• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿ.ಡಿ ಪ್ರಕರಣ; ತಮ್ಮ ಮೇಲಿನ ಆರೋಪಕ್ಕೆ ಡಿಕೆಶಿ ನೀಡಿದ ಉತ್ತರ...

|

"ನನಗೂ ಈ ಸಿ.ಡಿ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಸುಮ್ಮನೆ ಆರೋಪ ಮಾಡಿರುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ತಮ್ಮ ಮೇಲಿನ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆಯಿಂದಲೂ ಡಿಕೆಶಿ ಹೆಸರು ಪ್ರಸ್ತಾಪವಾಗುತ್ತಿದೆ. ಸಿ.ಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಯುವತಿಯು ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಡಿಕೆಶಿ ಹೆಸರೂ ಪ್ರಸ್ತಾಪವಾಗಿತ್ತು. ಆ ಬೆನ್ನಲ್ಲೇ ಯುವತಿ ಪೋಷಕರು ಹೇಳಿಕೆ ನೀಡಿದ್ದರು. ಈ ಸಂಬಂಧ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ರಮೆಶ್ ಜಾರಕಿಹೊಳಿ, "ನನ್ನ ಬಳಿಯೂ 11 ಸಾಕ್ಷಿಗಳಿವೆ. ಸಿ.ಡಿ ಪ್ರಕರಣದ ಹಿಂದಿರುವ ಮಹಾನಾಯಕ ಯಾರು ಎನ್ನುವುದನ್ನು ಸಂತ್ರಸ್ತ ಯುವತಿಯ ಪೋಷಕರೇ ಒಪ್ಪಿಕೊಂಡಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು. ಆರೆ ತಮ್ಮ ವಿರುದ್ಧ ಈ ಆರೋಪವನ್ನು ಡಿಕೆಶಿ ಅಲ್ಲಗಳೆದಿದ್ದಾರೆ. ಮುಂದೆ ಓದಿ...

"ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ"

ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅವರ ವೈಯಕ್ತಿಕ ಸಮಸ್ಯೆಯನ್ನು ಅವರೇ ಸರಿಮಾಡಿಕೊಳ್ಳಬೇಕು. ಪಾಪ ಅವರು ಒತ್ತಡದಲ್ಲಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಎಲ್ಲಾ ಆರೋಪಗಳಿಗೆ ಉತ್ತರಿಸುತ್ತಾ ಕೂರಲು ನನಗೆ ಆಗುವುದಿಲ್ಲ ಎಂದಿದ್ದಾರೆ. ಎಲ್ಲದಕ್ಕೂ ಕಾನೂನು ಇದೆ. ಅಧಿಕಾರಿಗಳು ಇದ್ದಾರೆ. ಅವರು ಎಲ್ಲವನ್ನೂ ತನಿಖೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಜಾರಕಿಹೊಳಿ

ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಜಾರಕಿಹೊಳಿ

ಡಿ.ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ನೇರ ವಾಗ್ದಾಳಿ ನಡೆಸಿದರು. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್ ಆಗಿದ್ದಾನೆ. ನಾನು ನಿಜವಾದ ಗಂಡಸು. ಅವನು ಗಂಡಸೇ ಅಲ್ಲ ಎಂದು ಕಿಡಿಕಾರಿದ್ದಾರೆ. ಇಂಥ ರಾಜಕಾರಣ ಮಾಡುವುದಕ್ಕಿಂತ ನಿವೃತ್ತಿ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ನಾಯಕರೂ ಡಿಕೆಶಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಸಿಡಿ ಕೇಸ್: ಮಹಾನಾಯಕ ರಾಜಕೀಯಕ್ಕೆ 'ನಾಲಾಯಕ್' ಎಂದ ರಮೇಶ್ ಜಾರಕಿಹೊಳಿ!

ಡಿಕೆಶಿ ವಿರುದ್ಧ ಆರೋಪ ಮಾಡಿದ್ದ ಯುವತಿ ಪೋಷಕರು

ಡಿಕೆಶಿ ವಿರುದ್ಧ ಆರೋಪ ಮಾಡಿದ್ದ ಯುವತಿ ಪೋಷಕರು

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತೆ ಎನ್ನಲಾದ ಯುವತಿಯ ಪೋಷಕರು ಹಾಗೂ ಸಹೋದರರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ನನ್ನ ಮಗಳು ಅಪಾಯದಲ್ಲಿದ್ದಾಳೆ. ಆಕೆ ಅಮಾಯಕಿ. ಯಾರ ಜತೆಗೆ ಇದ್ದಾಳೋ ನಮಗೆ ಗೊತ್ತಿಲ್ಲ. ಯಾರದ್ದೋ ಮಾತು ಕೇಳಿ ಈ ರೀತಿ ಹೇಳಿಕೆ ನೀಡುತ್ತಿರಬಹುದು. ಆ ವಿಡಿಯೋದಲ್ಲಿ ಇರುವುದು ನಾನಲ್ಲ ಎಂದು ಹೇಳಿದ್ದಳು. ದಯವಿಟ್ಟು ಆಕೆಗೆ ರಕ್ಷಣೆ ನೀಡಿ ಎಂದು ಪೋಷಕರು ಕಣ್ಣೀರು ಹಾಕಿದ್ದರು. ನನ್ನ ಸಹೋದರಿಯನ್ನು ಡಿಕೆಶಿ ಒತ್ತೆಯಾಳು ಮಾಡಿಕೊಂಡಿದ್ದಾರೆ. ಹೆಣ್ಣು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ಆರೋಪಿಸಿದ್ದರು.

  DK ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ | Oneindia Kannada
  ವೈರಲ್ ಆಗಿದ್ದ ಯುವತಿಯ ಆಡಿಯೋ

  ವೈರಲ್ ಆಗಿದ್ದ ಯುವತಿಯ ಆಡಿಯೋ

  ಶುಕ್ರವಾರ ವೈರಲ್ ಆಗಿದ್ದ ಯುವತಿ ಆಡಿಯೋದಲ್ಲಿ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದರು. ಆ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ಆದರೆ ನನ್ನನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದರು.

  English summary
  "I dont have any link to Ramesh jarkiholi CD Row. This is his personal problem" reacted KPCC president DK Shivakumar to Ramesh Jarkiholi allegation,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X