ತಿಮ್ಮಪ್ಪನಿಗೆ ಪಂಗನಾಮ ಹಾಕಿದವ ಸಿಎಂ ಸಲಹೆಗಾರ: ಎಚ್ಡಿಕೆ ಟೀಕೆ
ತಿರುಮಲ ತಿರುಪತಿ ದೇಗುಲದ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದಾಗಲೇ ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದ ವಿಕಾಸ್ ಅವರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಔಚಿತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ ಕುಮಾರ ಸ್ವಾಮಿ.
ಬೆಂಗಳೂರು, ಮೇ 22: ತಿರುಮಲ ತಿರುಪತಿ ದೇಗುಲದಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದ ಆಂಧ್ರ ಪ್ರದೇಶದ ವಿಕಾಸ್ ಬನ್ಸೋಡೆ ಎಂಬಾತನನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ವಿವರಣೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ.
ಭಾನುವಾರ, ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ''ವಿಕಾಸ್ ಬನ್ನೋಡೆಯವರು ತಿರುಮಲ ತಿರುಪತಿ ದೇಗುಲದಲ್ಲಿ ಮುಖ್ಯ ಕಾರ್ಯ ನಿರ್ವಹಾಧಿಕಾರಿಯಾಗಿದ್ದಾಗ ಕೋಟ್ಯಂತರ ರು. ಅವ್ಯವಹಾರ ಮಾಡಿದ್ದ. ಹಾಗಾಗಿಯೇ ಆತನನ್ನು ಅಲ್ಲಿಂದ ಹೊರಹಾಕಲಾಗಿತ್ತು. ಆದರೆ, ಯಾರದ್ದೋ ಶಿಫಾರಸಿನ ಮೂಲಕ ಈತ ಕರ್ನಾಟಕದ ಆಡಳಿತದೊಳಕ್ಕೆ ತೂರಿಕೊಂಡ'' ಎಂದು ಅವರು ವಿವರಿಸಿದರು.[ಅತಂತ್ರ ಫಲಿತಾಂಶ ಬಂದರೆ, ಪಕ್ಷದ ನಿಲುವೇನು? ಎಚ್ಡಿಕೆ ಸ್ಪಷ್ಟನೆ]

''ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ರಾಜ್ಯಪಾಲರು ಇದೇ ವಿಕಾಸ್ ಬನ್ಸೋಡೆಯನ್ನು ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳನ್ನು ಪತ್ತೆ ಹಚ್ಚಿ ವರದಿ ಸಲ್ಲಿಸುವಂತೆ ರಾಜ್ಯಪಾಲರು ನೇಮಿಸಿಕೊಂಡಿದ್ದರು. ಈತ ಎಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಿದ. ಈಗ ಮುಖ್ಯಮಂತ್ರಿಗಳ ಸಲಹೆಗಾರನಾಗಿ ಈತ ಎಷ್ಟು ಪ್ರಕರಣಗಳಲ್ಲಿ ಸಿಎಂಗೆ ಸಲಹೆ ಮಾಡಿದ್ದಾನೆ, ಕಾವೇರಿ ವಿಚಾರದಲ್ಲಿ ಈತ ಕೊಟ್ಟ ಸಲಹೆಗಳೇನು'' ಎಂಬುದನ್ನು ಸಿಎಂ ವಿವರಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.[ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸಿಗೆ ಬೆಂಕಿ ಇಟ್ಟರಾ ಕುಮಾರಸ್ವಾಮಿ!]
ಸಿಎಂ ಸಲಹೆಗಾರನಾಗಿ ಇವರೇ ಬೇಕಿತ್ತೇ ? ರಾಜ್ಯದಲ್ಲಿ ಯಾವುದೇ ದಕ್ಷ ಅಧಿಕಾರಿಗಳು ಇರಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಸಿಎಂಗೆ ಸಲಹೆಗಾರರೇ ಬೇಕಿತ್ತು ಎನ್ನುವುದಾದರೆ ಅಡ್ವೊಕೇಟ್ ಜನರಲ್ ಹುದ್ದೆ ಯಾಕೆ ಎಂದು ಪ್ರಶ್ನಿಸಿದರು.
{promotion-urls}












Click it and Unblock the Notifications