ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜಪೇಟೆ: ಶಾಪಿಂಗ್‌ಗೆ ಕರೆದುಕೊಂಡು ಹೋಗಿಲ್ಲ ಎಂದು 11 ವರ್ಷದ ಬಾಲಕಿ ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಶಾಲೆಗೆ ಹೋಗಿ ವಿದ್ಯೆಯನ್ನು ಕಲಿತು ಸಮಾಜದಲ್ಲಿ ಉನ್ನತ ಹುದ್ದೆಗೆ ಹೋಗುತ್ತಾರೆ ಎಂದು ಹೆತ್ತವರು ಕನಸನ್ನು ಕಾಣುತ್ತಾರೆ. ಆದರೆ ಮಕ್ಕಳು ಮಾನಸಿಕವಾಗಿ ಎಷ್ಟು ಸೂಕ್ಷ್ಮಮತಿಗಳಾಗುತ್ತಿದ್ದಾರೆ ಎಂಬುದಕ್ಕೆ ಚಾಮರಾಜಪೇಟೆಯಲ್ಲಿ 11 ವರ್ಷದ ಪುಟ್ಟು ಹುಡುಗಿ ನೇಣಿಗೆ ಶರಣಾಗುವುದೇ ಸಾಕ್ಷಿಯಾಗಿದೆ.

ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಬೆಳೆಸಬೇಕಾದ ಪರಿಸ್ಥಿತಿಯಲ್ಲಿ ಪೋಷಕರಿದ್ದಾರೆ. ಚಾಮರಾಜಪೇಟೆಯಲ್ಲಿ ಹೆತ್ತವರು ತನ್ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ 11 ವರ್ಷದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಬೆಂಗಳೂರು ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಶೀಘ್ರದಲ್ಲೇ ಆಧಾರ್ ಸೇವಾ ಕೇಂದ್ರ ಸ್ಥಾಪನೆ ಬೆಂಗಳೂರು ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಶೀಘ್ರದಲ್ಲೇ ಆಧಾರ್ ಸೇವಾ ಕೇಂದ್ರ ಸ್ಥಾಪನೆ

ಐದನೇ ತರಗತಿ ಓದುತ್ತಿದ್ದ ವೈಶಾಲಿ

ಐದನೇ ತರಗತಿ ಓದುತ್ತಿದ್ದ 11ವರ್ಷ ವೈಶಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಬ್ಬದ ಹಿನ್ನಲೆ ಬಟ್ಟೆ ಖರೀದಿಗೆ ಪೋಷಕರು ಮುಂದಾಗಿದ್ದರು. ವೈಶಾಲಿಗೆ ಕೆಲವು ದಿನಗಳ ಹಿಂದಷ್ಟೇ ಹೆತ್ತವರು ಹೊಸ ಡ್ರಸ್ ಅನ್ನು ಕೊಡಿಸಿದ್ದರು. ಇದರಿಂದಾಗಿ ಮತ್ತೊಮ್ಮೆ ಹೊಸ ಬಟ್ಟೆ ಬೇಡ ಎಂದು ವೈಶಾಲಿಯನ್ನು ಮನೆಯಲ್ಲೆ ಬಿಟ್ಟು ಇನ್ನು ಇಬ್ಬರು ಮಕ್ಕಳನ್ನು ವೈಶಾಲಿ ಪೋಷಕರು ಕರೆದುಕೊಂಡು ಶಾಪಿಂಗ್‌ಗೆ ಹೋಗಿದ್ದರು. ಇದರಿಂದ ಮನನೊಂದಿದ್ದ ವೈಶಾಲಿ ಬೇಸರಗೊಂಡಿದ್ದಳು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

Chamarajpet: An 11-year-old girl committed suicide because her parents did not take her shopping

ಹೆತ್ತವರು ಶಾಪಿಂಗ್‌ಗೆ ಹೋಗಿದ್ದಾಗ ನೇಣಿಗೆ

ಶಾಪಿಂಗ್ ಮುಗಿಸಿ ಬಂದ ಪೋಷಕರು ಮನೆಯ ಬಾಗಿಲನ್ನು ತೆರೆಯುವಂತೆ ವೈಶಾಲಿಗೆ ಸೂಚಿಸಿದರು ಬಾಗಿಲು ತೆರೆಯಲಿಲ್ಲ. ಆ ಬಳಿಕ ಆಕೆ ನೇಣುಬಿಗಿದುಕೊಂಡಿರುವುದು ಕಿಟಕಿ ಮೂಲಕ ತಿಳಿದುಬಂದಿದೆ. ತಕ್ಷಣವೇ ಬಾಗಿಲು ತೆರೆದು ನೋಡಿದರೆ ವೈಶಾಲಿ ಸಾವನ್ನಪ್ಪಿದ್ದಳು. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೀತಿ ಪಾಠದ ಅಗತ್ಯ

ಮನೆಯಲ್ಲಿ ಮುದ್ದಾಗಿ ಬೆಳೆದಿದ್ದ ವೈಶಾಲಿಯ ಸೂಕ್ಷ್ಮ ಪ್ರಜ್ಞೆಯನ್ನು ಹೆತ್ತವರು ಗ್ರಹಿಸಬೇಕಿತ್ತು. ಮಕ್ಕಳನ್ನು ಬೆಳೆಸುವಾಗ ಕಷ್ಟನೋವು ನಲಿವುಗಳ ಪಾಠವನ್ನು ಹೇಳಿಕೊಡಬೇಕು. ಸಮಾಜದಲ್ಲಿ ಬದುಕಬೇಕೆಂದರೆ ಎಂಥ ಕಷ್ಟಗಳು ಎದುರಾಗುತ್ತವೆ ಎಂಬದನ್ನು ಶಿಕ್ಷಕರು ನೀತಿ ಪಾಠ ಹೇಳಿಕೊಡಬೇಕು. ಇಲ್ಲವಾದರೇ ಬೆಳೆಯುವ ಮಕ್ಕಳು ಮನಸ್ಥಿತಿ ಹಾಳಾಗಿ ನೇಣು ಕುಣಿಕೆಯಂಥ ಕೃತ್ಯ ಹೆಚ್ಚಾಗಬಹುದಾಗಿದೆ.

English summary
A11-year-old Vaishali, who was studying in class 5, hanged herself because she was upset that her mother didn't took for shopping to buy new clothes, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X