ನಕಲಿ ಛಾಪ ಕಾಗದದ ಜಾಲ 11 ಜನ ಸಿಸಿಬಿ ಬಲೆಗೆ:1.30 ಕೋಟಿ ಸ್ಟ್ಯಾಂಪ್ ಪೇಪರ್ ವಶ

ಬೆಂಗಳೂರು, ಆಗಸ್ಟ್ 05: ಸಿಸಿಬಿ ಪೊಲೀಸರು ನಕಲಿ ಛಾಪ ಕಾಗದ ಜಾಲವನ್ನು ಬಂಧಿಸಿದ್ದಾರೆ. ಕರೀಂಲಾಲ ತೆಲಗಿ ಮಾಡ್ತಿದ್ದ ರೀತಿಯಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿಸಿ ವಂಚಿಸುತ್ತಿದ್ದ ಜಾಲ ಸಿಕ್ಕಿಬಿದ್ದಿದ್ದಾರೆ. ಇವರ ಬಳಿ ರಾಜ-ಮಹಾರಾಜ ಕಾಲದ ಛಾಪಾ ಕಾಗದ ಪ್ರತಿಗಳೆಲ್ಲಾ ಸಿಗುತ್ತವೆ. ಅಷ್ಟೆ ಅಲ್ಲ ಆಯಾ ಕಾಲಘಟ್ಟದ ಸೀಲ್​ಗಳೂ ಇವರ ಬಳಿ ಸಿಗೋದೇ ವಿಶೇಷ. ಅಷ್ಟರ ಮಟ್ಟಿಗೆ ಎಲ್ಲವನ್ನೂ ನಕಲಿ ಮಾಡುತ್ತೆ ಈ ಜಾಲ.

ನಕಲಿ ಛಾಪಾ ಕಾಗದಗಳನ್ನು ಸೃಷ್ಟಿಸಿ ಜನರಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದ ಮತ್ತೊಂದು ಜಾಲವನ್ನ ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಕಂದಾಯ ಭವನ ಆವರಣದಲ್ಲಿ ನಕಲಿ ಛಾಪಾ ಕಾಗದಗಳ ಮಾರಾಟ ಮತ್ತು ರಾಜ ಮಹಾ ರಾಜರ ಕಾಲದ ಛಾಪಾ ಕಾಗದ ಪತ್ರಗಳು ಕೂಡ ಭಾರಿ ಮೊತ್ತಕ್ಕೆ ಮಾರಾಟ ಆಗ್ತಿವೆ ಅನ್ನೋ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಮಾಡಿದಾಗ ಭರ್ಜರಿ ಬೇಟೆಯೇ ಸಿಕ್ಕಿದೆ.

ಈ ಆರೋಪಿಗಳು ನಕಲಿ ಛಾಪಾ ಕಾಗದಗಳನ್ನು ಸಿದ್ಧಪಡಿಸಿ ಅದನ್ನ ಸರ್ಕಾರಿ ಕಚೇರಿಯಲ್ಲಿ ವಿಲೇವಾರಿ ಮಾಡುವ ಕೃತ್ಯವೆಸಗಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಇನ್ನು ಸಿಸಿಬಿ ಪೊಲೀಸರು ಈ ಹಿಂದೆಯೂ ಈ ಇಂತಹದ್ದೇ ಜಾಲವನ್ನ ಭೇದಿಸಿದ್ದರು.

 11 ಆರೋಪಿಗಳನ್ನು ಬಂಧಿಸಿದ ಸಿಸಿಬಿ

11 ಆರೋಪಿಗಳನ್ನು ಬಂಧಿಸಿದ ಸಿಸಿಬಿ

ಸರ್ಕಾರ ನಿಷೇಧ ಮಾಡಿರುವ ಸ್ಟಾಂಪ್ ಪೇಪರ್​ಗಳನ್ನ ನಿಮಗೆ ಬೇಕಾದ ಹಳೆಯ ಅಂದರೆ ಹಿಂದಿನ ವರ್ಷಗಳ ಪೇಪರ್​ನಂತೆ ನಕಲಿ ಮಾಡಿಕೊಟ್ಟು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ವೆಂಕಟೇಶ್​, ವಿಶ್ವನಾಥ್​, ಶ್ಯಾಮರಾಜು, ಶಶಿಧರ, ಕರಿಯಪ್ಪ ಸೇರಿದಂತೆ ಒಟ್ಟು 11ಜನ ಆರೋಪಿಗಳನ್ನ ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

