• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬಸವಣ್ಣ ಹೇಳಿದಂತೆ ಮಹಿಳೆಯರಿಗೆ ಸಮಾನ ಅವಕಾಶ'

By Mahesh
|

ಬೆಂಗಳೂರು, ಮಾರ್ಚ್ 02: ಮಹಿಳೆಯರಿಗೆ ಸಮಾನ ಅವಕಾಶ ಕೊಡಬೇಕು ಅಂತಾ ಬಸವಣ್ಣನವರು ಹೇಳಿದ್ರು, ಅದರಂತೆ ‌ಕರ್ನಾಟಕದಲ್ಲಿ‌ ಮಹಿಳೆಯರಿಗೆ ಸಮಾನ ಅವಕಾಶ ಇದೆ. ಬಹುಶಃ ‌ಬೇರೆ ಯಾವುದೇ ರಾಜ್ಯದಲ್ಲಿ‌ ಈ‌ ಸೌಲಭ್ಯ ಸಿಕ್ಕಿಲ್ಲ. ಇದು ರಾಜ್ಯದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ‌ ಬರೆದಿರುವ ದಿನ..

'ಮಹಿಳೆಯರ ಬಾಳಲ್ಲಿ ಬೆಳಕು ಮೂಡಿಸುವ ಕಾರ್ಯಕ್ರಮ ಇದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವುಮೆನ್ ಆಫ್ ವರ್ತ್ ಕರ್ನಾಟಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಸಿಎಂ ಮಾತನಾಡಿ, ಇದು ರಾಜ್ಯದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ‌ ಬರೆದಿರುವ ದಿನ ಎಂದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಇಲಾಖೆಯಿಂದ ಏರ್ಪಡಿಸಿತ್ತು. ಸಚಿವ ಆರ್ ವಿ ದೇಶಪಾಂಡೆ, ಸಚಿವೆ ಗೀತಾಮಹದೇವ‌ ಪ್ರಸಾದ್ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಸೇರಿದಂತೆ ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.

ಮಹಿಳಾ ಉದ್ಯಮಿಗಳ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಹಿಳಾ ಉದ್ಯಮಿಗಳ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮೊದಲ ಬಾರಿಗೆ ಮಹಿಳಾ ಉದ್ಯಮಿಗಳ ಪಾರ್ಕ್ ಸ್ಥಾಪಿಸುವ ಶಂಕುಸ್ಥಾಪನೆಯ ಫಲಕವನ್ನು ಸಿದ್ದರಾಮಯ್ಯ ಅನಾವರಣಗೊಳಿಸಿದರು.

ಕನಕಪುರದ ಹಾರೋಹಳ್ಳಿ, ಮೈಸೂರಿನ ಇಮ್ಮಾವು, ಬಳ್ಳಾರಿಯ ಕುಡಿತಿನಿ, ಧಾರವಾಡದ ಗಾಮನಗಟ್ಟಿ ಯಲ್ಲಿ ಸ್ಥಾಪನೆಯಾಗಲಿದೆ. ಕೆಐಎಡಿಬಿಯಿಂದ ಮಹಿಳಾ ಉದ್ಯಮಿಗಳ ಪಾರ್ಕ್ ಸ್ಥಾಪಿಸಲಾಗುತ್ತಿದೆ.

ಮಹಿಳೆಯರಿದ್ದರೆ ಜಯ ಶತಃ ಸಿದ್ಧ

ಹೋರಾಟದಲ್ಲಿ ಮುಂಚೂಣಿಯಲ್ಲಿ ಮಹಿಳೆಯರಿದ್ದರೆ ಜಯ ಶತಃ ಸಿದ್ಧವೆಂದು ಗಾಂಧಿಜಿಯವರು ಹೇಳಿದ್ದಾರೆ. ಗಾಂಧೀಜಿ ಪಾಠ ಓದಿಕೊಂಡಿದ್ದೀರಾ ಅಲ್ವಾ ಎಂದು ಮಹಿಳಾ ಉದ್ಯಮಿಗಳಿಗೆ ಸಿಎಂ ಪ್ರಶ್ನಿಸಿದರು.

ಪಂಚಾಯ್ತಿಯಲ್ಲಿ ಮೀಸಲಾತಿಯ ತಿದ್ದುಪಡಿ ‌

ಪುರುಷರಷ್ಟೇ ಸಮಾನ ಅವಕಾಶ ಮಹಿಳೆಯರಿಗೂ ಸಿಗಬೇಕು. ಅಧಿಕಾರಿದಲ್ಲಿ ಸಮಾನ ಅವಕಾಶ ಸಿಗಬೇಕು. ಅದಕ್ಕಾಗಿ ಪಂಚಾಯ್ತಿಯಲ್ಲಿ ಮೀಸಲಾತಿಯ ತಿದ್ದುಪಡಿ ‌ಮಾಡಲಾಗಿದೆ. ಪ್ರಕೃತಿ ನಿಯಮದಂತೆ‌ ಪುರುಷರಷ್ಢೆ ಮಹಿಳೆಯರು ಸಮಾನಾರಾಗಿರಬೇಕು. ಆದ್ರೆ ಅದು ಹಲವಾರು ಕಾರಣಗಳಿಂದ ಅದು ಕಡಿಮೆಯಾಗುತ್ತಿದೆ.

