ಬೆಂಗಳೂರು 'ನಮ್ಮ ಜಾತ್ರೆ': 16 ದಿನಗಳ BLR ಹಬ್ಬಕ್ಕೆ ನ.30ರಂದು ಚಾಲನೆ, 500ಕ್ಕೂ ಅಧಿಕ ಕಲಾವಿದರಿಂದ ಕಾರ್ಯಕ್ರಮ
ಬೆಂಗಳೂರು, ನವೆಂಬರ್ 28: ಬೆಂಗಳೂರಿನ ವಿಧಾನಸೌಧ ಮುಂಭಾಗ 'ಅನ್‌ಬಾಕ್ಸಿಂಗ್ ಬಿಎಲ್‌ಆರ್' ವತಿಯಿಂದ ಆಯೋಜಿಸಲಾಗಿರುವ ಬಹುನಿರೀಕ್ಷಿತ "ಬಿಎಲ್‌ಆರ್‌ಹಬ್ಬ"ವು ಇದೇ ನವೆಂಬರ್ 30 ರಿಂದ ಆರಂಭವಾಗಲಿದೆ. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯಲಿರುವ "ನಮ್ಮ ಜಾತ್ರೆ"ಗೆ ಚಾಲನೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಬಿಎಲ್‌ಆರ್‌ಹಬ್ಬ ಉದ್ಘಾಟಿಸಲಿದ್ದಾರೆ.
ನವೆಂಬರ್ 30ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂದೆ ದೊಡ್ಡ ಕಾರ್ಯಖ್ರಮ ನಡೆಯಲಿದೆ. "ನಮ್ಮ ಜಾತ್ರೆ" ಹಾಗೂ ಬಿಎಲ್‌ಆರ್ ಹಬ್ಬದ ಉದ್ಘಾಟನೆಯಂದು ಕರ್ನಾಟಕದ ಶ್ರೀಮಂತ ಪರಂಪರೆ, ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ ಎಂದು 'ಅನ್‌ಬಾಕ್ಸಿಂಗ್ ಬಿಎಲ್‌ಆರ್' ಸದಸ್ಯರು ತಿಳಿಸಿದ್ದಾರೆ.

ಕರ್ನಾಟಕದಾದ್ಯಂತ 50 ವೈವಿಧ್ಯಮಯ ಜಾನಪದ ನೃತ್ಯ ತಂಡಗಳಿಂದ 500 ಕ್ಕೂ ಹೆಚ್ಚು ಜಾನಪದ ನೃತ್ಯಗಾರರ ಪಾಲ್ಗೊಂಡು ಬೃಹತ್ ಕಾರ್ಯಕ್ರಮ ಡನೆಸಿಕೊಡಲಿದ್ದಾರೆ. ಅತ್ಯುತ್ತಮ ಪ್ರದರ್ಶನಗಳು ನಡೆಯಲಿವೆ. ವಿಶೇಷವಾಗಿ ಸಂಯೋಜಿಸಿದ ಸಂಗೀತಕ್ಕೆ ಹೊಂದಿಸಲಾದ ಈ ಪ್ರದರ್ಶನಗಳು ರಾಜ್ಯದ ನೃತ್ಯ ಪ್ರಕಾರಗಳ ಶ್ರೀಮಂತ ವೈವಿಧ್ಯತೆಯ ರೂಪಗಳನ್ನು ಅನಾವರಣಗೊಳಿಸಲಿವೆ.
ವಿಧಾನಸೌಧದ ಮುಂದೆ ನಡೆಯುವ ಈ ಭವ್ಯ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ. ಉದ್ಘಾಟನೆ ಹಾಗೂ ಕಲಾ ಪ್ರದರ್ಶನ ಬಳಿಕ ಅರ್ಧ ಕಿಲೋಮೀಟರ್ ಉದ್ದದ ಭವ್ಯ ಮೆರವಣಿಗೆಯ ನಡೆಯಲಿದೆ. ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಅತ್ಯುನ್ನತ ಅಂಶಗಳನ್ನು ಈ ಮೆರವಣಿಗೆ ವೇಳೆ ಪ್ರರ್ಶಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಗೌರವ
ಇನ್ನೂ ಮೆರವಣಿಗೆಯುದ್ದಕ್ಕೂ ರೋಮಾಂಚಕ ನೃತ್ಯಗಾರರು, ಗಾಯಕರು, ಎತ್ತಿನ ಬಂಡಿಗಳು ಮತ್ತು ಹೂವಿನ ಪಲ್ಲಕ್ಕಿಕ್ಕೆ ಸಾಗಲಿದೆ. ಈ ಮೆರವಣಿಗೆಯ ಮತ್ತೊಂದು ವಿಶೇಷತೆಯೆಂದರೆ ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಅರ್ಪಿಸಲಾಗುತ್ತದೆ.
