ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಂಭ್ರಮ, ಮೊಮ್ಮಗಳ ವಿವಾಹ
ಬೆಂಗಳೂರು,ಫೆಬ್ರವರಿ 24: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ.
ಸಿಎಂ ಪುತ್ರಿ ಅರುಣಾದೇವಿ ಅವರ ಪುತ್ರಿ ಮಾಧುರ್ಯ ಅವರ ಮದುವೆ ಫೆ.25 ರಂದು ಜರುಗಲಿದ್ದು,ಫೆಬ್ರವರಿ 24 ರಂದು ಸಂಜೆ ಆರತಕ್ಷತೆ ನಡೆಯಲಿದೆ.
ಐಶ್ವರ್ಯಾ-ಅಮರ್ತ್ಯ ಹೆಗ್ಡೆ ಆರತಕ್ಷತೆ: ರಾಹುಲ್, ಪ್ರಿಯಾಂಕಾ ಭಾಗಿ
ಅರುಣಾದೇವಿ ಪುತ್ರಿ ಮಾಧುರ್ಯ ಅವರ ಮದುವೆ ನಿಖಿಲ್ ಅವರ ಜತೆ ನೆರವೇರಲಿದೆ. ಮೊಮ್ಮಗಳ ಮದುವೆ ಸಂಭ್ರದಲ್ಲಿರುವ ಯಡಿಯೂರಪ್ಪ ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ.
ಕೆಲ ದಿನಗಳಿಂದ ರಾಜಕಾರಣಿಗಳ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿ ಸಂಭ್ರಮಿಸಿದ್ದರು, ರಾಜಕೀಯ ಗಣ್ಯರು ವಧು ವರರನ್ನು ಆಶೀರ್ವಧಿಸಿದ್ದರು.
ಇನ್ನು ಡಿಕೆ ಶಿವಕುಮಾರ್ ಪುತ್ರಿ ವಿವಾಹ ಇದೇ ತಿಂಗಳು 14 ರಂದು ನೆರವೇರಿತ್ತು. ಕೆಫೆ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ ಮಗ ಅಮಾರ್ಥ್ಯ ಜತೆ ಪುತ್ರಿ ಐಶ್ವರ್ಯಾ ಹಸೆಮಣೆ ಏರಿದ್ದರು.
ಮದುವೆಗೆ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಎಚ್‌ಡಿಮಕುಮಾರಸ್ವಾಮಿ ದಂಪತಿ, ಮಲ್ಲಿಕಾರ್ಜುನ ಖರ್ಗೆ, ಕೆ ಸುಧಾಕರ್, ಡಾ. ಜಿ. ಪರಮೇಶ್ವರ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.