ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜಪೇಟೆ ಬಂದ್: ಈದ್ಗಾ ಮೈದಾನ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್

|
Google Oneindia Kannada News

ಬೆಂಗಳೂರು, ಜುಲೈ12: ಈದ್ಗಾ ಮೈದಾನ ಮೈದಾನ ವಿವಾದ ಕಾರಣ ಚಾಮರಾಜಪೇಟೆ ಬಂದ್‌ಗೆ ಚಾಮರಾಜಪೇಟೆ ನಾಗರೀಕ ವೇದಿಕೆ ಮತ್ತು ಹಿಂದೂ ಸಂಘಟನೆಗಳು ಚಾಮರಾಜಪೇಟೆ ಬಂದ್‌ಗೆ ಕರೆಯನ್ನು ನೀಡಿದೆ. ಚಾಮರಾಜಪೇಟೆ ನಾಗರೀಕರು ಸ್ವಯಂಪ್ರೇರಿತ ಬಂದ್‌ಗೆ ಬೆಂಬಲವನ್ನು ನೀಡಲು ಕೋರಿಕೊಳ್ಳಲಾಗಿದೆ. ಚಾಮರಾಜಪೇಟೆಯಲ್ಲಿ ಪೊಲೀಸರು ಭಾರಿ ಭದ್ರತೆಯನ್ನು ನಿಯೋಜಿಸಿದ್ದಾರೆ.

ಚಾಮರಾಜಪೇಟೆ ನಾರೀಕ ವೇದಿಕೆ ಮತ್ತು ಹಿಂದೂ ಸಂಘಟನೆಗಳು ಬಂದ್ ಪೊಲೀಸರ ಅನುಮತಿಯನ್ನು ಪಡೆದುಕೊಂಡಿಲ್ಲ. ಆದರೂ ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬೆಂಬಲವನ್ನು ನೀಡಿರುವಂತೆ ಕೋರಿರುವುದರಿಂದ ಈದ್ಗಾಮೈದಾನ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಕ್ರಮವನ್ನು ಕೈಗೊಳ್ಳಲಾಗಿದೆ.

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಇಬ್ಬರು ಡಿಸಿಪಿ, 15 ಇನ್ಸಪೆಕ್ಟರ್, 50 ಸಬ್ ಇನ್ಸಪೆಕ್ಟರ್, 92 ಎಎಸ್ಐ, 385 ಸಿಬ್ಬಂದಿ, 6 ಕೆಎಸ್‌ಆರ್‌ಪಿ ತುಕಡಿಯಿಂದ 120 ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ. ಸ್ವಯಂ ಪ್ರೇರಿತ ಬಂದ್ ಆಚರಣೆಯಾಗಿರುವುದರಿಂದ ಯಾವುದೇ ಕಾರಣಕ್ಕೂ ಅಂಗಡಿ ಮುಗ್ಗಟ್ಟನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ ಎಂದು ತಿಳಿಸಲಾಗಿದೆ.

Chamarajpet Bandh Over Idgah Maidan Controversy evokes good response


ಅಂಗಡಿಗಳಿಂದ ಸ್ವಯಂ ಪ್ರೇರಿತ ಬಂದ್

ಚಾಮರಾಜಪೇಟೆಯಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿಗಳು , ಹೊಟೇಲ್‌ಗಳು ಬಂದ್ ಮಾಡಿ ಆ ಮೂಲಕ ಬಂದ್‌ಗೆ ಬೆಂಬಲವನ್ನು ಸೂಚಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳು ಶಾಲೆಗೆ ರಜೆಯನ್ನು ಘೋಷಣೆಯನ್ನು ಮಾಡಲಾಗಿದೆ. ಇನ್ನು ಈದ್ಗಾ ಮೈದಾನದ ಸುತ್ತಲು ಬಿಗಿ ಭದ್ರತೆಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶವನ್ನು ಪೊಲೀಸರು ನೀಡುತ್ತಿಲ್ಲ.

Chamarajpet Bandh Over Idgah Maidan Controversy evokes good response

ಈದ್ಗಾ ಮೈದಾನದಲ್ಲಿ ಪ್ರತಿಭಟನೆಗಿಲ್ಲ ಅವಕಾಶ

ಈದ್ಗಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶವನ್ನು ನೀಡಿರುವುದಿಲ್ಲ. ಪ್ರತಿಭಟನೆಗೆ ಮುಂದಾಗಿದ್ದ ಕೆಲವು ನಾಗರೀಕರನ್ನು ಪೊಲೀಸರು ವಶಕ್ಕೆ ಸಹ ತೆಗೆದುಕೊಂಡಿದ್ದಾರೆ.

Chamarajpet Bandh Over Idgah Maidan Controversy evokes good response

ನಾಗರೀಕರ ಒತ್ತಾಯನೇನು..?

ಈದ್ಗಾಮೈದಾನವನ್ನು ಬಿಬಿಎಂಪಿ ಸುಪರ್ದಿಗೆ ತೆಗೆದುಕೊಳ್ಳಬೇಕು, ಈದ್ಗಾ ಮೈದಾನದಲ್ಲಿ ನಮಾಜ್ ಗೆ ಅವಕಾಶ ಮಾಡಿಕೊಟ್ಟಂತೆ ಸ್ವಾತಂತ್ರ್ಯೋತ್ಸವ , ಗೌರಿ ಗಣೇಶ ಸೇರಿದಂತೆ ಇತರೆ ಆಚರಣೆಗೂ ಅವಕಾಶವನ್ನು ಮಾಡಿಕೊಡಬೇಕು ಎನ್ನಲಾಗಿತ್ತಿದೆ. ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರನ್ನು ನಾಮಕರಣ ಮಾಡಬೇಕು. ಆಟದ ಮೈದಾನವಾಗಿ ಉಳಿಯಬೇಕು, ವಕ್ಫ್ ಮಂಡಳಿಯ ಸುಪರ್ದಿಗೆ ಮೈದಾನವನ್ನು ನೀಡಬಾರದು ಎಂದು ಚಾಮರಾಜಪೇೆಟೆ ನಾಗರೀಕ ವೇದಿಕೆ ಆಗ್ರಹವನ್ನು ಮಾಡುತ್ತಿದೆ.

English summary
Chamarajpet civic forum and Hindu organizations have given a call for a Chamarajpet bandh due to the Idga Maidan Maidan dispute. Citizens of Chamarajpet are requested to support the voluntary bandh. Police have deployed heavy security in Chamarajpet, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X