• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಸಿಬಿ ಬಲೆಗೆ ಬಿದ್ದ ದಡಿಯಾ ಉಮೇಶ, ಸೈಕೋ ಅಂಡ್ ಗ್ಯಾಂಗ್

|

ಬೆಂಗಳೂರು, ಆಗಸ್ಟ್ 14: ದರೋಡೆಗೆ ಸಜ್ಜಾಗಿದ್ದ ರೌಡಿ ಉಮೇಶ ಅಲಿಯಾಸ್ ದಡಿಯಾ ಉಮೇಶ ಅಲಿಯಾಸ್ ಲಗ್ಗೆರೆ ಉಮೇಶ ಮತ್ತು ಆತನ ಸಹಚರರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದವರು ಬಂಧಿಸಿದ್ದು, ಮಾರಕಾಸ್ತ್ರಗಳ ವಶ ಪಡಿಸಿಕೊಂಡಿದ್ದಾರೆ.

ಆಗಸ್ಟ್ 13.08.2019 ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ರೌಡಿ ಉಮೇಶ ಹಾಗೂ ಆತನ ಸಹಚರರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಯುಧಗಳನ್ನು ಇಟ್ಟುಕೊಂಡು ದಾರಿಹೋಕರನ್ನು ಗುರ್ತಿಸಿ ಅವರನ್ನು ತಡೆದು ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ದರೋಡೆ ಮಾಡಲು ಸಜ್ಜಾಗಿರುವ ಬಗ್ಗೆ ಸಿ.ಸಿ.ಬಿಗೆ ಮಾಹಿತಿ ಸಿಕ್ಕಿತ್ತು.

ದರೋಡೆಗೆ ಹೊಂಚು ಹಾಕಿದ್ದ 6 ಮಂದಿ ಸೆರೆ ಸಿಕ್ಕಿದ್ದು ಹೇಗೆ ಗೊತ್ತಾ?

ಈ ಮಾಹಿತಿಯಾಧಾರದ ಮೇಲೆ ಕಾರ್ಯಪ್ರವೃತ್ತರಾದ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಮೇಲ್ಕಂಡ ಸ್ಥಳದ ಮೇಲೆ ದಾಳಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಲ್ಲಿ ದರೋಡೆಗೆ ಸಂಚುರೂಪಿಸಿದ ಸಜ್ಜಾಗಿದ್ದ ಆಸಾಮಿಗಳಾದ,

1. ಉಮೇಶ @ ದಡಿಯ ಉಮೇಶ @ ಲಗ್ಗೆರೆ ಉಮೇಶ ಬಿನ್ ಚನ್ನಯ್ಯ 37ವರ್ಷ, ಪಾವಸಂದ್ರ, ಕಸಬಾ ಹೋಬಳಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ

2. ಸಿದ್ದಾರ್ಥ್‍ಗೌಡ @ ಸೈಕೋ 23 ವರ್ಷ, ನಂ.234, 10ನೇ ಕ್ರಾಸ್ ಉಲ್ಲಾಳು ಉಪನಗರ, ಬೆಂಗಳೂರು-91

3. ನಾಗೇಶ ಬಿನ್ ತಿಮ್ಮೇಗೌಡ 23ವರ್ಷ, ನಂ.224, 6ನೇ ಕ್ರಾಸ್, 3ನೇ ಮೈನ್, ನೀಲಗಿರಿ ತೋಪು, ಸುಂಕದಕಟ್ಟೆ, ಬೆಂಗಳೂರು-91

4. ಮನು ಬಿನ್ ಬಸವರಾಜು 25ವರ್ಷ, ನಂ.6936, 2ನೇ ಮೈನ್, 4ನೇ ಕ್ರಾಸ್, ಕಮಲಾನಗರ, ಬೆಂಗಳೂರು

ರವರುಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಮೇಲ್ಕಂಡ ಆಸಾಮಿಗಳ ವಶದಿಂದ 2 ಲಾಂಗ್, 1 ಪೆಪ್ಪರ್ ಸ್ಪ್ರೇ ಮತ್ತು 1 ದೊಣ್ಣೆ ಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಉಮೇಶ್ ಈತನು ಅನ್ನಪೂರ್ಣೇಶ್ವರಿನಗರ ಪಿ.ಎಸ್ ರೌಡಿಪಟ್ಟಿ ಆಸಾಮಿಯಾಗಿದ್ದು ಈತನ ವಿರುದ್ದ ಅನ್ನಪೂರ್ಣೇಶ್ವರಿನಗರ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗಳಲ್ಲಿ 1 ಕೊಲೆ, 1 ದರೋಡೆಯತ್ನ, 1 ಕಿಡ್ನಾಪ್ ಪ್ರಕರಣ ದಾಖಲಾಗಿರುತ್ತದೆ. ಉಳಿದಂತೆ ಸಿದ್ದಾರ್ಥಗೌಡ & ನಾಗೇಶ ಇವರುಗಳು ಸಹ ಅನ್ನಪೂರ್ಣೇಶ್ವರಿನಗರ ಪಿ.ಎಸ್ ರೌಡಿಪಟ್ಟಿ ಆಸಾಮಿಗಳಾಗಿದ್ದು, ಇವರು ಮತ್ತು ಆರೋಪಿ ಮನು ವಿರುದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಕಿಡ್ನಾಪ್ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿರುತ್ತದೆ.

ಕಾರ್ಮಿಕ ಇಲಾಖೆ ನಾಲ್ವರು ಅಧಿಕಾರಿಗಳ ಮೇಲೆ ಸಿಸಿಬಿ ದಾಳಿ

ಈ ಕಾರ್ಯಾಚರಣೆಯನ್ನು ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಅಪರಾಧರವರಾದ ಸಂದೀಪ್ ಪಾಟೀಲ್, ಐ.ಪಿ.ಎಸ್ ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ ರವರಾದ ಕುಲದೀಪ್ ಕುಮಾರ್ ಆರ್.ಜೈನ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಬಾಲರಾಜು .ಬಿ, ಎ.ಸಿ.ಪಿ, ಓಸಿಡಬ್ಲ್ಯೂ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ರವರುಗಳಾದ ಲಕ್ಷ್ಮಿಕಾಂತಯ್ಯ, ಹರೀಶ್ ಎಂ.ಆರ್, ರಾಜೀವ್ ಮತ್ತು ಸಿಬ್ಬಂದಿಯವರುಗಳು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
Bengaluru Centrral Crime Branch (CCB) team detained Dadiya Umesh and Dacoit gang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X