಮುಖ ವಿಷಯ ಚರ್ಚೆ

ಬೆಂಗಳೂರು, ಆಗಸ್ಟ್ 31: ಮಹತ್ವದ ಸಮನ್ವಯ ಸಮಿತಿ ಸಭೆ ಆರಂಭವಾಗಿದ್ದು ಕೊಡಗು ಪ್ರವಾಹ, ಸಂಪುಟ ವಿಸ್ತರಣೆ, ಸಾಲಮನ್ನಾ ಸುಗ್ರೀವಾಜ್ಞೆ ಕುರಿತು ಚರ್ಚೆ ನಡೆಯಲಿದೆ.

ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕುಮಾರಕೃಪ ಅತಿಥಿ ಗೃಹದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಳ್, ಜೆಡಿಎಸ್ ರಾಷ್ಟ್ರೀಯ ಸಮನ್ವಯಕಾರ ಡಾನಿಷ್ ಅಲಿ ಭಾಗವಹಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ 3ನೇ ಸಭೆ ಇದಾಗಿದ್ದು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ರಾಜ್ಯದಲ್ಲಿ ಆದ ಆಡಳಿತ ಬೆಳವಣಿಗೆಗಳು ಇನ್ನಿತರ ಕಾರಣಕ್ಕೆ ಈ ಸಭೆ ಅತ್ಯಂತ ಮಹತ್ವದ್ದಾಗಿದೆ.

Coalition governments 3rd co-ordination meeting started

ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಬೇಕಿದ್ದು ಸಭೆ ಕುಮಾರಸ್ವಾಮಿ ಅವರು ಆಂಧ್ರ ಪ್ರದೇಶ ತೆರಳಿದ್ದ ಕಾರಣ ತಡವಾಗಿ ಆರಂಭವಾಗಿದೆ. ಸಭೆಗೂ ಮುನ್ನಾ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರಿಗೆ ಹಸ್ತಲಾಘವ ಮಾಡಿ ಸರ್ಕಾರ 100 ದಿನ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಸಭೆಗೆ ತೆರಳುವ ಮುನ್ನಾ ಕುಮಾರಸ್ವಾಮಿ ಅವರು ಮಾಧ್ಯಮಗಳತ್ತ ತಿರುಗಿ ನಮ್ಮಲ್ಲಿ ಒಗ್ಗಟ್ಟಿದೆ ಎಂದರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು 'ವಿ ಆರ್‌ ಒನ್' (ನಾವೆಲ್ಲಾ ಒಂದು) ಎಂದು ಹೇಳಿ ಸಭೆಗೆ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+