ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂತ್ರಸ್ತೆಯೇ ಬಂದು ದೂರು ನೀಡಿದಾಗ ಮಾತ್ರ ಬಂಧನ ಸಾಧ್ಯ: ಪ್ರಲ್ಹಾದ್ ಜೋಶಿ

|
Google Oneindia Kannada News

ಬೆಂಗಳೂರು, ಮಾರ್ಚ್ 29: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಪ್ರಕರಣದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದ್ದಾರೆ.

ಸಂತ್ರಸ್ತೆಯೇ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು, ಯಾರನ್ನು ಬಿಡಬೇಕು ಎನ್ನುವ ಬಗ್ಗೆ ಸರ್ಕಾರವು ಎಸ್‌ಐಟಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಈ ಕುರಿತು ಗೃಹ ಸಚಿವರ ಕುರಿತು ಚರ್ಚೆ ನಡೆಸಿದ್ದೇನೆ ಎಂದರು.

Breaking: ಸಿಡಿ ಪ್ರಕರಣ: ಎಸ್‌ಐಟಿ ಮುಂದೆ ಹಾಜರಾದ ರಮೇಶ್ ಜಾರಕಿಹೊಳಿ Breaking: ಸಿಡಿ ಪ್ರಕರಣ: ಎಸ್‌ಐಟಿ ಮುಂದೆ ಹಾಜರಾದ ರಮೇಶ್ ಜಾರಕಿಹೊಳಿ

ಈ ಪ್ರಕರಣಕ್ಕೆ ಸಂಬಂಧಿಸಿದವರು ಬಂದು ದೂರು ನೀಡುವವರೆಗೆ ಯಾರನ್ನು ಬಂಧಿಸಲು ಆಗುತ್ತೆ, ಪ್ರಕರಣದಲ್ಲಿ ಸಂತ್ರಸ್ತೆ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಇದರಲ್ಲಿ ಡಿಕೆ ಶಿವಕುಮಾರ್ ಅವರ ಹೆಸರೂ ಕೂಡ ಇದೆ. ಆದರೆ ಎಸ್‌ಐಟಿ ಯಾರನ್ನೂ ಬಂಧಿಸಿಲ್ಲ , ವಿಚಾರಣೆ ನಡೆಸುತ್ತಿದೆ.

Central Minister Pralhad Joshi Reaction On Ramesh Jarkiholi CD Case

ತನಿಖೆಗೂ ಮೊದಲೇ ಬಂಧಿಸಲು ಒತ್ತಾಯಿಸುವುದು ಸರಿ ಅಲ್ಲ, ಯುವತಿ ದೂರು ನೀಡಿದರೆ ಎಲ್ಲವೂ ಸರಿಯಾಗಿ ತನಿಖೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಅವರ ಕಾರಿಗೆ ಚಪ್ಪಿಲಿ ಎಸೆದು ಹಲ್ಲೆಗೆ ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಯಾರ ಮೇಲೂ ಹಲ್ಲೆ ಮಾಡುವುದು ಸರಿಯಲ್ಲ.

Recommended Video

ಇಂದಿರಾ ಗಾಂಧಿ ಸರ್ಕಾರ ಇಂತಹ ಕೆಲ್ಸಾ ಮಾಡ್ತಿರ್ಲಿಲ್ಲ ! DkS | Oneindia Kannada

ಡಿಕೆಶಿಯಾಗಲೀ, ಇನ್ಯಾರ ಮೇಲಾಗಲಿ ಹಲ್ಲೆ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಇದನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಹೇಳಿದರು. ಸರಿಯಾದ ತನಿಖೆ ನಡೆಸಲು ಅವಕಾಶ ಮಾಡಿಕೊಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

English summary
Central Minister Pralhad Joshi Reaction On Ramesh Jarkiholi CD Case and SIT team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X