ಖಾತೆ-ಕ್ಯಾತೆಯೇ ಮುಗಿದಿಲ್ಲ ಬಜೆಟ್ ಮಂಡಿಸಲು ಕುಮಾರಸ್ವಾಮಿ ರೆಡಿ
ಬೆಂಗಳೂರು, ಜೂನ್ ೦9: ಸಂಪುಟ ವಿಸ್ತರಣೆ ಬಳಿಕ ಜೆಡಿಎಸ್-ಕಾಂಗ್ರೆಸ್ ಶಾಸಕರ ಅಸಮಾಧಾನವೇ ಇನ್ನೂ ಶಮನವಾಗಿಲ್ಲ ಅಷ್ಟರಲ್ಲಿ ಹೊಸ ಮೈತ್ರಿ ಸರ್ಕಾರ ಬಜೆಟ್ ಮಂಡಿಸಲು ಸಿದ್ಧತೆ ಪ್ರಾರಂಭಿಸಿದೆ.
ಜುಲೈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಮೈತ್ರಿ ಸರ್ಕಾರವು ಬಜೆಟ್ ಮಂಡಿಸಲಿದೆ. ಈ ಮಾಹಿತಿಯನ್ನು ಸಿಎಂ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ಖಾತೆ ಹಂಚಿಕೆಯಿಂದ, ಮಂತ್ರಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಗಳು ವಾರದಲ್ಲಿ ಮುಗಿಯಲಿವೆ ಎಂದು ಭರವಸೆ ನೀಡಿರುವ ಕುಮಾರಸ್ವಾಮಿ ಅವರು, ರಾಜಕೀಯ ಮೇಲಾಟದಲ್ಲಿ ಆಡಳಿತ ಯಂತ್ರ ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

10-15 ದಿನಗಳಲ್ಲಿ ರೈತ ಸಾಲ ಮನ್ನಾದ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದ ಅವರು, ಬಜೆಟ್‌ನಲ್ಲಿ ರೈತ ಸಾಲಮನ್ನಾದ ಘೋಷಣೆ ಮಾಡುವ ಮುನ್ಸೂಚನೆ ನೀಡಿದರು.
ಪ್ರಬಲ ಖಾತೆ ಸಿಗದೇ ಅಸಮಾಧಾನಗೊಂಡಿರುವ ಜೆಡಿಎಸ್ ಶಾಸಕರ ಬಗ್ಗೆ ಆಕ್ರೋಶದಿಂದ ಮಾತನಾಡಿದ ಕುಮಾರಸ್ವಾಮಿ, ಜನರ ಸೇವೆ ಮಾಡಲು ನೀರಾವರಿ, ಉನ್ನತ ಶಿಕ್ಷಣ ಖಾತೆಗಳಿಗಿಂತಲೂ ಉತ್ತಮ ಖಾತೆ ಬೇಕಾ? ಎಂದು ಪ್ರಶ್ನೆ ಮಾಡಿದರು. ಮೊದಲು ಸಚಿವ ಸ್ಥಾನ ಕೇಳುತ್ತಾರೆ ಆಮೇಲೆ ಮುಖ್ಯಮಂತ್ರಿ ಸ್ಥಾನವನ್ನೇ ಕೇಳುತ್ತಾರೆ ಎಂದು ಅವರು ಹೇಳಿದರು.












Click it and Unblock the Notifications