Get Updates
Get notified of breaking news, exclusive insights, and must-see stories!

ಸಿಡಿ ಗರ್ಲ್ ಪೋಷಕರ ಕಿಡ್ನಾಪ್ ದೂರು: ಸಂತ್ರಸ್ತ ಯುವತಿಯ ಆತ್ಮಹತ್ಯೆ ಮಾತಿನ ಮರ್ಮವೇನು?

ಬೆಂಗಳೂರು, ಮಾರ್ಚ್‌ 17 : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಿಡಿ ಗರ್ಲ್ ಕುರಿತು ಆಕೆಯ ಪೋಷಕರು ಅಪಹರಣ ದೂರು ಕೊಟ್ಟಿದ್ದಾರೆ. ತನ್ನ ಮಗಳು ಅಪಾಯದಲ್ಲಿದ್ದಾಳೆ. ಯಾರೋ ನಕಲಿ ವಿಡಿಯೋ ಮಾಡಿಸಿದ್ದಾರೆ. ನನ್ನ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ, ದಯವಿಟ್ಟು ಹುಡುಕಿ ಕೊಡಿ ಎಂದು ಪೋಷಕರು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ನಡೆದ ಒಂದು ಬೆಳವಣಿಗೆ ಗಮನಿಸಿ. ರಮೇಶ್ ಜಾರಕಿಹೊಳಿ ನನಗೆ ಮೋಸ ಮಾಡಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ ನನಗೆ ಅನ್ಯಾಯ ಮಾಡಿದ್ದಾರೆ. ಅಮೇಲೆ ವಿಡಿಯೋ ಅವರೇ ಬಿಡುಗಡೆ ಮಾಡಿದ್ದು, ನಾನು ಮತ್ತು ನನ್ನ ಪೋಷಕರು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಳು. ಈ ಎರಡು ಬೆಳವಣಿಗೆ ನೋಡಿದರೆ, ಯುವತಿ ಮಾತು ಸತ್ಯವೇ ? ಇಲ್ಲವೇ ಪೋಷಕರ ಮಾತು ಸತ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ರಾಜಕೀಯ ಸ್ವರೂಪ ಪಡೆದುಕೊಂಡಿರುವ ಈ ಪ್ರಕರಣದಲ್ಲಿ ಯುವತಿ ಹಾಗೂ ಪೋಷಕರ ಭಿನ್ನ ಹೇಳಿಕೆಗಳು ಕೆಲ ಅನುಮಾನಕ್ಕೆ ಕಾರಣವಾಗಿದೆ.

ಸಿಡಿ ಸ್ಫೋಟಗೊಂಡ ಬಳಿಕ ದಿನೇಶ್ ಕಲ್ಲಹಳ್ಳಿ ಎಂಬಾತ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯುವತಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದು ಹೇಳಿಕೆ ನೀಡಿದ ಕಲ್ಲಹಳ್ಳಿ ಪ್ರಕರಣದ ಬೆಳವಣಿಗೆ ನೋಡಿ ದೂರು ವಾಪಸು ಪಡೆದರು. ರಮೇಶ್ ಜಾರಕಿಹೊಳಿ ಇದೊಂದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದರು. ಸರ್ಕಾರ ಈ ಪ್ರಕರಣವನ್ನು ಎಸ್ಐಟಿಗೆ ವಹಿಸಿತು. ಯಾವಾಗ ಜಾರಕಿಹೊಳಿ ಸದಾಶಿವ ನಗರ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಾಯಿತೋ ವಿಡಿಯೋ ಮೂಲಕ ಸಂತ್ರಸ್ತೆ ಎನ್ನಲಾದ ಯುವತಿ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದಳು.

Ramesh Jarkiholi CD Row: Mystery Behind Victim Girl Suicide Statement and Her Parents Kidnap Complaint

''ನನಗೆ ರಮೇಶ್ ಜಾರಕಿಹೊಳಿಯಿಂದಲೇ ಅನ್ಯಾಯವಾಗಿದೆ. ಅವರೇ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಮೋಸ ಮಾಡಿದರು. ಅವರೇ ನನ್ನ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿಕೆಯನ್ನು ವಿಡಿಯೋ ಮಾಡಿ ಕಳುಹಿಸಿದ್ದರು. ಇದು ದೊಡ್ಡ ಸಂಚಲನ ಮೂಡಿಸಿತ್ತು. ಈಗಾಗಲೇ ನಾನು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನ್ನ ತಂದೆ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನನಗೆ ರಕ್ಷಣೆ ಕೊಡಿ'' ಎಂದು ಕೋರಿದ್ದಳು.

