ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಸ್ಕಾಂ ಒಂದು ವರ್ಷದ ಸಾಧನೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

|
Google Oneindia Kannada News

ಬೆಂಗಳೂರು, ಜುಲೈ 28: ಬೆಂಗಳೂರಿನ ಮನೆ ಮನೆಯ ಕತ್ತಲೆಯನ್ನು ದೂರವಾಗಿಸಬೇಕೆಂದರೆ ಬೆಸ್ಕಾಂನ ಅವಿರತ ಸೇವೆ ಅತ್ಯಗತ್ಯವಾಗಿ ಬೇಕೆಬೇಕು. ಬೆಸ್ಕಾಂ ಎಚ್ಚರ ತಪ್ಪಿದರೇ ಅನಾಹುತ ಕಟ್ಟಿಟ್ಟಬುತ್ತಿ. ಕರ್ನಾಟಕ ಬೊಮ್ಮಾಯಿ ಸರ್ಕಾರ ಅಧಿಕಾರವನ್ನು ವಹಿಸಿಕೊಂಡು ಒಂದು ವರ್ಷವನ್ನು ಪೂರೈಸಿದೆ. ಇದೇ ಸಮಯದಲ್ಲಿ ಬೆಸ್ಕಾಂ ಸಾಧನೆ ಏನು ಅನ್ನೋದರ ಮಾಹಿತಿ ಇಲ್ಲಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಬಿಎಸ್ ಯಡಿಯೂರಪ್ಪ ಸರ್ಕಾರ ಎರಡು ವರ್ಷ ಅಧಿಕಾರವನ್ನು ನಡೆಸಿದ ಬಳಿಕ. ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂತು. ಈ ವೇಳೆ ಸುನೀಲ್ ಕುಮಾರ್ ರವರಿಗೆ ಮಹತ್ವದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಯಿತು. ಸರ್ಕಾರಕ್ಕೆ ಒಂದು ವರ್ಷವಾಗಿರುವುದರಿಂದ ಬೆಸ್ಕಾಂನಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸವಾಗಿದೆ.

ಬಾಯ್ ಬಾಯ್ ಬಿಜೆಪಿ; ಕಾರ್ಯಕರ್ತರ ಕೋಪಾಗ್ನಿಯಲ್ಲಿ ಕಂಗಾಲಾಗುತ್ತಾ 'ಕಮಲ'!? ಬಾಯ್ ಬಾಯ್ ಬಿಜೆಪಿ; ಕಾರ್ಯಕರ್ತರ ಕೋಪಾಗ್ನಿಯಲ್ಲಿ ಕಂಗಾಲಾಗುತ್ತಾ 'ಕಮಲ'!?

ಬೆಸ್ಕಾಂನಲ್ಲಿ ಈ ಹಿಂದಿನ ಸರ್ಕಾರಗಳಿದ್ದರು ಕೆಲವು ಲೋಪದೋಷಗಳನ್ನು ಒಳಗೊಂಡಿತ್ತು. ಮನೆಮನೆಗೂ ವಿದ್ಯುತ್ ತಲುಪಿಸುವ ಯೋಜನೆ ಬೆಳಕು ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿತ್ತು. ಡಿಜಿಟಲ್ ಮೀಟರ್ ಅಳವಡಿಕೆ, ಚಾರ್ಜಿಂಗ್ ಪಾಯಿಂಟ್ ಅಳವಡಿಕೆ, ಟ್ರಾನ್ಸ್‌ ಫಾರ್ಮರ್‌ ಬದಲಾವಣೆ ಸೇರಿದಂತೆ ಹಲವು ಜನಪರವಾದ ಯೋಜನೆಯನ್ನು ಕಾರ್ಯಗತಗೊಳಿಸಲು ಯಶಸ್ವಿಯಾಗಿದೆ. ಸುನೀಲ್ ಕುಮಾರ್ ರವರು ಇಂಧನ ಖಾತೆ ವಹಿಸಿದ ಬಳಿಕ ಬೆಸ್ಕಾಂನಲ್ಲಾದ ಬದಲಾವಣೆ ನಿರಂತರವಾಗಿ ಸಾಗುತ್ತಿದೆ.

