ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸಿಎಂ ಉಗ್ರಾವತಾರ
ಬೆಂಗಳೂರು, ಜೂ.17: ಕಸ ವಿಲೇವಾರಿ ಸಮಸ್ಯೆ, ಕಾಮಗಾರಿಗಳಲ್ಲಿ ವಿಳಂಬ, ತೆರಿಗೆ ಸಂಗ್ರಹದಲ್ಲಿ ವೈಫಲ್ಯದ ಹಿನ್ನೆಲೆಯಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ, ಬಿಬಿಎಂಪಿಯ ಉನ್ನತಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿಬಿಎಂಪಿಯ ತುರ್ತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಕಸದ ಸಮಸ್ಯೆಯನ್ನು ನಿವಾರಿಸುವಲ್ಲಿ ವಿಫಲರಾದ ಅಧಿಕಾರಿಗಳು ಮನೆಗೆ ಹೋಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
45 ನಿಮಿಷಗಳ ಸಭೆಯಲ್ಲಿ ಏನಾಯಿತು? ಸಿಎಂ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಗೆ ಹೇಗೆ ಇತ್ಯಾದಿ ವಿವರಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಅಮಾನತು ಮಾಡಿ:
ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಲು ಆಯುಕ್ತರಿಗೆ ಸೂಚಿಸಿದ್ದಾರೆ. ಅಲ್ಲದೇ ಅಮಾನತುಗೊಳಿಸುವ ಅಧಿಕಾರ ಇಲ್ಲದಿದ್ದರೆ ಆ ಅಧಿಕಾರಿಗಳ ಹೆಸರನ್ನು ಸರ್ಕಾರಕ್ಕೆ ಕಳುಹಿಸಿ ಕೊಡಿ ಎಂದು ನಿರ್ದೇಶಿಸಿದ್ದಾರೆ.
[ಜಾತಿ ವಿಷಯ ಪ್ರಸ್ತಾಪಿಸಿ ಹೆದರಿಸುತ್ತಾರೆ: ಮೇಯರ್]

ಬಿಲ್ ಹೋಗುತ್ತೆ ಅಂದರೆ ಏನು ಅರ್ಥ?
ನಗರದ ಕಸ ಹೋಗುತ್ತಿಲ್ಲ. ಆದರೆ ಗುತ್ತಿಗೆದಾರರಿಗೆ ಬಿಲ್ ಹೋಗುತ್ತಿದೆ. ಇದು ಹೇಗೆ ಸಾಧ್ಯ? ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಂಟಿ ಆಯುಕ್ತರು ಮುಖ್ಯ ಎಂಜಿನಿಯರ್ ಏನು ಮಾಡುತ್ತಿದ್ದಾರೆ? ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
[ಬಿಬಿಎಂಪಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರು]

ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ವಿಫಲ:
ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. 2,500 ಕೋಟಿ ತೆರಿಗೆ ಸಂಗ್ರಹವಾಗಬೇಕಿದ್ದಲ್ಲಿ ಕೇವಲ 1300 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಆದ್ದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳನ್ನು ನೆಟ್‌ವರ್ಕ್ ವ್ಯಾಪ್ತಿಗೆ ತಂದು ಸಮರ್ಪಕವಾಗಿ ತೆರಿಗೆ ಸಂಗ್ರಹಿಸಬೇಕು ಸಿಎಂ ಖಡಕ್ ಆದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
[ಬೆಂಗಳೂರಿನಲ್ಲಿ ಉದ್ದಿಮೆ ಪರವಾನಗಿ ಆಂದೋಲನ]

ಡೈರಿ ಎಲ್ಲಿ?
ಸಭೆಯಲ್ಲಿ ಸಿಎಂ 'ಕೆಲಸದ ಡೈರಿ ಕೊಡಿ' ಎಂದು ಕೇಳಿದ್ದಕ್ಕೆ ' ನಮ್ಮ ಬಳಿ ಇಲ್ಲ' ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ. ಅಧಿಕಾರಿಗಳ ಉತ್ತರಕ್ಕೆ ಕೆಂಡಮಂಡಲವಾದ ಸಿಎಂ 'ಸಭೆ ಬರುವಾಗ ಡೈರಿ ಇಲ್ಲ ಅಂದರೆ ಏನು ಅರ್ಥ? ನಿಮ್ಮ ಮುಖ ನೋಡಲು ಸಭೆ ಕರೆದಿದ್ದೇನಾ? ನಿಮಗೆ ಮೊಬೈಲ್,ಕಾರು, ಮನೆ ಇತ್ಯಾದಿ ಸೌಲಭ್ಯ ನೀಡೋದು ಯಾಕೆ?' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರಕ್ಕೆ ಕೆಟ್ಟ ಹೆಸರು
ನಿಮ್ಮ ಬೇಜವಾಬ್ದಾರಿ ಕೆಲಸದಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಬಿಜೆಪಿ ಸರ್ಕಾರದ ಅಧಿಕಾರ ವೇಳೆ ಒಂದು ವರ್ಷದೊಳಗೆ ಕಸ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ ಅವಧಿ ಮುಗಿದರೂ ಕಸದ ಸಮಸ್ಯೆ ಇನ್ನು ಮುಗಿದಿಲ್ಲ.ಯಾರ್‍ದೋ ಶಿಫಾಸಿನ ಮೇಲೆ ಇಲ್ಲಿಗೆ ಬರುತ್ತೀರಿ. ಎಷ್ಟು ಹೇಳಿದರೂ ಕೆಲಸ ಮಾಡದಷ್ಟು ದಪ್ಪ ಚರ್ಮವೇನ್ರೀ ನಿಮ್ದು? ಎಂದು ಸಿಎಂ ಸಭೆಯಲ್ಲಿದ್ದ ಅಧಿಕಾರಿಗಳ ವಿರುದ್ಧ ಹಾರಿಹಾಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
[ಕಸದ ಸಮಸ್ಯೆ ನಿವಾರಣೆಗೆ ಆರು ತಿಂಗಳ ಗಡುವು- ಸಿಎಂ ಜುಲೈ, 2013]

ಅಧಿಕಾರಿಗಳಿಗೆ ಡೆಡ್‌ಲೈನ್:
ಬಿಬಿಎಂಪಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಆರು ತಿಂಗಳ ಡೆಡ್‌ಲೈನ್ ನಿಗದಿಪಡಿಸಿದ್ದು, ಈ ಅವಧಿ ಒಳಗಡೆ ಸಮಸ್ಯೆಗಳ ಪರಿಹಾರವಾಗಬೇಕು. ಸಮಸ್ಯೆಗಳು ಪರಿಹಾರವಾಗದಿದ್ದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಮತ್ತೊಮ್ಮೆ ನನ್ನ ಉಗ್ರಾವತಾರ ನೋಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications