ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ ಬೊಮ್ಮಾಯಿ: ಇತರರಿಗೂ ಸೂಚನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಪ್ರಯುಕ್ತ ಖಾದಿ ಬಟ್ಟೆ ಖರೀದಿಸಿದರು.

ಬೆಂಗಳೂರು ನಗರದ ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಎಂಪೋರಿಯಂನಲ್ಲಿ ತಲಾ ಮೂರು ಮೀಟರ್ ಅಳತೆಯ 10 ಜುಬ್ಬಾ ಪೀಸ್​ಗಳನ್ನು ಸಿಎಂ ಬೊಮ್ಮಾಯಿ ಖರೀದಿಸಿದರಲ್ಲದೆ, ಇದೇ ವೇಳೆ ತಮ್ಮ ಪತ್ನಿಗೆ ಸೀರೆಯನ್ನೂ ಖರೀದಿಸಿ ಅಚ್ಚರಿ ಮೂಡಿಸಿದರು.

ಖಾದಿ ಎಂಪೋರಿಯಂನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಮಡದಿಗಾಗಿ ಮೂರು ಸೀರೆ ನೋಡಿದರು. ಕಡೆಗೆ ಒಂದನ್ನು ಆಯ್ಕೆ ಮಾಡಿಕೊಂಡರು. ಸಿಎಂ ಬೊಮ್ಮಾಯಿಯವರು ಒಟ್ಟು 16,000 ರೂ. ಮೊತ್ತದ ಬಟ್ಟೆ ಖರೀದಿಸಿದ್ದಾರೆ.

CM Basavaraj Bommai Bought Saree For His Wife And Suggested To Others

ಖರೀದಿ ವೇಳೆ ಸಚಿವರಿಗೂ ಸೀರೆ ಕೊಳ್ಳುವಂತೆ ಸೂಚಿಸಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಸೀರೆ ಖರೀದಿ ವೇಳೆ ಆಗಮಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ, ''ಬಾರಪ್ಪಾ, ನಿಮ್ಮ ಮನೆಯವರಿಗೆ ಸೀರೆ ಖರೀದಿ ಮಾಡು'' ಎಂದಿದ್ದಾರೆ. ಬೊಮ್ಮಾಯಿಯವರ ಮಾತನ್ನು ಕೇಳಿದ ವಿಜಯೇಂದ್ರ, ''ನಮಗೊಂದು ಸೀರೆ ಕೊಡಿ'' ಎಂದು ಹೇಳಿ ಸುಮಾರು 4,300 ರೂಪಾಯಿ ಮೊತ್ತದ ಸೀರೆ ಖರೀದಿಸಿದ್ದಾರೆ.

ಇದೇ ವೇಳೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳರಿಗೂ ಸೀರೆ ತೆಗೆದುಕೊಳ್ಳಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಆಗ ಗೋವಿಂದ ಕಾರಜೋಳರು, ''ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ'' ಎಂದು ಹೇಳಿದರು. ''ಈಗಲಾದರೂ ಕಲಿತುಕೊಳ್ಳಿ'' ಎಂದು ಬೊಮ್ಮಾಯಿ ತಮಾಷೆ ಮಾಡಿದ್ದಾರೆ.

CM Basavaraj Bommai Bought Saree For His Wife And Suggested To Others

ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಕಟ್ಟು ಬಿದ್ದ ಸಚಿವ ಗೋವಿಂದ ಕಾರಜೋಳ, ''ಇರಲಿ, ನನಗೊಂದು ಸೀರೆ ಕೊಡಿ'' ಎಂದು ಹೇಳಿ, ಸೀರೆ ಖರೀದಿಸಿದ್ದಾರೆ. ಇದೇ ವೇಳೆ ಪೌರಾಡಳಿತ ಎಂಟಿಬಿ ನಾಗರಾಜ್ ಕೂಡ ಬಟ್ಟೆ ಖರೀದಿಸಿದ್ದು, ಅವರ ಬಿಲ್ 3000 ರೂ. ಮೊತ್ತದ್ದಾಗಿದೆ.

ಶಾಸ್ತ್ರಿ ಪ್ರತಿಮೆಗೆ ಪುಷ್ಪಾರ್ಚನೆ
ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 117ನೇ ಜನ್ಮ ದಿನಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಸೌಧದ ಆವರಣದಲ್ಲಿರುವ ಶಾಸ್ತ್ರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

"ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಗೌರವ ನಮನಗಳು," ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ, "ಮಾಜಿ ಪ್ರಧಾನಮಂತ್ರಿ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ಅವರಿಗೆ ಆದರ ಪೂರ್ವಕ ಪ್ರಣಾಮಗಳು. ಅವರ ಪ್ರಾಮಾಣಿಕತೆ, ಪರಿಶ್ರಮ, ಸ್ವಾತಂತ್ರ್ಯ ಹೋರಾಟ, ದೇಶಸೇವೆ, ಪ್ರಧಾನಮಂತ್ರಿಗಳಾಗಿ ಅವರ ಆಡಳಿತ, ದಿಟ್ಟ ನಿರ್ಣಯಗಳು, ಅವರ ಸಾಧನೆಗಳು ಎಂದೆಂದಿಗೂ ಅಮರ," ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

CM Basavaraj Bommai Bought Saree For His Wife And Suggested To Others

ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ರಾಜ್ಯಪಾಲರು
ಮಹಾತ್ಮ ಗಾಂಧೀಜಿ ಜನ್ಮದಿನದ ಅಂಗವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜಭವನದ ಅಂಗಳದಲ್ಲಿರುವ ಗಾಂಧಿ ಪುತ್ಥಳಿಗೆ ಶನಿವಾರ ಪುಷ್ಪಾರ್ಚನೆ ಮಾಡಿದರು.

Recommended Video

ಅಮೆರಿಕಾದಲ್ಲೂ ಎದುರಾಯ್ತು ಬಟ್ಟೆಗೂ ಬರ | Oneindia Kannada

English summary
Chief Minister Basavaraj Bommai today bought a khadi cloth for the Birth Anniversary of Mahatma Gandhi and Lal Bahadur Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X