ನಮ್ಮ ಮೆಟ್ರೋ ರೈಲಿನಲ್ಲಿ ಚ್ಯೂಯಿಂಗ್ ಗಮ್ ಅಗಿಯುವಂತಿಲ್ಲ!
ಬೆಂಗಳೂರು, ಡಿಸೆಂಬರ್ 05 : ನಮ್ಮ ಮೆಟ್ರೋ ನಿಲ್ದಾಣದೊಳಗೆ, ರೈಲಿನೊಳಗೆ ಚ್ಯೂಯಿಂಗ್ ಗಮ್, ಗುಟ್ಕಾ ಜಗಿಯುವುದನ್ನು ಬಿಎಂಆರ್‌ಸಿಎಲ್ ನಿಷೇಧಿಸಿದೆ. ಚ್ಯೂಯಿಂಗ್ ಗಮ್ ಅಗಿಯುವಾಗ ಸಿಕ್ಕಬಿದ್ದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ನಮ್ಮ ಮೆಟ್ರೋ ಬೋಗಿ ಸ್ವಚ್ಛ ಮಾಡುವ ಕಾರ್ಮಿಕರು ಸೀಟಿನ ಕೆಳೆಗೆ ಕೆಲವು ಪ್ರಯಾಣಿಕರು ಚ್ಯೂಯಿಂಗ್ ಗಮ್ ಅಂಟಿಸಿದ್ದನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಆದ್ದರಿಂದ, ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ರೈಲಿನೊಳಗೆ, ನಿಲ್ದಾಣದಲ್ಲಿ ಚ್ಯೂಯಿಂಗ್ ಗಮ್ ಅಗಿಯುವುದನ್ನು ನಿಷೇಧಿಸಿದೆ. ಗುಟ್ಕಾ, ಪಾನ್ ಮಸಾಲಾವನ್ನು ಅಗಿಯಬಾರದು ಎಂದು ಸೂಚನೆ ನೀಡಿದೆ.
ಒಂದು ವೇಳೆ ಪ್ರಯಾಣಿಕರು ಚ್ಯೂಯಿಂಗ್ ಗಮ್, ಗುಟ್ಕಾ ಅಗಿಯುವಾಗ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಎಚ್ಚರಿಕೆ ನೀಡಿದೆ.
ಬಿಎಂಟಿಸಿ ಬಸ್ಸಲ್ಲೂ ಜಾರಿಗೆ ತನ್ನಿ : ಬಿಎಂಟಿಸಿ ಬಸ್ಸುಗಳಲ್ಲಿನ ಸೀಟುಗಳ ಅಡಿ, ಸೀಟಿನ ಮೇಲೆ ಚ್ಯೂಯಿಂಗ್ ಗಮ್ ಅಂಟಿಸಲಾಗಿರುತ್ತದೆ. ಈ ನಿಷೇಧವನ್ನು ಬಸ್ಸುಗಳಲ್ಲಿಯೂ ಜಾರಿಗೆ ತನ್ನಿ ಎಂದು ನಿತ್ಯ ಸಂಚಾರ ನಡೆಸುವ ಪ್ರಯಾಣಿಕರು ಬೇಡಿಕೆ ಮುಂದಿಟ್ಟಿದ್ದಾರೆ.












Click it and Unblock the Notifications