ರಕ್ಷಣೆ ಕೊಡ್ತಿವಿ.. ನೀವು ಎಲ್ಲಿದ್ದೀರೋ ಅಲ್ಲಿಗೆ ಬರ್ತೀವಮ್ಮ.. ನಿನ್ನ ವಿಳಾಸ ಕೊಡು ಹೇಳಿಕೆ ಪಡೀತಿವಿ ಅಂತ ಇಮೇಲ್ ಮೂಲಕ ಸಂದೇಶ ರವಾನಿಸಿದರೂ ಪೊಲೀಸರ ನೋಟಿಸ್ ನೋಡಿ ಯುವತಿ ಬಂದಿಲ್ಲ. ಇದರ ನಡುವೆ ಪ್ರಕರಣ ಕುರಿತು ಎಸ್ಐಟಿ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ "ಆಶ್ಲೀಲ ಸಿಡಿ ಪ್ರಕರಣ" ಹೊಸ ತಿರುವು ಪಡೆದುಕೊಂಡಿತು. ಯುವತಿಯನ್ನು ಬಳಿಸಿಕೊಂಡು ಹನಿಟ್ರ್ಯಾಪ್ ಮಾಡಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಕೆಲವರಿಗಾಗಿ ಶೋಧ ನಡೆಸುತ್ತಿದೆ. ಈಗಾಗಲೇ ಐವರನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ.

ಶಂಕಿತ ಆರೋಪಿಗಳ ಜತೆ ಯುವತಿ ಇದ್ದಾಳೆ ಎಂಬ ಮಾಹಿತಿ ಮೇರೆಗೆ ಎಸ್ ಐಟಿ ತಂಡಗಳು ಶೋಧ ಕಾರ್ಯ ಚುರುಕು ಮುಟ್ಟಿಸಿವೆ. ಯುವತಿಯ ನಡೆಯನ್ನು ಎಸ್ಐಟಿ ಪೊಲೀಸರು ಅನುಮಾನದಿಂದ ನೋಡುತ್ತಿರುವ ಈ ಸಂದರ್ಭದಲ್ಲಿಯೇ ಅಪಹರಣವಾಗಿದ್ದಾಳೆ ಎಂದು ಯುವತಿಯ ಪೋಷಕರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

Ramesh Jarkiholi CD Row: Mystery Behind Victim Girl Suicide Statement and Her Parents Kidnap Complaint


ಯುವತಿ ಪೋಷಕರು ಕೂಡ ಮಗಳ ಹಾದಿಯಲ್ಲಿಯೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನ್ನ ಮಗಳನ್ನು ಹೆದರಿಸಿ ಯಾರೋ ಇಟ್ಟುಕೊಂಡಿದ್ದಾರೆ. ಅವಳಿಂದ ಬಲವಂತದಿಂದ ವಿಡಿಯೋ ಮಾಡಿಸಿಕೊಂಡಿದ್ದಾಳೆ. ನನ್ನ ಮಗಳ ಚಿತ್ರ ಬಳಿಸಿ ವಿಡಿಯೋ ಮಾಡಿರುವ ಬಗ್ಗೆ ನಮ್ಮ ಬಳಿ ಹೇಳಿಕೊಂಡಿದ್ದಳು. ದಿನವೂ ತನ್ನ ಸಹೋದರರ ಜತೆ ಸಂಪರ್ಕದಲ್ಲಿದ್ದಳು. ಈ ವಿವಾದ ಮುಕ್ತವಾದ ಬಳಿಕ ಬರುತ್ತೇನೆ ಎಂದಳು. ಆದರೆ ನಾಲ್ಕೈದು ದಿನದಿಂದ ಪೋನ್ ಸ್ವಿಚ್‌ ಆಫ್ ಆಗಿದೆ. ಯಾರೋ ಅಪಹರಣ ಮಾಡಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ. ಇದು ಇದೀಗ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಯುವತಿ ಮೊದಲಿನ ಹೇಳಿಕೆ ಹಾಗೂ ಪೋಷಕರ ಹೇಳಿಕೆ ಗಮನಿಸಿದರೆ ಅಶ್ಲೀಲ ಸಿಡಿ ಪ್ರಕರಣಕ್ಕೆ ಹೊಸ ತಿರುವು ಕೊಡುವ ಪ್ರಯತ್ನದ ಭಾಗವಾಗಿ ಪೋಷಕರಿಂದ ದೂರು ಕೊಡಿಸದರೇ ಎಂಬ ಅನುಮಾನ ವ್ಯಕ್ತವಾಗಿದೆ. ಕಾಣೆಯಾಗಿರುವ ಬಗ್ಗೆ ದೂರು ನೀಡಿಲ್ಲ. ಬದಲಿಗೆ ಅಪಹರಣ ಬಗ್ಗೆ ಆರೋಪಿಸಿ ಕೊಟ್ಟಿರುವುದು ಗಮನಿಸಿದರೆ, ಸಂತ್ರಸ್ತ ಎನ್ನಲಾದ ಯುವತಿ ಪೋಷಕರ ಮೂಲಕ ಯುವತಿಯನ್ನು ಕರೆ ತರುವ ಪ್ರಯತ್ನ ನಡೆದಿದೆಯಾ ? ಇಲ್ಲವೇ ಈ ಮೂಲಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಡುವ ಭಾಗವಾಗಿ ಈ ದೂರು ನೀಡಿದರೇ ಎಂಬ ಅನುಮಾನ ಕಾಡುತ್ತಿದೆ.

