ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಮಾಜಿ ಕಾರ್ಪೊರೇಟರ್ ಆಯುಬ್ ಖಾನ್‌ ಕೊಲೆ

|
Google Oneindia Kannada News

ಬೆಂಗಳೂರು, ಜುಲೈ14: ಟಿಪ್ಪುನಗರದ ಮಾಜಿ ಕಾರ್ಪೊರೇಟರ್ ಆಯುಬ್ ಖಾನ್‌ಗೆ ಚಾಕುವಿನಿಂದ ಇರಿದು ಹತ್ಯೆಯನ್ನು ಮಾಡಲಾಗಿದೆ. ಆಸ್ತಿ ಮತ್ತು ಮಸೀದಿ ಪ್ರೆಸಿಡೆಂಟ್ ಸ್ಥಾನ ಸಂಬಂಧಿಸಿದ ಕಲಹದಿಂದಾಗಿ ಉಂಟಾಗಿದ್ದ ಕಲಹದಲ್ಲಿ ಆಯುಬ್ ಖಾನ್‌ಗೆ ನಿನ್ನೆ (ಜುಲೈ13) ರಾತ್ರಿ ಚಾಕುವಿನಿಂದ ಇರಿಯಲಾಗಿತ್ತು. ಆಯುಬ್ ಖಾನ್‌ನನ್ನು ತಕ್ಷಣವೇ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ಅಸುನೀಗಿದ್ದಾನೆ.

ಆಯುಬ್ ಖಾನ್‌ನನ್ನು ಆತನ ಅಣ್ಣ ಪ್ಯಾರು ಖಾನ್‌ರ ಮಗ ಮತೀನ್ ಎಂಬಾತನೇ ಚಾಕವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಮತೀನ್‌ಗಾಗಿ ಚಾಮರಾಜ ಪೇಟೆ ಪೊಲೀಸರು ಬಲೆ ಬೀಸಿದ್ದಾರೆ.

City Market Ex Corporator Ayub khan Murder

ಅಸಲಿಗೆ ನಡೆದಿದ್ದೇನು..?
ಆಯುಬ್ ಖಾನ್‌ಗೆ ನಾಲ್ಕು ಜನ ಮಕ್ಕಳಿದ್ದಾರೆ. ಈತ ಬಿಬಿಎಂಪಿ ಸಿಟಿ ಮಾರ್ಕೆಟ್ 139 ನೇ ವಾರ್ಡ್‌ಗೆ ಮಾಜಿ ಸದಸ್ಯನಾಗಿದ್ದ. ಟಿಪ್ಪು ನಗರದಲ್ಲಿರುವ ಖುದಾಯತ್ ಮಸೀದಿಯಲ್ಲಿ 15 ವರುಷಗಳಿಂದ ಪ್ರೆಸಿಡೆಂಟ್ ಆಗಿದ್ದ. ಇದೇ ಮಸೀದಿ ಪ್ರೆಸಿಡೆಂಟ್ ಆಗಬೇಕು ಎಂಬ ಕಾರಣಕ್ಕೆ ಆಗಿಂದಾಗ್ಗೆ ಆಯುಬ್ ಖಾನ್ ಅಣ್ಣನ ಮಗ ಮತೀನ್ ಜಗಳವನ್ನು ಆಡುತ್ತಿದ್ದ. ಆದರೆ ಇದಕ್ಕೆಲ್ಲಾ ಸೊಪ್ಪು ಹಾಕದೇ ಆಯುಬ್ ಖಾನ್ ಸುಮ್ಮನಾಗಿದ್ದ. ಆಯುಬ್ ಖಾನ್ ತನ್ನ ಮಗ ಸಿದ್ದಿಕ್ ಖಾನ್‌ನನ್ನು ಖುದಾಯತ್ ಮಸೀದಿಯ ಪ್ರೆಸಿಡೆಂಟ್ ಮಾಡುತ್ತಾನೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಮತೀನ್ ತನ್ನ ಚಿಕ್ಕಪ್ಪನ ಮೇಲೆ ಕೋಪಗೊಂಡಿದ್ದ. ರಾತ್ರಿ ನಮಾಜ್ ಮುಗಿಸಿಕೊಂಡು ಬರುವ ವೇಳೆ ಚಾಕು ಹಿಡಿದು ಕಾಯುತ್ತಿದ್ದ ಮತೀನ್ ನೀನು ಇರುವ ತನಕ ನಾನು ಮಸೀದಿ ಪ್ರೆಸಿಡೆಂಟ್ ಆಗುವುದಿಲ್ಲ ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಚಾಕುವಿನಿಂದ ಹೊಟ್ಟೆ ಇರಿದು ಎಸ್ಕೆಪ್ ಆಗಿದ್ದಾನೆ. ರಾತ್ರಿಯೇ ಆಯುಬ್ ಖಾನ್‌ ಮಕ್ಕಳು ಮತ್ತು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರು ಚಿಕಿತ್ಸೆ ಫಲಕಾರಿಯಾಗದೇ ಮಾಜಿ ಕಾರ್ಪೊರೇಟರ್ ಸಾವನ್ನಪ್ಪಿದ್ದಾನೆ.

City Market Ex Corporator Ayub khan Murder

ಟಿಪ್ಪುನಗರ ಮತ್ತು ಆಸ್ಪತ್ರೆ ಬಳಿ ಪೊಲೀಸ್ ಭದ್ರತೆ
ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಸಾವು ಹಿನ್ನೆಲೆಯಲ್ಲಿ ಪೊಲೀಸರು ಟಿಪ್ಪು ನಗರ ಮತ್ತು ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಮೂರು ಕೆಎಸ್ಆರ್‌ಪಿ ತುಕಡಿ ಸೇರಿ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಕಣ್ಗಾವಲು ಹೆಚ್ಚಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗಿದೆ.

English summary
City market ward no 139 Ex Corporator Ayub khan murder reported in Tippunagr Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X