Get Updates
Get notified of breaking news, exclusive insights, and must-see stories!

ಬೆಂಗಳೂರು: ರಾತ್ರಿ 1 ಗಂಟೆವರೆಗೂ ಬಾರ್ & ರೆಸ್ಟೋರೆಂಟ್ ಓಪನ್, ಆದೇಶದ ವಿವರ

ಬೆಂಗಳೂರು, ಆಗಸ್ಟ್ 07: ಕರ್ನಾಟಕ ಸರ್ಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಾತ್ರಿಯ ವ್ಯಾಪಾರ ವಹಿವಾಟಿನ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಪಬ್, ಬಾರ್ & ರೆಸ್ಟೋರೆಂಟ್, ಸ್ಟಾರ್ ಹೋಟೆಲ್‌ಗಳು ರಾತ್ರಿ 1 ಗಂಟೆಯ ತನಕ ತೆರೆದಿರಲು ಅನುಮತಿ ಸಿಕ್ಕಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಲಕ್ಷ್ಮೀ ಸಾಗರ್ ಎನ್. ಕೆ. ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ) ಆದೇಶವನ್ನು ಹೊರಡಿಸಿದ್ದಾರೆ.

Clubs Star Hotels Bars And Restaurants To Open Till 1 AM Bengaluru

ಪ್ರಸ್ತಾವನೆ ಏನಿತ್ತು?; 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 269ರಲ್ಲಿ ಘೋಷಿಸಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ನಿರ್ಬಂಧವನ್ನು ಬೆಳಗಿನ ಜಾವ 1 ಗಂಟೆಯವರೆಗೆ ವಿಸ್ತರಿಸುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಆಯವ್ಯಯ ಭಾಷಣ ಕಂಡಿಕೆ 269ರಲ್ಲಿ ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆಗಳಲ್ಲಿ ವಾಣಿಜ್ಯ ವ್ಯಾಪಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ 1 ಗಂಟೆಯವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಲಾಗಿದೆ.

ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 378(b)ರಲ್ಲಿ ಮುನ್ಸಿಪಲ್ ಕಮೀಷನ್‌ರವರಿಗೆ ಮಾರ್ಕೆಟ್, ಬಜಾರ್ ಇತ್ಯಾದಿಗಳ ಮೇಲಿನ ಪರವಾನಗಿ, ವೇಳೆ ನಿಗದಿ, ದಿನಗಳ ನಿರ್ಧರಣದ ಅಧಿಕಾರವನ್ನು ನೀಡಲಾಗಿರುತ್ತದೆ.

ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಅವರ ದಿನಾಂಕ 30/06/2016ರ ಆದೇಶದಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ, 1963ರ ಕಲಂ 31(w) ರ ಅಡಿ ಪ್ರದತ್ತವಾದ ಅಧಿಕಾರದ ಅನ್ವಯ ಕೆಲವು ಷರತ್ತುಗಳಿಗೆ ಒಳಪಟ್ಟು ಅದೇ ಅಧಿನಿಯಮದ ಕಲಂ 2(15) ರ ಅಡಿ ವ್ಯಾಖ್ಯಾನಿಸಲಾದ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ-ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 6 ಗಂಟೆಯಿಂದ ಮಾರನೇ ದಿನ ಮುಂಜಾನೆ 1 ಗಂಟೆಯವರೆಗೆ ತೆರೆದಿರಬಹುದಾಗಿದೆ ಎಂದು ದಿನಾಂಕ 1/7/2016 ರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಾರಿಗೊಳ್ಳುವಂತೆ ಆದೇಶಿಸಿರುತ್ತಾರೆ.

ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ: ಪರತ್ತುಗಳು) ನಿಯಮಗಳು, 1967ರ ನಿಯಮ 4ರ ಅಡಿಯಲ್ಲಿ ಅಬಕಾರಿ ಆಯುಕ್ತರಿಗೆ ಸದರಿ ನಿಯಮಗಳ ಅಡಿ ಲೈಸೆನ್ಸ್ ಪಡೆದ ಬಾರ್‌ & ರೆಸ್ಟೋರೆಂಟ್, ಹೋಟೆಲ್‌ಗಳು ಇತ್ಯಾದಿಗಳು ತೆರೆದಿರುವ ಅವಧಿಯಲ್ಲಿ ನಿಗದಿಪಡಿಸಲು ಅಧಿಕಾರವಿರುತ್ತದೆ.

ಅಬಕಾರಿ ಆಯುಕ್ತರ ದಿನಾಂಕ 14/07/2016ರ ಅಧಿಸೂಚನೆಯಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯ ಸನ್ನದುಗಳಿಗೆ ಸಂಬಂಧಿಸಿದಂತೆ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ.

ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ ಅಧಿನಿಯಮ, 1961ರ ಕಲಂ 11 ರಲ್ಲಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ತೆರೆದಿರುವ ಅವಧಿಯನ್ನು ನಿಗದಿಪಡಿಸಲು ಅವಕಾಶವಿರುತ್ತದೆ. ದಿನಾಂಕ 02/01/2021ರ ಅಧಿಸೂಚನೆಯಲ್ಲಿ ಕಾರ್ಮಿಕ ಇಲಾಖೆಯು ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ನೌಕರರನ್ನು ಹೊಂದಿದ ರಾಜ್ಯದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ದಿನದ 24 ಗಂಟೆಯೂ ತೆರೆದಿರಲು ಅವಕಾಶವನ್ನು ಕಲ್ಪಿಸಿರುತ್ತದೆ.

ಆದೇಶದ ವಿವರ: ಮೇಲಿನ ವಿವರಗಳ ಹಿನ್ನೆಲೆಯಲ್ಲಿ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಆದೇಶಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಲಾದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ, ವ್ಯಾವಾರದ ದೃಷ್ಟಿಯಿಂದ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ಮೇಲಿನ ನಿರ್ಬಂಧವನ್ನು ಬೆಳಗಿನ ಜಾವ 1 ಗಂಟೆಯವರೆಗೆ ವಿಸ್ತರಿಸಿ ಆದೇಶಿಸಿದೆ.

ದಿನಾಂಕ 6/7/2024ರಂದು ನಡೆದ ಸಭೆಯಲ್ಲಿ ಈ ವಿಷಯವಾಗಿ ಆರ್ಥಿಕ ಇಲಾಖೆ ನೀಡಿದ ಸಹಮತಿ ಹಾಗೂ ಯೋಜನಾ ಇಲಾಖೆಯು ಹಿಂಬರಹ ದಿನಾಂಕ 2/7/2024ರಲ್ಲಿ ನೀಡಿರುವ ಅಭಿಪ್ರಾಯದಂತೆ ಆದೇಶ ಹೊರಡಿಸಲಾಗಿದೆ ಎಂದು ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+