ಕತ್ತಲಿದ್ದ ಬೆಂಗಳೂರಿನ ಮನೆಗಳಿಗೆ ಬೆಳಕು

ಕತ್ತಲಿದ್ದ ಬೆಂಗಳೂರಿನ ಮನೆಗಳಿಗೆ ಬೆಳಕು

ಬೆಂಗಳೂರು ಅಂದರೆ ಎಲ್ಲಾ ಮನೆಗಳಿಗೂ ವಿದ್ಯುತ್ ಸೌಲಭ್ಯ ಇದ್ದೆ ಇದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಬೆಂಗಳೂರಿನ 35021 ಮನೆಗಳಿಗೆ ವಿದ್ಯುತ್ ಸಂಪರ್‍ಕ ಇರಲಿಲ್ಲ. ಈ ಮನೆಗಳಿಗೆ ಬೆಳಕು ಎಂಬ ಯೋಜನೆ ಅಡಿ ಮನೆ ಮನೆಗೂ ವಿದ್ಯುತ್ ಅನ್ನು ನೀಡಲಾಗಿದೆ. ಇದಕ್ಕಾಗಿ ಬೆಸ್ಕಾಂನಲ್ಲಿ 25.07 ಕೋಟಿ ಹಣವನ್ನು ವ್ಯಯಮಾಡಲಾಗಿದ್ದು. ವಿದ್ಯುತ್ ರಹಿತವಾಗಿದ್ದ ಮನೆಗಳಿಗೆ ವಿದ್ಯುತ್ ನೀಡುವ ಮೂಲಕ ಕತ್ತಲಿದ್ದ ಮನೆಗೆ ನಿಜಕ್ಕೂ ಬೆಳಕಾಗಿದೆ.

ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಪ್ರಗತಿ

ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಪ್ರಗತಿ

ಬೆಸ್ಕಾಂನ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ (BMAZ) ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗುವ ಡಿಎಲ್ಎಮ್ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ನೀಡಲಾಗುತ್ತಿದೆ. 17,68,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಕಾರ್ಯಾರಂಭಗೊಂಡಿದೆ. ರಾಜಾಜಿನಗರ, ರಾಜರಾಜೇಶ್ವರಿನಗರ, ಇಂದಿರಾನಗರ ಮತ್ತು ವೈಟ್ ಫೀಲ್ಡ್ ವಿಭಾಗಗಳಲ್ಲಿ ಈಗಾಗಲೇ 16,000 ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮಾಪನಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಮೀಟರ್ ಬದಲಾವಣೆ ಕಾರ್ಯ ಭರದಿಂದ ಸಾಗಿದ್ದು ಪ್ರತಿನಿತ್ಯ 700 ರಿಂದ 900 ಮೀಟರ್ ಗಳನ್ನು ಅಳವಡಿಸಲಾಗುತ್ತಿದೆ. ಬೆಸ್ಕಾಂ ಒಂದು ವಿಭಾಗದಲ್ಲಿ ಮೀಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡ ನಂತರವೇ ಇನ್ನೊಂದು ವಿಭಾಗದಲ್ಲಿ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

2024ರ ವೇಳೆಗೆ 17,68,000 ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ಪೂರ್ಣಗೊಳಲ್ಲಿದೆ ಎಂದರು. ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಕೋಟಿ ಕೋಟಿ ಮೊತ್ತದ ಯೋಜನೆ ಪ್ರಗತಿ

