₹79,000 ಕೋಟಿ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಿಗೆ: ಭಾರತೀಯ ಸೇನೆ ಮತ್ತಷ್ಟು ಬಲಿಷ್ಟ: BJP Karnataka
ಬೆಂಗಳೂರು, ಅಕ್ಟೋಬರ್ 24: ಭಾರತೀಯ ಮೂರೂ ರಕ್ಷಣಾ ಪಡೆಗಳ ಯುದ್ಧ ಸನ್ನದ್ಧತೆಯ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಿಗಾಗಿ, ಒಟ್ಟು 79,000 ಕೋಟಿ ರೂಪಾಯಿ ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುಮತಿ ನೀಡಿದೆ. ಈ ಮೂಲಕ ವಿದೇಶಿ ರಾಷ್ಟ್ರಗಳ ಮುಂದೆ ಭಾರತ ಮತ್ತಷ್ಟು ಬಲಿಷ್ಟವಾಗಿದೆ.
ಭಾರತೀಯ ಸೇನೆಗೆ ಕೇಂದ್ರ ಸರ್ಕಾರ ಒದಗಿಸುತ್ತಿರುವ ಶಸ್ತ್ರಾಸ್ತ್ರಗಳ ಕುರಿತು ಕರ್ನಾಟಕ ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದೆ. ಸೇನಾ
ವಸ್ತು ನಿರ್ವಹಣಾ ಕ್ರೇನ್‌ಗಳು ಸೇರಿದಂತೆ ನಾಗ್ ಕ್ಷಿಪಣಿ ವ್ಯವಸ್ಥೆ (ಟ್ರ್ಯಾಕ್ಡ್) Mk-II (NAMIS), ನೆಲ ಆಧಾರಿತ ಮೊಬೈಲ್ ELINT ವ್ಯವಸ್ಥೆ (GBMES), ಮತ್ತು ಹೈ ಮೊಬಿಲಿಟಿ ವಾಹನಗಳು (HMV ಗಳು) ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅದರ ಒಟ್ಟು ವೆಚ್ಚ 79,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಭಾರತೀಯ ನೌಕಾಪಡೆಗೆ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್ಸ್ (LPD ಗಳು) 30 ಎಂಎಂ ನೇವಲ್ ಸರ್ಫೇಸ್ ಗನ್‌ಗಳು (NSG ಗಳು), ಅಡ್ವಾನ್ಸ್ಡ್ ಲೈಟ್ ವೇಟ್ ಟಾರ್ಪಿಡೊಗಳು (ALWT ಗಳು), ಎಲೆಕ್ಟ್ರೋ-ಆಪ್ಟಿಕಲ್ ಇನ್ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕ್ ಸಿಸ್ಟಮ್‌ಗಳು ಮತ್ತು 76ಎಂಎಂ ಸೂಪರ್ ರ‍್ಯಾಪಿಡ್ ಗನ್ ಮೌಂಟ್‌ಗಾಗಿ ಸ್ಮಾರ್ಟ್ ಮದ್ದುಗುಂಡುಗಳ ಖರೀದಿಯನ್ನು ಅನುಮೋದಿಸಲಾಗಿದೆ. ಎಲ್‌ಪಿಡಿಗಳ ಖರೀದಿಯು ಭಾರತೀಯ ನೌಕಾಪಡೆಯು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯೊಂದಿಗೆ ಉಭಯಚರ ಕಾರ್ಯಾಚರಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.
ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್‌ಗಳು ಸೇನೆ ಮತ್ತು ವಾಯುಪಡೆಯೊಂದಿಗೆ ಜಂಟಿ ಉಭಯಚರ ದಾಳಿ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಭಾರತೀಯ ನೌಕಾಪಡೆಗೆ ತುಂಬಾ ಉಪಯುಕ್ತವಾಗುವ ಸಾಧನ ಖರೀದಿ ಆಗಲಿವೆ. ಶಾಂತಿಪಾಲನಾ ಕಾರ್ಯಾಚರಣೆಗಳು, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕಾಗಿಯೂ ನಿಯೋಜಿಸಬಹುದಾಗಿದೆ.
ಈ ಮೂಲಕ ಭಾರತೀಯ ಮೂರು ಸೇನೆಗಳು ಆಧುನಿಕರಣಗೊಳ್ಳುತ್ತಿದೆ. ಶಸ್ತ್ರಾಸ್ತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಅನೇಕ ಶಸ್ತ್ರಾಸ್ತ್ರಗಳು ಬಳಕೆ ಆಗಿದ್ದವು. ಅದರ ಬೆನ್ನಲ್ಲೆ ಮತ್ತಷ್ಟು ಯುದ್ಧೋಪಕರಣಗಳ ಖರೀದಿ ಚರ್ಚೆ ನಡೆದಿತ್ತು.












Click it and Unblock the Notifications