ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್ ಆ ಸಮಯದ ರುಚಿಗೆ ಸಾರಿ ಎಂದ ಚಂದ್ರು!
ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್ ಎನ್ನುವ ಮೂಲಕ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದ ಚಂದ್ರು ಅವರು ಬೆಳ್ಳುಳ್ಳಿ ಕಬಾಬ್ ರುಚಿ ಬಗ್ಗೆ ಹಾಗೂ ಜನರಿಗೆ ಆ ಸಮಯದಲ್ಲಿ ಆದ ಸಮಸ್ಯೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಬೆಳ್ಳುಳ್ಳಿ ಕಬಾಬ್ ಎನ್ನುವುದು ಒನ್ ಮೋರ್ ಒನ್ ಮೋರ್ ಹಾಗೂ ರಾಹುಲ್ಲಾ... ಕರಿಮಣಿ ಮಾಲೀಕ ಎನ್ನುವುದು ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡಿತ್ತು. ಆದರೆ, ಬೆಳ್ಳುಳ್ಳಿ ಕಬಾಬ್‌ನ ರುಚಿಯ ಬಗ್ಗೆ ಕೆಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕೆಲವೊಂದು ವಿಚಾರಕ್ಕೆ ಸಂಬಂಧಿಸಿದಂತೆ ಚಂದ್ರು ಅವರು ಗ್ರಾಹಕರಲ್ಲಿ ಸಾರಿ ಎಂದಿದ್ದಾರೆ. ಡಿಜಿಟಲ್ ಮಾಧ್ಯಮ ಇದನ್ನು ವರದಿ ಮಾಡಿದೆ.
ಚಂದ್ರು ಅವರ ಬೆಳ್ಳುಳ್ಳಿ ಕಬಾಬ್ ಈ ವರ್ಷ ಕರ್ನಾಟಕದಲ್ಲೇ ವರ್ಡ್ ಫೇಮಸ್ ಆಗಿತ್ತು. ರಾಹುಲ್ಲಾ ಬಾಪಾ ಇಲ್ಲಿ ಅಂತ ಸ್ಟಾರ್ಟ್ ಆದ ಟ್ರೋಲ್ ಕರಿಮಣಿ ಮಾಲೀಕ ರಾಹುಲ್ಲಾ ಎನ್ನುವವರೆಗೆ ಫೇಮಸ್ ಆಗಿತ್ತು. ಕರಿಮಣಿ ಮಾಲೀಕ ವಿಡಿಯೋ ಮಾಡಿದ ಮೇಲೆ ಹತ್ತು ದಿನಗಳಲ್ಲಿ ನನಗೆ ಕಾಲು ಫ್ಯಾಕ್ಚರ್ ಆಯ್ತು ಹೊಲಿಗೆ ಹಾಕಿದ್ದು, ಪ್ಲೇಟ್ ಸಹ ಹಾಕಿದ್ದಾರೆ. ಆಗ ಮೂರು ತಿಂಗಳು ನಾನು ಇರಲಿಲ್ಲ. ಬೆಳ್ಳುಳ್ಳಿ ಕಬಾಬ್ ವೈರಲ್ ಆಗಿ ನನಗೆ ಸಿಕ್ಕಾಪಟ್ಟೆ ಹೆಸರು ಬಂತು. ಆದರೆ, ಅದಾದ ಮೇಲೆ ಹೆಸರು ಕೆಡ್ತು ಅಂತ ಅವರು ಹೇಳಿದ್ದಾರೆ.

ಕರಿಮಣಿ ಮಾಲೀಕ ವಿಡಿಯೋ ಮಾಡಿದ ಮೇಲೆ ಕೆಲವೇ ದಿನಕ್ಕೆ ಕಾಲಿಗೆ ಪೆಟ್ಟಾಯ್ತು. ಕಾಲು ಮುರಿದಿದ್ದರಿಂದ ಹೋಟೆಲ್ ಕಡೆ ನೋಡಿಕೊಳ್ಳಲು ಆಗಲಿಲ್ಲ. ಹೋಟೆಲ್‌ನಲ್ಲಿ ಕೆಲಸ ಮಾಡುವವರು ಕೆಲವರು ಸರಿಯಾಗಿ ನಿಬಾಯಿಸಲಿಲ್ಲ. ಉಪ್ಪೆಲ್ಲ ಜಾಸ್ತಿ ಹಾಕಿ ಬೆಳ್ಳುಳ್ಳಿ ಕಬಾಬ್ ರುಚಿ ಹಾಳು ಮಾಡಿದ್ರು. ಇದರಿಂದ ಕೆಟ್ಟ ಹೆಸರು ಬಂತು. ಬೆಳ್ಳುಳ್ಳಿ ಕಬಾಬ್ ಫೇಮಸ್ ಆದ ಮೇಲೆ ಜನ ಸಿಕ್ಕಾಪಟ್ಟೆ ಬರಲು ಪ್ರಾರಂಭಿಸಿದರು. ಅವರಿಗೆ ಮಾಡಿಕೊಡಲು ಆಗುತ್ತಿರಲಿಲ್ಲ.
