ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಮೇಲೆ ಪೊಲೀಸ್ ಫೈರಿಂಗ್
ಬೆಂಗಳೂರು, ಮಾರ್ಚ್ 12: ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಸಿಸಿಬಿ ಇನ್ಸ್ ಪೆಕ್ಟರ್ ಎಂ.ಆರ್ ಹರೀಶ್ ಹೇಮಿ ಅಲಿಯಾಸ್ ಮರಾಠಿ ಹೇಮಿ ಕಾಲಿಗೆ ಗುಂಡಿಕ್ಕಿದ್ದಾರೆ. ಲಕ್ಷ್ಮಣನನ್ನ ಕೊಲೆ ಮಾಡಿ ಹೇಮಿ ತಲೆಮರೆಸಿಕೊಂಡಿದ್ದನು. ಇಂದು ಬೆಳಗ್ಗೆ ನಾಗರಬಾವಿಯ ಹನುಮಗಿರಿ ದೇವಸ್ಥಾನದ ಬಳಿ ಆರೋಪಿ ಪತ್ತೆಯಾಗಿದ್ದನು.
ಕುಖ್ಯಾತ ರೌಡಿ ಲಕ್ಷ್ಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ರೌಡಿ ಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಈಗಾಗಲೇ ಓರ್ವ ಆರೋಪಿ ಕ್ಯಾಟ್ ರಾಜಾ ಎರಡು ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಇದೀಗ ಆತನ ವಿಚಾರಣೆ ನಡೆಯುತ್ತಿದೆ.

ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬಂಧಿಸಲು ಹೋಗಿದ್ದಾಗ ಆರೋಪಿ ಹೇಮಿ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದನು. ಆಗ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಎಂ.ಆರ್ ಹರೀಶ್ ಅವರು ಹೇಮಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ರೌಡಿ ಲಕ್ಷ್ಮಣನನ್ನು ಮಹಾಲಕ್ಷ್ಮೀ ಲೇಔಟ್‌ನ ಇಸ್ಕಾನ್ ದೇವಸ್ಥಾನದ ಬಳಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.












Click it and Unblock the Notifications