Ramesh Jarkiholi CD Row: Mystery Behind Victim Girl Suicide Statement and Her Parents Kidnap Complaint

ಯವತಿ ಪೋಷಕರು ಬೆಳಗಾವಿ ಮೂಲದವರು. ಬಹುಶಃ ರಮೇಶ್ ಜಾರಕಿಹೊಳಿ ಕಡೆಯವರೇ ಸಂಪರ್ಕಿಸಿ, ನಿಮ್ಮ ಮಗಳಿಗೆ ರಕ್ಷಣೆ ಕೊಡ್ತೇವೆ. ಆಕೆಗೆ ಅನ್ಯಾಯ ಮಾಡಿಲ್ಲ ಎಂಬ ಭರವಸೆ ಕೊಟ್ಟು ಪೋಷಕರ ಮೂಲಕ ಯುವತಿಯನ್ನು ಕರೆತರುವ, ಆಕೆಯಿಂದ ವಾಸ್ತವ ಹೇಳಿಸುವ ಪ್ರಯತ್ನಕ್ಕೆ ಜಾರಕಿಹೊಳಿ ಸಹೋದರರು ಕೈ ಹಾಕಿದರೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಯವತಿ ಸಿಡಿ ಸ್ಫೋಟ ಮುನ್ನ ಸಂತ್ರಸ್ತೆ ಎನ್ನಲಾದ ಯುವತಿ ಪೋಷಕರು ಮನೆ ಖಾಲಿ ಮಾಡಿದ್ದರು. ಇದನ್ನು ಗಮನಿಸಿದರೆ, ಯುವತಿಯೇ ಹೀಗೊಂದು ದೂರು ಕೊಡಲು ಪೋಷಕರಿಗೆ ಸೂಚಿಸಿದರೇ ಎಂಬ ಸಂಶಯವೂ ಹುಟ್ಟಿಕೊಳ್ಳುತ್ತದೆ.

Ramesh Jarkiholi CD Row: Mystery Behind Victim Girl Suicide Statement and Her Parents Kidnap Complaint

ಈ ಪ್ರಕರಣದಲ್ಲಿ ಕೈ ಮೀರಿದ ಬೆಳವಣಿಗೆ ಆಗಿದೆ. ಯುವತಿ ಏನಾದರೂ ನೇರವಾಗಿ ಬಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದಲ್ಲಿ ಇನ್ನೊಂದು ಆಯಾಮ ತೆರೆದುಕೊಳ್ಳಲಿದೆ. ದಿನ ಕಳೆದಂತೆ ಸಿಡಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಹೊಸ ಹೊಸ ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಇಟ್ಟಿರುವ ಎಸ್ಐಟಿ ತಂಡ ಶಂಕಿತರ ಬ್ಯಾಂಕ್ ವಿವರಗಳನ್ನು ಕಲೆ ಹಾಕಲು ಮುಂದಾಗಿದೆ. ಎಸ್ಐಟಿ ತನಿಖೆ ಬಿಗಿಯಾಗುತ್ತಿದ್ದಂತೆ ಯುವತಿಯ ಅಪಹರಣದ ದೂರು ಕೂಡ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಎಸ್ಐಟಿ ತನಿಖೆ ಹಾದಿ ನೋಡಿದರೆ ಜಾರಕಿಹೊಳಿ ಇರಲಿ, ಸಂತ್ರಸ್ತೆ ಇರಲಿ, ಅಸಲಿ ಸತ್ಯವನ್ನು ಮರೆ ಮಾಚಲು ಸಾಧ್ಯವೇ ಆಗದ ಸ್ಥಿತಿ ಎದುರಾಗುವುದು ಗ್ಯಾರೆಂಟಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+