ಮಕ್ಕಳಲ್ಲಿ ಕೀಳರಿಮೆ, ತಾರತಮ್ಯ ಮೂಡಿಸುವ ಮಾನಿಟರ್ ಪದ್ಧತಿ ಬೇಕೆ?
ಬೆಂಗಳೂರು, ಜು.12: ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಿರುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ, ನಾವು ಮಕ್ಕಳಿಗೆ ಈ ವಿಚಾರ ಹೇಳಿದರೆ ಬೇಜಾರಾಗಬಹುದು ಎಂದು ಕೊಂಡರೆ ಅದನ್ನು ಸುಲಭವಾಗಿ ಸ್ವೀಕರಿಸುತ್ತಾರೆ ಕೆಲವೊಂದು ಸಣ್ಣಪುಟ್ಟ ವಿಚಾರಗಳಿಗೆ ಮುನಿಸಿಕೊಳ್ಳುತ್ತಾರೆ.
ಆದರೆ ಬೆಂಗಳೂರಲ್ಲಿ ನಡೆದಿರುವ ಒಂದು ಘಟನೆ ಪೋಷಕರನ್ನು ಬೆಚ್ಚಿ ಬೀಳಿಸುತ್ತದೆ, ಕ್ಲಾಸ್ ಮಾನಿಟರ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಐಡಿಯಲ್ ಹೋಂ ಲೇಔಟ್‌ನ ಚಿತ್ರಾ ಅಪಾರ್ಟ್‌ಮೆಂಟ್‌ನಲ್ಲಿ ನೆಲಡಸಿರುವ ರಾಜೇಶ್ ಮತ್ತು ದಿವ್ಯಾ ದಂಪತಿಯ ಪುತ್ರ ದ್ರುವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ, ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ ಈತ ತಂದೆ, ತಾಯಿ ಮಲಗಿದ ನಂತರ ಎದ್ದು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ದ್ರುವರಾಜ್ ಸ್ವಭಾವದಲ್ಲಿ ಮುಂಗೋಪಿಯಾಗಿದ್ದ ಆದರೆ ತುಂಬಾ ಪ್ರತಿಭಾವಂತನಾಗಿದ್ದ, ಖುಷಿ ಖುಷಿಯಿಂದಲೇ ಶಾಲೆಗೆ ಹೋಗಿದ್ದ, ಸಂಜೆ ಮರಳುವಾಗ ತುಂಬಾ ಬೇಸರದಲ್ಲಿದ್ದ ತನ್ನನ್ನು ಕ್ಲಾಸ್ ಮಾನಿಟರ್ ಮಾಡಲಿಲ್ಲ ಎನ್ನುವ ಬೇಸರವನ್ನು ವ್ಯಕ್ತಪಡಿಸಿದ್ದ, ಆದರೆ ರಾತ್ರಿ ಊಟ ಮಾಡಿ ಮಲಗಿದ ನಂತರ ಎದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗ್ಗೆ ಪೋಷಕರು ಎದ್ದು ಮಗನನ್ನು ಎಬ್ಬಿಸಲು ಹೋದಾಗ ಪೋಷಕರಿಗೆ ಈ ವಿಷಯ ಗೊತ್ತಾಗಿದೆ. ಮಕ್ಕಳಲ್ಲಿ ಕೀಳರಿಮೆ, ತಾರತಮ್ಯ ಭಾವನೆ ಮೂಡಿಸುವ ಈ ಮಾನಿಟರ್ ಪದ್ಧತಿಯನ್ನು ರದ್ದುಗೊಳಿಸಲು ಪೋಷಕರು ಒತ್ತಾಯಿಸಿದ್ದಾರೆ.












Click it and Unblock the Notifications