ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರದಿಂದ 40 ಎಲೆಕ್ಟ್ರಿಕ್ ಬಸ್ ಗಳಿಗೆ ಗ್ರೀನ್ ಸಿಗ್ನಲ್

|
Google Oneindia Kannada News

Recommended Video

ಬೆಂಗಳೂರಿನಲ್ಲಿ 40 ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಯಲಿವೆ | Oneindia Kannada

ಬೆಂಗಳೂರು ಜನವರಿ 22: ಕೇಂದ್ರ ಸರ್ಕಾರ ಬಿಎಂಟಿಸಿಯ 40 ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ಅನುಮೋದನೆ ನೀಡಿದೆ. ಬಿಎಂಟಿಸಿ ಫೇಮ್ ಇಂಡಿಯಾ' ಯೋಜನೆಯಡಿ ನಗರದಲ್ಲಿ ಎಲೆಕ್ಟ್ರಿಕ್ ಬಸ್ ಅರಂಭಿಸಲು ಉದ್ದೇಶಿಸಿರುವ ಯೋಜನೆಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಕೇಂದ್ರ ಸರ್ಕಾರ 150 ಬಸ್ ಗಳ ಪೈಕಿ ಸದ್ಯಕ್ಕೆ 40 ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಅನುಮೋದನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಈ ವರ್ಷದ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ನಲ್ಲಿ 40 ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಇನ್ನುಳಿದ 110 ಬಸ್ ಗಳಿಗೆ ಹಂತ ಹಂತವಾಗಿ ಅನುಮತಿ ಪಡೆಯಲು ಉದ್ದೇಶಿಸಲಾಗಿದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಒಂದು ವಾರದಲ್ಲಿ ಟೆಂಡರ್ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಒಂದು ವಾರದಲ್ಲಿ ಟೆಂಡರ್

ನಗರದಲ್ಲಿ 150 ಎಲೆಕ್ಟ್ರಿಕ್ ಬಸ್ ಗಳ ಸೇವೆ ನೀಡಲು ಬಿಎಂಟಿಸಿ ಹಿಂದಿನ ತಿಂಗಳು ಟೆಂಡರ್ ಕರೆದಿತ್ತು. ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿರುವ ಕೇಂದ್ರ ಸರ್ಕಾರ ಸದ್ಯಕ್ಕೆ ೪೦ ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮೋದನೆ ನೀಡಿದೆ.

ಟೆಂಡರ್ ಪ್ರಕ್ರಿಯೆ ಫೆ.19ಕ್ಕೆ ಅಂತ್ಯ

ಟೆಂಡರ್ ಪ್ರಕ್ರಿಯೆ ಫೆ.19ಕ್ಕೆ ಅಂತ್ಯ

150 ಎಲೆಕ್ಟ್ರಿಕ್ ಬಸ್ ಗಳು ಒಂದೇ ಬಾರಿಗೆ ರಸ್ತೆಗಿಳಿಯುವ ನಿರೀಕ್ಷೆಯಿತ್ತು. ಆದರೆ ಯೋಜನೆಯಲ್ಲಿರುವ ಅವಕಾಶದಂತೆ ಮೊದಲಿಗೆ ೪೦ ಬಸ್ ಗಳನ್ನು ಮಾತ್ರ ಪಡೆಯಲಾಗುತ್ತಿದೆ. ಫೆ.19ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಕೆಲವೇ ದಿನಗಳಲ್ಲಿ ಅರ್ಹ ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗುತ್ತದೆ. ಬಸ್ ಪೂರೈಸಲು ಆರು ತಿಂಗಳ ಅವಕಾಶವಿದೆ. ಈ ಅವಧಿ ಪೂರ್ಣಗೊಂಡ ಬಳಿಕವೇ ಬಸ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುತ್ತದೆ.

40 ಬಸ್ ಗಳನ್ನು ಮಾತ್ರ ಖರೀದಿ

40 ಬಸ್ ಗಳನ್ನು ಮಾತ್ರ ಖರೀದಿ

ಬಿಎಂಟಿಸಿಯು 150 ಬಸ್ ಗಳಿಗೆ ಕರೆದಿದ್ದರೂ ಈ ಒಂದೇ ಬಾರಿಗೆ ಎಲ್ಲ ಬಸ್ ಗಳನ್ನು ಪಡೆಯಲು ಸಾಧ್ಯವಿಲ್ಲ. ಈಗ ಶಾರ್ಟ್ ಮೊಬಿಲಿಟಿ ಸ್ಕೀಮ್ ನಲ್ಲಿ ೪೦ ಬಸ್ ಗಳನ್ನು ಪಡೆಯಲು ಅನುಮೋದನೆ ದೊರೆತಿದೆ. ಈ ವಿಧಾನದಲ್ಲಿ ಎಲ್ಲ ನಗರಗಳಿಗೂ 40 ಬಸ್ ಗಳನ್ನು ಖರೀದಿ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮೋದನೆ ನೀಡಲಾಗುತ್ತಿದೆ.

