ನಾವು ಪಾಂಡವರು, ಬಿಜೆಪಿಯವರು ಕೌರವರು: ಸಿದ್ದರಾಮಯ್ಯ
ಬೆಂಗಳೂರು, ಜನವರಿ 16: ಸರಿಯಾದ ದಾರಿಯಲ್ಲಿ ನಡೆಯುತ್ತಿರುವ ನಾವು ಪಾಂಡವರು, ಬಿಜೆಪಿಯವರು ಕೌರವರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚುನಾವಣೆ ಯುದ್ಧವಿದ್ದಂತೆ, ಸರಿಯಾದ ದಾರಿಯಲ್ಲಿ ನಡೆಯುತ್ತಿರುವ ನಾವು ಪಾಂಡವರು, ತಪ್ಪು ಹಾದಿಯಲ್ಲಿ ನಡೆಯುತ್ತಿರುವ ಬಿಜೆಪಿಯವರು ಕೌರವರು ಎಂದು ಅವರು ಪಕ್ಷದ ಸದಸ್ಯರನ್ನು ಮಹಾಭಾರತ ಪಾತ್ರಗಳಿಗೆ ಹೋಲಿಸಿದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೋವಾ ನೀರಾವರಿ ಸಚಿವರು ಕರ್ನಾಟಕದ ಬಗ್ಗೆ ಮಾತನಾಡಿದ ಹೇಳಿಕೆ ವಿರುದ್ಧ ಹರಿಹಾಯ್ದರು. "ಆತನ ಭಾಷೆ ಆತನ ಸಂಸ್ಕೃತಿ ತೋರಿಸುತ್ತಿದೆ, ಆತ ಸಚಿವ ಸ್ಥಾನದಲ್ಲಿ ಕೂರಲು ಯೋಗ್ಯನಲ್ಲ' ಎಂದರು.

ಪರಮೇಶ್ವರ್ ಗರಂ
ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪದಾಧಿಕಾರಿಗಳ ಮೇಲೆ ಸಿಟ್ಟಾದರು.
54 ಪದಾಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಪಕ್ಷ ಅವರಿಗೆ ಬೇಡ ಎಂದ ಮೇಲೆ ಪಕ್ಷಕ್ಕೂ ಅವರು ಬೇಡ ಎಂದರು.
ಯೂತ್ ಕಾಂಗ್ರೆಸ್, ಓಬಿಸಿ ಘಟಕ ಮತ್ತು ಮಹಿಳಾ ಘಟಕಗಳ ಕಾರ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಘಟಕಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಚುನಾವಣೆ ಸಮೀಪದಲ್ಲಿದ್ದು, ಪದಾಧಿಕಾರಿಗಳು ಕೆಲ ತಿಂಗಳುಗಳ ಕಾಲ ವೈಯಕ್ತಿಕ ಕಾರ್ಯಗಳನ್ನು ಬದಿಗಿಟ್ಟು, ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದರು.












Click it and Unblock the Notifications