• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸದ್ಯದಲ್ಲೇ ತರಕಾರಿ, ಹಣ್ಣು ಬೆಳೆಗಾರರಿಗೂ ಸಿಎಂ ಪ್ಯಾಕೇಜ್ ಪ್ರಕಟ

|

ಬೆಂಗಳೂರು, ಮೇ 7: ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಪರಿಹಾರಕ್ಕಾಗಿ ನಿನ್ನೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದೇ ರೀತಿ ಸದ್ಯದಲ್ಲೇ ತರಕಾರಿ, ಹಣ್ಣು ಬೆಳೆಗಾರರಿಗೂ ಸಿಎಂ ಪ್ಯಾಕೇಜ್ ಪ್ರಕಟ ಮಾಡಲಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

''ಕಳೆದ ಒಂದು ತಿಂಗಳಿನಿಂದ ಎಲ್ಲ 30 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ರೈತರ ಸಮಸ್ಯೆ ಆಲಿಸಿ ಸಿಎಂಗೆ ರೈತರ ನೆರವಿಗೆ ಬರುವಂತೆ ವರದಿ ರೂಪದಲ್ಲಿ ಮನವಿ ಮಾಡಿದ್ದೆ. ಇದಕ್ಕೆ ಸಂಬಂಧಿಸಿ ಸಿಎಂ ನಿನ್ನೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮುಖ್ಯವಾಗಿ ಹೂ ಬೆಳೆಗಾರ ನೆರವಿಗೆ ಸಿಎಂ ಬಂದಿದ್ದಾರೆ.'' ಎಂದಿದ್ದಾರೆ.

ಕೊರೊನಾ ಸಂಕಷ್ಟ: 1,610 ಕೋಟಿ ರೂ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

''ಕಳಪೆ ಬಿತ್ತನೆ ಬೀಜದ ಮಾಫಿಯಾಯನ್ನು ಬಯಲು ಮಾಡಿದ್ದೇವೆ. ಆಂಧ್ರ ಮೂಲದ ಮಾಫಿಯಾ ಇದಾಗಿತ್ತು. ಆಂಧ್ರದಲ್ಲಿ ರಿಜೆಕ್ಟ್ ಆಗಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳನ್ನು ವಶಕ್ಕೆ ಪಡೆದಿದ್ದೇವೆ.'' ಎಂದು ಬಿ ಸಿ ಪಾಟೀಲ್ ತಿಳಿಸಿದ್ದಾರೆ.

ಈ ಎಲ್ಲ ಕಳಪೆ ಬಿತ್ತನೆ ಬೀಜಗಳು ಸೇರಿ ಅಂದಾಜು 10 ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ವಶಕ್ಕೆ ಪಡೆದಿದ್ದು, ಎಂಟು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

English summary
CM Yediyurappa will announce another package for vegetables and fruits farmers says Agriculture Minister BC Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X