ಮಹಿಳೆಯರಿಗೆ ರಾಜಕೀಯದಲ್ಲಿ ಅಧಿಕಾರ

ವಿಧಾನಸಭೆ, ಲೋಕಸಭೆಗಳಲ್ಲಿಯೂ‌‌ ಮಹಿಳೆಯರು ಸಮಾನ ಸಂಖ್ಯೆಯಲ್ಲಿರಬೇಕು. ಮಹಿಳೆಯರಿಗೆ ರಾಜಕೀಯ ಅಧಿಕಾರ ಇಲ್ದೆ ಇದ್ರೆ ಬೆಳವಣಿಗೆ ಅಸಾಧ್ಯ. ಮಹಿಳೆಯರು ನಿರ್ಣಾಯಕ ಸ್ಥಾನದಲ್ಲಿರೋದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ‌ಹೋರಾಟ ಮಾಡಬೇಕು.

ಮಹಿಳೆಯರಿಗೆ 34,388 ಕೋಟಿ ರೂಪಾಯಿ

ಮಹಿಳೆಯರಿಗೆ 34,388 ಕೋಟಿ ರೂಪಾಯಿ ‌ಮೀಸಲಿಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಮಾಡಬೇಕು ಎಂಬ ಚಿಂತನೆ ಇತ್ತು. ಆದ್ರೆ ಎಲ್ಲಾ ಇಲಾಖೆಗಳಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ ಎಂದ ಸಿಎಂ ಸಿದ್ದರಾಮಯ್ಯ.

ಮಹಿಳೆಯರಿಗೆ ಶೇ.9ರಷ್ಟು ಸ್ಥಾನ ಮಾನ

ಬಿಬಿಎಂಪಿಯಲ್ಲಿ ಮೀಸಲಾತಿ ಇದ್ದ ಕಾರಣ, 102ಮಹಿಳೆಯರು ಗೆದ್ದಿದ್ದಾರೆ. ವಿಧಾನಸಭೆ, ಲೋಕಸಭೆಯಲ್ಲಿ ನಮಗೆ ಮಹಿಳೆಯರಿಗೆ ಶೇ.9ರಷ್ಟು ಸ್ಥಾನ ಮಾನ ಕೊಡೋಕೆ ಆಗಲ್ಲ.ವಿಧಾನಸಭೆ, ಲೋಕಸಭೆಗಳಲ್ಲಿಯೂ‌‌ ಮಹಿಳೆಯರು ಸಮಾನ ಸಂಖ್ಯೆಯಲ್ಲಿರಬೇಕು. ಮಹಿಳೆಯರಿಗೆ ರಾಜಕೀಯ ಅಧಿಕಾರ ಇಲ್ದೆ ಇದ್ರೆ ಬೆಳವಣಿಗೆ ಅಸಾಧ್ಯ.ಮಹಿಳೆಯರು ನಿರ್ಣಾಯಕ ಸ್ಥಾನದಲ್ಲಿರೋದು ಅವಶ್ಯವಾಗಿದೆ.

ಬಿಜೆಪಿ ಪಾದಯಾತ್ರೆ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

ಲೋಕಸಭೆ, ವಿಧಾನಸಭೆ ಗಳಲ್ಲಿ ಮಹಿಳಾ ಮೀಸಲಾತಿ ಇರಬೇಕು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ‌ಹೋರಾಟ ಮಾಡಬೇಕು. ಸುಮ್ಮನೆ ಸ್ಟೇಜ್ ಮೇಲೆ ಕೂತು ಮಾತಾಡಿದ್ರೆ ಆಗಲ್ಲ, ಅದಕ್ಕಾಗಿ ಹೋರಾಟ ಮಾಡಬೇಕು, ಬಿಜೆಪಿ ಪಾದಯಾತ್ರೆ ವಿಚಾರ. ಬೆಂಗಳೂರನ್ನು ಹಾಳು ಮಾಡಿದ್ದೇ ಅವರು. ಮೊದಲು ಅವರನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು. ಬಿಜೆಪಿ ಪಾದಯಾತ್ರೆ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Karnataka Government is providing equal opportunity to men and women of the state which was a vision of Basavanna said CM Siddaramaiah. Here are the CM Siddaramaiah Speech highlights Women of Worth event held today(March 02) at Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more