ವಿಧಾನಸೌಧದಿಂದ ಆರಂಭವಾಗುವ ಈ ನಮ್ಮ ಜಾತ್ರೆಯ ಭವ್ಯ ಮೆರವಣಿಗೆಯು ಬೆಂಗಳೂರಿನ ಹೃದಯಭಾಗದಲ್ಲಿ ಸಂಚರಿಸಿ ಎಂ.ಜಿ. ರಸ್ತೆಯಲ್ಲಿ ಮುಕ್ತಾಯಗೊಳ್ಳಲಿದೆ. ರಾತ್ರಿ 10 ಗಂಟೆವರೆಗೂ ಜಾನಪದ ಸಂಗೀತ ಮತ್ತು ನೃತ್ಯದ ನೇರ ಪ್ರದರ್ಶನಗಳೊಂದಿಗೆ ಮೆಟ್ರೋ ರಂಗೋಲಿ ಬೌಲೆವಾರ್ಡ್‌ವರೆಗೂ ನಡೆಯಲಿದೆ.
ಸಂಪ್ರದಾಯ, ಸಂಸ್ಕೃತಿ, ಕಲೆಗಳ ಪ್ರದರ್ಶನ
ಬಿಎಲ್‌ಆರ್ ಹಬ್ಬದ ಮುಖ್ಯ ಸಂಚಾಲಕ ವಿ. ರವಿಚಂದರ್ ಮಾತನಾಡಿ, "ಬಿಎಲ್‌ಆರ್ ಹಬ್ಬ ಕೇವಲ ಒಂದು ಹಬ್ಬವಲ್ಲ, ಇದು ಬೆಂಗಳೂರಿನ ಸಾರವನ್ನು ಹಿಡಿದಿಟ್ಟುಕೊಳ್ಳುವ ಚಳುವಳಿಯಾಗಿದೆ. ನಮ್ಮ ಜಾತ್ರೆಯ ಮೂಲಕ, ಅದರ ಸಾಂಸ್ಕೃತಿಕ ಹೃದಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರದ ಆಳವಾದ ಬೇರೂರಿರುವ ಸಂಪ್ರದಾಯಗಳ ಮೇಲೆ ಬೆಳಕನ್ನು ಚೆಲ್ಲುವ ಗುರಿ ಹೊಂದಿದ್ದೇವೆ ಎಂದರು.
ರಾಜ್ಯದ ಪರಂಪರೆ, ಶ್ರೀಮಂತ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ನಾಗರಿಕರಿಗೆ ತಲುಪಿಸುವ ಉದ್ದೇಶದಿಂದಾಗಿ ನಾವು ಈ ಹಬ್ಬ ಆಚರಿಸುತ್ತೇವೆ. ಈ ಹಬ್ಬದಲ್ಲಿ ಬೆಂಗಳೂರಿನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಮತ್ತು ಕ್ರಿಯಾತ್ಮಕ ಮನೋಭಾವವನ್ನು ಆಚರಿಸುವ ಉತ್ಸವಕ್ಕೆ ವೇದಿಕೆ ಆಗಲಿದೆ ಎಂದು "ಅನ್‌ಬಾಕ್ಸಿಂಗ್‌ಬಿಎಲ್‌ಆರ್ ಫೌಂಡೇಶನ್ ಸಿಇಒ ಮಾಲಿನಿ ಗೋಯಲ್ ಅಭಿಪ್ರಾಯಪಟ್ಟರು.
16 ದಿನಗಳ BLRಹಬ್ಬದ ಬಗ್ಗೆ ಸಂಪೂರ್ಣ ಮಾಹಿತಿ ನೀವು ನಿತ್ಯವು ಈ https://blrhubba.in ವೆಬ್‌ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ. ಬುಕ್ಕಿಂಗ್ ಮಾಡಲು ಇಲ್ಲಿ ಅವಕಾಶ ನೀಡಲಾಗಿದೆ.












Click it and Unblock the Notifications