Sadhvi Sail: ಕರ್ನಾಟಕ ಕೀರ್ತಿ ಹೆಚ್ಚಿಸಿದ ಶಾಸಕರ ಸಾಧ್ವಿ ಸೈಲ್; ಮಿಸ್ ವರ್ಲ್ಡ್-2027 ಗೆಲ್ಲಲಿ; ಸಿದ್ದರಾಮಯ್ಯ ವಿಶ್

ಬೆಂಗಳೂರು: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿ ಸೈಲ್ ಅವರು 61ನೇ ಸಾಲಿನ 'ಫೆಮಿನಾ ಮಿಸ್ ಇಂಡಿಯಾ' ಕಿರೀಟ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಪಕ್ಷದ ಶಾಸಕರ ಮಗಳೊಬ್ಬರು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೃತ್ಪೂರ್ವಕ ಅಭಿನಂದನೆ ತಿಳಿಸಿ ಹಾರೈಸಿದ್ದಾರೆ.

ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಮೊನ್ನೆ ಏಪ್ರಿಲ್ 18ರಂದು ನಡೆದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ 'ಫೆಮಿನಾ ಮಿಸ್ ಇಂಡಿಯಾ ಫಿನಾಲೆ ಸ್ಪರ್ಧೆ ನಡೆದಿತ್ತು. ಶಾಸಕರ ಪುತ್ರಿ ಸಾಧ್ವಿ ಸೈಲ್ ಅವರು ಗೆದ್ದು ಬೀಗಿದರು. ನಂತರ ತಂದೆಯ ಜೊತೆ ವಿಡಿಯೋ ಕಾಲ್​​​ನಲ್ಲಿ ಮಾತನಾಡಿದ್ದ ಸುದ್ದಿ ರಾಜ್ಯದೆಲ್ಲಡೆ ಹರಿದಾಡಿತ್ತು. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧ್ವಿ ಸೈಲ್ ಅವರಿಗೆ ಶುಭ ಕೋರಿ ಸೋಮವಾರ 'ಎಕ್ಸ್' ಪೋಸ್ಟ್ ಮಾಡಿದ್ದಾರೆ.

CM Siddaramaiah

'ಮಿಸ್ ವರ್ಲ್ಡ್ 2027'ರ ಸ್ಪರ್ಧೆ ಗೆಲ್ಲಲಿ: ಸಿಎಂ

ಸಿಎಂ ಸಿದ್ದರಾಮಯ್ಯ ಅವರು, 'ಒಡಿಶಾದ ಭುವನೇಶ್ವರದಲ್ಲಿ ನಡೆದ 61ನೇ "ಫೆಮಿನಾ ಮಿಸ್ ಇಂಡಿಯಾ -2026" ಕಿರೀಟ ಮುಡಿಗೇರಿಸಿಕೊಂಡಿರುವ ಕಾರವಾರದ ಕಾಂಗ್ರೆಸ್ ಶಾಸಕರಾದ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರಿಗೆ ಅಭಿನಂದನೆಗಳು.

ತಮ್ಮ ಮಗಳ ಈ ಸಾಧನೆಯನ್ನು ಖುದ್ದು ಸತೀಶ್ ಸೈಲ್ ಅವರೇ ನನ್ನೊಂದಿಗೆ ಹಂಚಿಕೊಂಡು, ಹರ್ಷ ವ್ಯಕ್ತಪಡಿಸಿದರು. ಮಗಳ ಕನಸುಗಳಿಗೆ ಬೆಂಬಲವಾಗಿ ನಿಂತಿರುವ ಅವರನ್ನು ಕೂಡ ಇದೇ ವೇಳೆ ಅಭಿನಂದಿಸಿದ್ದು, ಮುಂದಿನ ವರ್ಷ '2027ರ ಮಿಸ್ ವರ್ಲ್ಡ್ ಸ್ಪರ್ಧೆ'ಯಲ್ಲೂ ಭಾರತವನ್ನು ಸಾಧ್ವಿ ಪ್ರತಿನಿಧಿಸಲಿದ್ದಾರೆ. ಅಲ್ಲಿಯೂ ಗೆಲುವು ಸಾಧಿಸಿ ಜಾಗತಿಕ ಮಟ್ಟದಲ್ಲಿ ಕರ್ನಾಟಕ ಕೀರ್ತಿ ರಾರಾಜಿಸುವಂತಾಗಲಿ' ಎಂದು ಸಿಎಂ ಹಾರೈಸಿದ್ದಾರೆ.

ಈ ಫಿನಾಲೆ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ ಹತ್ತಾರು ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಈ ವೇಳೆ ಸುಮಾರು 29 ಮಂದಿಯನ್ನು ಹಿಂದಿಕ್ಕಿದ ಶಾಸಕರ ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರು ಗೋವಾ ಪ್ರತಿನಿಧಿಯಾಗಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ಹರ್ಷವನ್ನು ತಂದೆಯೊಂದಿಗೆ ವಿಡಿಯೋ ಕರೆ ಮೂಲಕ ಹಂಚಿಕೊಂಡು ಖುಷಿಪಟ್ಟಿದ್ದರು.

ಸಾಧ್ವಿ ಸೈಲ್ ಮೊದಲ ಪ್ರತಿಕ್ರಿಯೆ

'ನನಗೆ ಈ ಗೆಲುವು ತುಂಬಾ ಖುಷಿ ಕೊಟ್ಟಿದೆ. ನನಗೆ ಈ ಅವಕಾಶ ದೊರೆತಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ದೇಶವನ್ನು ಹೆಮ್ಮೆ ಪಡುವಂತೆ ಮಾಡಬೇಕೆಂಬ ನನ್ನ ಉದ್ದೇಶ ಈಡೇರಿದೆ' ಎಂದು ಗೆಲುವಿನ ಬಳಿಕ ಸಾಧ್ವಿ ಅವರು ಪ್ರತಿಕ್ರಿಯಿಸಿದ್ದರು. ಸಾಧ್ವಿ ಸೈಲ್ ಅವರು ಕೆನಡಾದ ಬ್ರಿಟಿಷ್ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಅವರ ಸಾಧನೆಗೆ ಸ್ನೇಹಿತರು ಮಾತ್ರವಲ್ಲದೇ ಶಾಸಕ ತಂದೆ ಆಪ್ತರು, ಪಕ್ಷದ ಮುಖಂಡರು ಶುಭಾಶಯ ತಿಳಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+