ಕೋಟಿ ಕೋಟಿ ಮೊತ್ತದ ಯೋಜನೆ ಪ್ರಗತಿ

ಹತ್ತು ವರ್ಷಗಳ ಹಿಂದೆ ಅಳವಡಿಸಿರುವ ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಡಿಜಿಟಲ್ ಮೀಟರ್ ನ ಇನ್ನೊಂದು ಉಪಯೋಗವೇನೆಂದೆರೆ ಗ್ರಾಹಕರು ತಾವು ಎರಡು ವರ್ಷಗಳ ಹಿಂದಿನ ಅವಧಿಯವರೆಗೂ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಛೇರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ ತಾವು ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಎಂದು ತಿಳಿಯಬಹುದಾಗಿದೆ. ಬೆಂಗಳೂರು ನಗರದಲ್ಲಿ ಡಿಜಿಟಲ್ ಮೀಟರ್ ನ ಅಳವಡಿಕೆ ಪೂರ್ಣಗೊಂಡ ನಂತರ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ-ದಾವಣಗೆರೆ ಪ್ರದೇಶ ವಲಯದಲ್ಲಿ ಡಿಜಿಟಲ್ ಮೀಟರ್ ಗಳ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯವನ್ನು 2 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು ಎಲ್ಲಾ ವಿಭಾಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು. ಈ ಯೋಜನೆಯ ಒಟ್ಟು ಮೊತ್ತ 139 ಕೋಟಿ ರೂಪಾಯಿಗಳಾಗಿದ್ದು, ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಗೆ 934 ರೂಪಾಯಿ ಮತ್ತು 3 ಫೇಸ್ ಮೀಟರ್ ಗೆ 2312 ರೂಪಾಯಿಗಳಾಗಿದ್ದು ಈ ವೆಚ್ಚವನ್ನು ಬೆಸ್ಕಾಂ ಭರಿಸಲಿದೆ. ಡಿಜಿಟಲ್ ಮೀಟರ್ ಮಾರಾಟ ಮಳಿಗೆ: ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಅನುಕುಲವಾಗಲು ಬೆಸ್ಕಾಂನ ಎಲ್ಲಾ ವಿಭಾಗಗಳಲ್ಲಿ ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮೀಟರ್ ಗಳ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದ್ದು ಬೆಸ್ಕಾಂ ನಿಗದಿ ಪಡಿಸಿರುವ ದರದಲ್ಲಿ ವೆಂಡರ್‌ಗಳು ಗ್ರಾಹಕರಿಗೆ ಈ ಡಿಜಿಟಲ್ ಮೀಟರ್ ಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರಾಟ ಮಳಿಗೆಗಳ ಸ್ಥಾಪನೆಯಿಂದ ಗ್ರಾಹಕರು ಮೀಟರ್ ಖರೀದಿಗೆ ಅಲೆದಾಡುವುದು ತಪ್ಪಿದಂತ್ತಾಗುತ್ತದೆ.

ಇವಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಬೆಸ್ಕಾಂ ಸಿದ್ದ

ಇವಿ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಬೆಸ್ಕಾಂ ಸಿದ್ದ

ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗು ಡಿಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇರುವುದರಿಂದ, ಇಲೆಕ್ಟ್ರಿಕ್ ವಾಹನ ಬಳಕೆಗೆ ಅಣಿಯಾಗುತ್ತಿದೆ. ರಾಜ್ಯ ಮತ್ತು ಬೆಂಗಳೂರಿನಲ್ಲಿ 1000 ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಗಳಿದ್ದು, 3000 ಚಾರ್ಜಿಂಗ್ ಸ್ಟೇಷನ್ ಗಳ ಗುರಿ ಹೊಂದಲಾಗಿದೆ. ನಗರದಲ್ಲಿ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವ ಹೊಣೆಯನ್ನು ಬೆಸ್ಕಾಂ ಗೆ ನೀಡಲಾಗಿದೆ. ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಿಸಿದರೇ ಬೆಂಗಳೂರಿನಲ್ಲಿ ಮತ್ತಷ್ಟು ಎಲೆಕ್ಟ್ರಿಕಲ್ ವಾಹನಗಳು ಲಗ್ಗೆಯಿಡಲಿವೆ.

