ಅಕಾಲಿಕ ಮರಣ; ಪತ್ರಕರ್ತರಿಗೆ ₹ಐದು ಲಕ್ಷ ನೆರವು ಘೋಷಣೆ ಮಾಡಿದ ಸಿಎಂ
ಬೆಂಗಳೂರು, ಫೆಬ್ರವರಿ 29: ಇತ್ತೀಚೆಗೆ ಅಕಾಲಿಕ ಮರಣಕ್ಕೆ ತುತ್ತಾದ 4 ಪತ್ರಕರ್ತರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಕಾಲಿಕ ಮರಣ ಹೊಂದಿದ ಪತ್ರಕರ್ತರ ಕುಟುಂಬಕ್ಕೆ ಸಿಎಂ ನೆರವು ನೀಡಿದ್ದಾರೆ.
ಈ ಕುರಿತು ಶನಿವಾರ ಪತ್ರಕರ್ತರ ನಿಯೋಗದಿಂದ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಪತ್ರಕರ್ತರ ಮನವಿ ಮೇರೆಗೆ ಸಿಎಂ ಯಡಿಯೂರಪ್ಪ ರಿಂದ ಪರಿಹಾರ ಘೋಷಣೆ ಮಾಡಲಾಗಿದೆ. ನಾಲ್ವರು ಪತ್ರಕರ್ತರ ಕುಟುಂಬಕ್ಕೆ ಸಿಎಂ ಯಡಿಯೂರಪ್ಪ ಪರಿಹಾರ ಘೋಷಣೆ ಮಾಡಿದ್ದಾರೆ.
ಇತ್ತಿಚೆಗೆ ಮರಣ ಹೊಂದಿದ್ದ ಪತ್ರಕರ್ತರಾದ ಗಜಾನನ ಹೆಗಡೆ, ಬಿ ಆರ್ ರೋಹಿತ್, ರವಿರಾಜ ವಳಲಂಬೆ, ದಿಗಂಬರ ಗರುಡಾ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಇದಕ್ಕೆ ಪತ್ರಕರ್ತರ ನಿಯೋಗ ಧನ್ಯವಾದ ಸಲ್ಲಿಸಿದೆ. ಸಿಎಂ ಕ್ರಮಕ್ಕೆ ಮಾಧ್ಯಮ ವಲಯದಿಂದ ಅಪಾರ ಮೆಚ್ಚುಗೆ ಕೇಳಿ ಬಂದಿದೆ.












Click it and Unblock the Notifications