• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯೇ ಬಿಬಿಎಂಪಿ ಮೇಯರ್!

|

ಬೆಂಗಳೂರು, ಸೆಪ್ಟೆಂಬರ್ 22: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅಭ್ಯರ್ಥಿಯೇ ಬೆಂಗಳೂರು ಮೇಯರ್ ಹುದ್ದೆಗೆ ಏರಲಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಯಾರಾಗಲಿದ್ದಾರೆ ಬಿಬಿಎಂಪಿಯ ನೂತನ ಮೇಯರ್?

ಇಷ್ಟರಲ್ಲೇ ಅಂತಿಮ ತೀರ್ಮಾನವಾಗಲಿದೆ, ಮೇಯರ್ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷರ ಬಳಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಿಡುವುದಿಲ್ಲ ಎಂದರು.

ಬಿಬಿಎಂಪಿ ಮೇಯರ್ ಪಟ್ಟ ಕಾಂಗ್ರೆಸ್ ಕೈ ತಪ್ಪಲಿದೆ?

ಸಿಎಂ ಕುಮಾರಸ್ವಾಮಿ ದಂಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿಯವರು ದಂಗೆಯನ್ನು ಪ್ರತಿಭಟನೆ ಎಂಬ ಅರ್ಥದಲ್ಲಿ ಹೇಳಿದ್ದಾರೆ, ಇದನ್ನು ವಿವಾದ ಮಾಡುವ ಅಗತ್ಯವಿಲ್ಲ.

ಈ ಹಿಂದೆಯೂ ಬಿಜೆಪಿಯ ಶೋಭಾ ಕರಂದ್ಲಾಜೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುವಾಗ ಜನ ಬಡಿಗೆಯಲ್ಲಿ ಹೊಡೆಯುತ್ತಾರೆ ಎಂದಿದ್ದರಲ್ಲವೇ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು. ಸೆ.28ರಂದು ಬಿಬಿಎಂಪಿ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಮೇಯರ್ ಚುನಾವಣೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರಿಗೆ ಸವಾಲೊಡ್ಡಿದ್ದು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಮೇಯರ್ ಸಂಪತ್ ರಾಜ್ ಅವರ ಅಧಿಕಾರ ಅಂತ್ಯಗೊಳ್ಳಲಿದೆ.

English summary
Senior congress leader ramalingareddy clears that Congress jds will have mayor candidate. Even bjp is trying for that post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X