 ಬಾಂಡ್‌ಗಳಿಗೆ ತಕ್ಕಂತೆ ನಕಲಿ ಸೀಲು ಬಳಕೆ

ಬಾಂಡ್‌ಗಳಿಗೆ ತಕ್ಕಂತೆ ನಕಲಿ ಸೀಲು ಬಳಕೆ

ಛಾಪಾ ಕಾಗದ ಅಸಲಿಯತ್ತು ಹಾಗೂ ನಕಲಿತನವನ್ನು ಗುರುತಿಸೋದು ತುಂಬಾ ಕಷ್ಟಕರ. ಕೆಲವೊಂದು ಕೋಡ್​ಗಳಿಂದ ಮಾತ್ರ ಅದನ್ನು ಪತ್ತೆ ಮಾಡಬಹುದಾಗಿದೆ. ಇನ್ನು, 1990, 1995, 2002 ಹಾಗೂ 2009ನೇ ಇಸವಿಯ ಬಾಂಡ್​ ಪೇಪರ್​ಗಳು ಪತ್ತೆಯಾಗಿವೆ. ಅಲ್ಲದೆ ರಾಜ-ಮಹಾರಾಜರ ಕಾಲದ ಛಾಪಾ ಕಾಗದ ಕೂಡ ಸಿಕ್ಕಿದ್ದು, ಅದನ್ನು ಹಳೆಯ ಮಾದರಿಯ ಪೇಪರ್​ಗಳನ್ನು ಬಳಸಿ ಸೃಷ್ಟಿಸಲಾಗಿದೆಯಂತೆ. ಈ ರೀತಿಯ ನಕಲಿ ಬಾಂಡ್​ ಪೇಪರ್​ಗಳು ಆರೋಪಿಗಳು 8-10 ಸಾವಿರ ಚಾರ್ಜ್​ ಮಾಡುತ್ತಿದ್ದರು. ಆಯಾ ಬಾಂಡ್​ಗಳ ವರ್ಷಗಳಿಗೆ ತಕ್ಕಂತೆ ಹಳೆಯ ನಕಲಿ ಸೀಲ್​ಗಳನ್ನೂ ಇವರು ಸಿದ್ಧಪಡಿಸಿಕೊಂಡಿದ್ದರಂತೆ.

 ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಹೇಳಿಕೆ

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಹೇಳಿಕೆ

ಇನ್ನು 4 ಪ್ರಕರಣಗಳಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಜಿಪಿಎ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಸಿಕ್ಕಿರುವ 2 ಸಾವಿರಕ್ಕೂ ಅಧಿಕ ನಕಲಿ ಛಾಪಾ ಕಾಗದಗಳನ್ನು ಮಾರಿದ್ದರೆ ಒಂದು ಕೋಟಿ 30 ಲಕ್ಷಕ್ಕೂ ಅಧಿಕ ಹಣ ಆರೋಪಿಗಳ ಕೈ ಸೇರುತ್ತಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತಾ ಹೇಳುತ್ತಾರೆ.

 ನಕಲಿ ಜಾಲದ ಮೂಲ ಪತ್ತೆಗೆ ಹುಡುಕಾಟ

ನಕಲಿ ಜಾಲದ ಮೂಲ ಪತ್ತೆಗೆ ಹುಡುಕಾಟ

ಈ ಆರೋಪಿಗಳು ಯಾವಾಗಿನಿಂದ ಯಾರು ಯಾರಿಗೆ ಈ ರೀತಿ ನಕಲಿ ಛಾಪಾ ಕಾಗದಗಳನ್ನು ಮಾರಾಟ ಮಾಡಿದ್ದರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅದೆಷ್ಟೋ ಕರಾರು ಪತ್ರಗಳು, ರಿಜಿಸ್ಟರ್​ ಸರ್ಟಿಫಿಕೇಟ್​ಗಳು ಫೇಕ್​ ಆಗಿವೆ ಎಂದು ಊಹಿಸಲಾಗಿದೆ. ಅಲ್ಲದೆ ಆರೋಪಿಗಳು ನಕಲಿ ಛಾಪಾ ಕಾಗದಗಳನ್ನು ಎಲ್ಲೆಲ್ಲಿ ಮಾರಾಟ ಮಾಡುತ್ತಿದ್ದರು ಅಂತ ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+