ಪಾದಚಾರಿ ಸುಗಮ ಸಂಚಾರಕ್ಕೆ ಅನುವು

ಪಾದಚಾರಿ ಸುಗಮ ಸಂಚಾರಕ್ಕೆ ಅನುವು

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಹಾಗು ವಿದ್ಯುತ್ ಕಂಬಗಳ ಮೇಲೆ ಅಳವಡಿಸಿರುವ ಅನಧಿಕೃತ ಓಎಫ್ ಸಿ, ಇಂಟರ್ನೆಟ್ ಹಾಗು ಡಿಶ್ ಕೇಬಲ್ ಗಳನ್ನು ತೆರವುಗೊಳಿಸುವ ಕಾರ್ಯಚರಣೆಗೆ ಬೆಸ್ಕಾಂ ಮಾಡಿದೆ. ಬೆಂಗಳೂರು ನಗರ ಜಿಲ್ಲೆಯ ನಾಲ್ಕು ವೃತ್ತಗಳಲ್ಲಿ ಸುಮಾರು 1,46,281 ಮೀಟರ್ ಉದ್ದದ ಓಎಫ್ ಸಿ ಕೇಬಲ್ , 87665 ಮೀಟರ್ ಉದ್ದದ ಡಿಶ್ ಕೇಬಲ್, 87,007 ಮೀಟರ್ ಉದ್ದದ ವಿವಿದ ಖಾಸಗಿ ಕಂಪನಿಗಳ ಇಂಟರ್ನೆಟ್ ಡಾಟ ಕೇಬಲ್ ಹಾಗು ಸುಮಾರು 928 ಟಿಸಿಗಳ ಬಳಿ ಇರುವ ಅಪಾಯಕಾರಿ ಕೇಬಲ್ ಗಳನ್ನು ಈಗಾಗಲೇ ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಜತೆಗೆ ರಿಂಗ್ ಮೈನ್ ಯುನಿಟ್ (ಆರ್ ಎಂಯು) ಬಳಿ ಇರುವ 164 ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆರವುಗೊಳಿಸಲಾಗಿದೆ.

ಬೆಸ್ಕಾಂ ನಿಂದ ಅನುಮತಿ ಪಡೆಯದೆ ಮತ್ತು ಯಾವುದೇ ಸುರಕ್ಷಿತ ಕ್ರಮಗಳನ್ನು ಅಳವಡಿಸದೆ ವಿದ್ಯುತ್ ಕಂಬಗಳ ಮೇಲೆ ಜೋತು ಬಿಟ್ಟಿರುವ ಓಎಫ್ ಸಿ ಮತ್ತು ಇಂಟರ್ನೆಟ್ ಡಾಟ ಕೇಬಲ್ ಗಳನ್ನು ತೆರವುಗೊಳಿಲಾಗಿದೆ. ಬೆಸ್ಕಾಂ ಉತ್ತರ ವೃತ್ತದಲ್ಲಿ 33217 ಮೀಟರ್ ಓಎಫ್ ಸಿ ಕೇಬಲ್ ತೆರವು ಮಾಡಲಾಗಿದ್ದು, ಈ ಪೈಕಿ ಅತೀ ಹೆಚ್ಚು 16565 ಮೀಟರ್ ಉದ್ದದ ಕೇಬಲ್ ನ್ನು ಹೆಬ್ಬಾಳ ವಿಭಾಗ ಒಂದರಲ್ಲಿಯೇ ತೆರವುಗೊಳಿಸಲಾಗಿದೆ. ಹಾಗೆಯೇ 13517 ಮೀಟರ್ ಉದ್ದದ ಡಿಶ್ ಕೇಬಲ್ ಮತ್ತು 10532 ಮೀಟರ್ ಉದ್ದದ ಇಂಟರ್ನೆಟ್ ಡಾಟ ಕೇಬಲ್ ಗಳನ್ನು ಉತ್ತರ ವೃತ್ತದಲ್ಲಿ ತೆರವು ಮಾಡಲಾಗಿದೆ.