ಗುತ್ತಿಗೆದಾರರಿಗೆ ಅನ್ವಯಿಸುವ ಕೆಲವು ಷರತ್ತುಗಳು

ಗುತ್ತಿಗೆದಾರರಿಗೆ ಅನ್ವಯಿಸುವ ಕೆಲವು ಷರತ್ತುಗಳು

ಗುತ್ತಿಗೆಗೆ ವಿಧಿಸಿರುವ ಷರತ್ತುಗಳು: ಗುತ್ತಿಗೆದಾರರಿಗೆ ಬಿಎಂಟಿಸಿ ಕೆಲವು ಷರತ್ತುಗಳನ್ನು ವಿಧಿಸಿದೆ. 5 ವರ್ಷಗಳಲ್ಲಿ 300 ಬಸ್ ಗಳನ್ನು ಚಲಾಯಿಸಿ ಸೇವೆ ನೀಡಿದ ಅನುಭವವಿರಬೇಕು, ತಿಂಗಳಿಗೆ 25ಬಸ್ ಉತ್ಪಾದಿಸುವ ಸಾಮರ್ಥ್ಯವಿರಬೇಕು. ವಾರ್ಷಿಕ ಕನಿಷ್ಠ275 ಕೋಟಿ ರೂ. ವಹಿವಾಟು ಸಾಮರ್ಥ್ಯವಿರಬೇಕು ಎಂದು ಷರತ್ತು ವಿಧಿಸಿದೆ.

ಬಿಎಂಟಿಸಿ ಚಾಲಕರು ಎಲೆಕ್ಟ್ರಿಕ್ ಚಾಲನೆ ಮಾಡುವಂತಿಲ್ಲ

ಬಿಎಂಟಿಸಿ ಚಾಲಕರು ಎಲೆಕ್ಟ್ರಿಕ್ ಚಾಲನೆ ಮಾಡುವಂತಿಲ್ಲ

ಬಸ್ ಗಳನ್ನು ಬಿಎಂಟಿಸಿ ಚಾಲಕರು ಚಾಲನೆ ಮಾಡುವಂತಿಲ್ಲ. ಗುತ್ತಿಗೆ ಪಡೆಯುವ ಸಂಸ್ಥೆಯ ತರಬೇತಿ ನೀಡಿದ ತಮ್ಮದೇ ಚಾಲಕರನ್ನು ಇದಕ್ಕೆ ನೇಮಿಸಲಿದೆ. ಇದರ ಜತೆಗೆ ಬಿಎಂಟಿಸಿ ಡಿಪೋದಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಪ್ರತಿ ಕಿ.ಮೀ ದರ ಹಾಗೂ ವಿದ್ಯುತ್ ವೆಚ್ಚವನ್ನು ಬಿಎಂಟಿಸಿ ಭರಿಸಲಿದೆ.

10 ವರ್ಷಗಳೀಗೆ ಬಸ್ ಸೇವೆಯ ಗುತ್ತಿದೆ

10 ವರ್ಷಗಳೀಗೆ ಬಸ್ ಸೇವೆಯ ಗುತ್ತಿದೆ

10 ವರ್ಷಗಳಿಗೆ ಬಸ್ ಸೇವೆಯ ಗುತ್ತಿಗೆಗೆ ನೀಡಲಾಗುತ್ತಿದೆ. ಟೆಂಡರ್ ನಿಯಮದಂತೆ ಏಳು ವರ್ಷಗಳ ಬಳಿಕ ಪ್ರತಿ ವರ್ಷ ಗುತ್ತಿಗೆ ಪರಿಶೀಲಿಸುವ ಹಾಗೂ ರದ್ದು ಪಡಿಸುವ ಪೂರ್ಣ ಅಧಿಕಾರ ಬಿಎಂಟಿಸಿಗೆ ದೊರೆಯಲಿದೆ. ಏಳು ವರ್ಷಗಳ ನಂತರ ಸೇವೆಯಲ್ಲಿ ತೃಪ್ತಿಕರ ಎನಿಸಿದರೆ ಮಾತ್ರ ಗುತ್ತಿಗೆ ಮುಂದುವರೆಸಬಹುದು.

English summary
Urban Development department of Government of India has given green signal under FAME India project to purchase 40 electrical buses instead of 150 proposal sent by BMTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X