ಹೋಟೆಲ್‌ನಲ್ಲಿ 80 ಜನ ಕುತ್ಕೊಂಡು ಊಟ ಮಾಡುವುದಕ್ಕೆ ಅವಕಾಶ ಇದೆ. ಆದರೆ, 150ರಿಂದ 200 ಜನ ಬರುತ್ತಿದ್ದರು. ಆದರೆ, ಅಷ್ಟು ಜನರಿಗೆ ಮಾಡಿಕೊಡಲು ಆಗುತ್ತಿರಲಿಲ್ಲ. ಅಷ್ಟೊಂದು ಜನ ಬರುತ್ತಿದ್ದರು. ಆ ಸಮಯದಲ್ಲಿ ಬಂದು ಯಾರಿಗಾದರೂ ಬೇಸರವಾಗಿದ್ದರೆ ಸಾರಿ ಅಂತ ಚಂದ್ರು ಅವರು ಹೇಳಿದ್ದಾರೆ.
ಒಮ್ಮೆಗೆ ಹೋಗಬೇಡಿ: ಯಾವುದೇ ಹೋಟೆಲ್ ಇಲ್ಲ ಆಹಾರದ ಪದಾರ್ಥ ಫೇಮಸ್ ಆದ ಮೇಲೆ ಕೂಡಲೇ ಅಲ್ಲಿಗೆ ಒಂದೇ ಸಲ ಹೋಗಬೇಡಿ. ಆ ಹೋಟೆಲ್ ಮತ್ತು ಫುಡ್ ಅಲ್ಲೇ ಇರುತ್ತೆ. ನೀವು ಒಂದೇ ಸಲ ಅಲ್ಲಿಗೆ ಹೋದರೆ ಹೋಟೆಲ್‌ನವರಿಗೆ ನಿಬಾಯಿಸಲು ಆಗಲ್ಲ. ನಿಧಾನಕ್ಕೆ ಹೋಗಿ ಒಂದೇ ದಿನ ಹೋಗಬೇಡಿ ಅಂತ ಚಂದ್ರು ಅವರು ಮನವಿ ಮಾಡಿದ್ದಾರೆ.
ಮುಂದುವರಿದು ನಾನು ಯಾವುದೇ ಪೌಡರ್ ಮಾಡಿಲ್ಲ. ಕೆಲವರು ಚಂದ್ರು ಬೆಳ್ಳುಳ್ಳಿ ಕಬಾಬ್ ಅಂತಲೂ ಮಾಡಿದ್ದಾರೆ. ನಾನು ಯಾವುದೇ ರೀತಿ ಪೌಡರ್ ಪರಿಚಯಿಸಿಲ್ಲ. ಆ ರೀತಿ ಮಾಡಬೇಡಿ. ನನ್ನ ಯಾವುದೇ ಪದಾರ್ಥ, ಪೌಡರ್ ಇಲ್ಲ ಪ್ರಾಡೆಕ್ಟ್ ಇಲ್ಲ. ಯಾರಾದರೂ ನನ್ನ ಹೆಸರು ಇಟ್ಟು ಕೊಂಡು ಮಾಡಿದ್ದರೆ ದಯವಿಟ್ಟು ಅದನ್ನು ತೆಗೆದುಬಿಡಿ. ನನ್ನ ಹೆಸರನ್ನು ಮಾತ್ರ ಯಾವುದಕ್ಕೂ ಇಡಬೇಡಿ ಅಂತ ಹೇಳಿದ್ದಾರೆ.
ಬೆಳ್ಳುಳ್ಳಿ ಕಬಾಬ್ ಈಗಲೂ ಫೇಮಸ್: ಬೆಳ್ಳುಳ್ಳಿ ಕಬಾಬ್ ಈಗಲೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ ಅಂತ ಚಂದ್ರು ಅವರು ಹೇಳಿದ್ದಾರೆ. ಬೆಳ್ಳುಳ್ಳಿ ಕಬಾಬ್ ತಿನ್ನುವುದಕ್ಕೆ ಈಗಲೂ ನೂರಾರು ಜನ ಬರ್ತಾರೆ. ನನ್ನ ಜೊತೆ ಸೆಲ್ಫಿ ತಗೋತಾರೆ. ಜನರೊಂದಿಗೆ ಮಾತನಾಡುವುದೇ ಖುಷಿ. ನಾವು ರುಚಿಯಲ್ಲಿ ಹಾಗೂ ಗುಣಮಟ್ಟದಲ್ಲಿ ರಾಜಿನೇ ಮಾಡಿಕೊಳ್ಳಲ್ಲ ಅಂತ ಅವರು ಹೇಳಿದ್ದಾರೆ.












Click it and Unblock the Notifications