• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರ್ಮಿಕ ಇಲಾಖೆ ನಾಲ್ವರು ಅಧಿಕಾರಿಗಳ ಮೇಲೆ ಸಿಸಿಬಿ ದಾಳಿ

|

ಬೆಂಗಳೂರು, ಜುಲೈ 13: ಕಾರ್ಮಿಕ ಇಲಾಖೆಯ ಇಬ್ಬರು ಅಧಿಕಾರಿಗಳ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ.

ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಶಿವಾನಂದ ಹಾಗೂ ಗೋಂವಿಂದರಾಜು, ವೆಂಕಟೇಶ್,ಚೌವಾಣ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಸಿಸಿಬಿ ಪೊಲೀಸರ ದಾಳಿ: ಕಟ್ಟಡ ಹಾರಿ ಪರಾರಿಯಾದ ರೌಡಿ ಕುಣಿಗಲ್ ಗಿರಿ

ಆರೋಪಿಗಳು ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಶುಕ್ರವಾರ ಲಭ್ಯವಾಗಿತ್ತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಇಲಾಖೆಗೆ ಸೇರಿದ ಕೌಶಲ್ಯಭವನ ಕಟ್ಟದ ಸಮೀಪದ ರಸ್ತೆಯ ಬಳಿಗೆ ಹೋಗಿ ದಾಳಿ ನಡೆಸಿದ್ದಾರೆ.

ಸಂದರ್ಭದಲ್ಲಿ ಅಲ್ಲಿದ್ದ ಎನ್.ವಿ.ಗೋವಿಂದರಾಜಲು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗು ವೆಂಕಟೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು ಇವರುಗಳನ್ನು ಹಾಗು ಇವರು ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಸಮಯದಲ್ಲಿ ಇವರುಗಳ ಬಳಿಯಿದ್ದ ಅಕ್ರಮವಾಗಿ ಸಂಗ್ರಹಿಸಿದ್ದ ರೂ.13,09,500 ನಗದು ಹಣ, ಒಂದು ಲ್ಯಾಪ್‌ಟಾಪ್, 4 ಮೊಬೈಲ್ ಫೋನ್ ಹಾಗು 3 ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಎನ್.ವಿ.ಗೋವಿಂದರಾಜಲು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗು ವೆಂಕಟೇಶ, ಹಿರಿಯ ಕಾರ್ಮಿಕ ನಿರೀಕ್ಷಕರವರನ್ನು ದಸ್ತಗಿರಿ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

English summary
CCB police conducted raid on Four officials of labor department. Huge amount of cash and other things are seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X