ಕೆಟ್ಟ ಟ್ರಾನ್ಸ್‌ಫಾರ್ಮರ್‌ ಗಳ ಬದಲಾವಣೆಗೂ ಕ್ರಮ

ಕೆಟ್ಟ ಟ್ರಾನ್ಸ್‌ಫಾರ್ಮರ್‌ ಗಳ ಬದಲಾವಣೆಗೂ ಕ್ರಮ

ಬೆಂಗಳೂರಿನ ದುರಸ್ಥಿಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ನಿರ್ವಹಣೆಯನ್ನು ಮುಂದುವರಿಸಿರುವ ಬೆಸ್ಕಾಂ 27,787 ಟ್ರಾನ್ಸ್ ಫಾರ್ಮರ್‌ ಗಳನ್ನು ತನ್ನ ವ್ಯಾಪ್ತಿಯ ೮ ಜಿಲ್ಲೆಗಳಲ್ಲಿ ನಿರ್ವಹಣೆ ಮಾಡಿದೆ. ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಹಾಗು ಜನನಿಬಿಢ ಪ್ರದೇಶಗಳಲ್ಲಿರುವ ಟ್ರಾನ್ಸ್‌ ಫಾರ್ಮರ್‌ ಗಳ ಸಮಗ್ರ ನಿರ್ವಹಣೆಗೆ ಬೆಸ್ಕಾಂ ಕ್ರಮ ಕೈಗೊಂಡಿದೆ. 27,787 ಟ್ರಾನ್ಸ್‌ ಫಾರ್ಮರ್‌ ಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 9524 ಟ್ರಾನ್ಸ್‌ ಫಾರ್ಮರ್‌ ಗಳ ನಿರ್ವಹಣೆಯನ್ನು ಬೆಸ್ಕಾಂ ಮಾಡಿದೆ.

ತುಮಕೂರು ಜಿಲ್ಲೆ- 5232, ದಾವಣಗೆರೆ ಜಿಲ್ಲೆ- 2906, ಚಿತ್ರದುರ್ಗ- 2291, ಚಿಕ್ಕಬಳ್ಳಾಪುರ ಜಿಲ್ಲೆ- 2646, ರಾಮನಗರ ಜಿಲ್ಲೆ- 2372 ಮತ್ತು ಕೋಲಾರ ಜಿಲ್ಲೆಯಲ್ಲಿ 1429 ಟ್ರಾನ್ಸ್‌ ಫಾರ್ಮರ್‌ ಗಳ ನಿರ್ವಹಣೆಯನ್ನು ಬೆಸ್ಕಾಂ ಪೂರ್ಣಗೊಳಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ವಹಣೆ ಮಾಡಿರುವ 9524 ಟ್ರಾನ್ಸ್‌ ಫಾರ್ಮರ್‌ ಗಳ ಪೈಕಿ ಬೆಸ್ಕಾಂನ ದಕ್ಷಿಣ ವೃತ್ತ- 2713, ಪಶ್ಚಿಮ ವೃತ್ತ- 2253, ಪೂರ್ವ ವೃತ್ತ- 1961 ಮತ್ತು ಉತ್ತರ ವೃತ್ತದಲ್ಲಿ 1946 ಟ್ರಾನ್ಸ್‌ ಫಾರ್ಮರ್‌ ಗಳ ನಿರ್ವಹಣೆ ಮಾಡಲಾಗುತ್ತಿದೆ.

Recommended Video

ಪ್ರಧಾನಿ ರೇಸ್ ನಲ್ಲಿರೋ ರಿಶಿ ಸುನಕ್ ಪ್ರಜ್ಞೆ ತಪ್ಪಿದ ಟಿವಿ ಆ್ಯಂಕರ್ ಗೆ ಹೆಲ್ಪ್ ಮಾಡಿದ ವಿಡಿಯೋ |OneIndia Kannada

English summary
CM Basavaraj Bommai Govt Completes 1 Year; As bjp govt completes 3 years, 2 years of BS Yediyurappa govt and 1 year of Basavarj bommai, Know Achievements of BESCOM in last 1 year. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X